ಮಲಪ್ರಭ ನದಿಯ ಅಬ್ಬರಕ್ಕೆ ಕೊಚ್ಚಿಹೋದ ಮನೆ : ಕಣ್ಣೀರು ಸುರಿಸುತ್ತಿರೋ ವೃದ್ದೆ

ಅದ್ಯಾಕೋ ಗೊತ್ತಿಲ್ಲ. ಉತ್ತರ ಕರ್ನಾಟಕದ ಜನ್ರು ಇಂದಿಗೂ ಕಣ್ಣೀರಲ್ಲೇ ಕೈ ತೊಳೆಯೋ ಪರಿಸ್ಥಿತಿ ಉಂಟಾಗಿದೆ. ಕಳೆದ ಎರೆಡು ತಿಂಗಳ ಹಿಂದಷ್ಟೇ ಮಲಪ್ರಭೆಯ ಪ್ರವಾಹ ಅಲ್ಲಿನ ಜನ್ರ ಬದುಕನ್ನೇ ಕಿತ್ತುಕೊಂಡಿದ್ದಾಳೆ. ಆದರೆ ಪ್ರವಾಹಕ್ಕೆ ಸಿಕ್ಕು ನಲುಗಿದವರ ಪರಿಸ್ಥಿತಿ ಇಂದಿಗೂ ಸುಧಾರಿಸಿಲ್ಲ. ಅದರಲ್ಲೂ ನೆಮ್ಮದಿ ಜೀವನ ಕಾಣಬೇಕಾದ ವೃದ್ಧ ಜೀವ ನರಕಯಾತನೆ‌ ಅನುಭವಿಸುತ್ತಾ ದಿನನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾಳೆ..

ಕಳೆದ ಎರೆಡು‌ ತಿಂಗಳ ಹಿಂದೇ ಮಲಪ್ರಭ ನದಿಯ ಅಬ್ಬರಕ್ಕೆ ಕೊಚ್ಚಿಹೋದ ಮನೆ…! ಕೊಚ್ಚಿಹೋದ ಬದುಕು ನೆನಸಿ ಕೊಂಡು ಕಣ್ಣೀರು ಸುರಿಸುತ್ತಿರೋ ವೃದ್ದೆ..! ಮಲಗಲು ಜಾಗವಿಲ್ಲದ ಪುಟ್ಟ ಗುಡಿಸಲಿನ ಜೀವನ ಸಾಗಿಸುತ್ತಿರೋ ವೃದ್ದೆ…! ಎಸ್.. ಕಳೆದ ಎರಡು ತಿಂಗಳ ಹಿಂದಿನ ದಿನಗಳು ಊಹಿಸಿಕೊಳ್ಳೋಕು ಸಹ ಒಂದು ಕ್ಷಣ ಭಯವಾಗುತ್ತೆ. ಹೌದು .. ಸುನಾಮಿ ಯಂಥ ಪ್ರಕೃತಿ ವಿಕೋಪಗಳನ್ನ ಕಿವಿಯಾರೆ ಕೇಳಿದ್ದ ಉತ್ತರ‌ ಕರ್ನಾಟಕದ ಜನ್ರಿಗೆ ಭೀಕರ ಪ್ರವಾಹದ ರೌದ್ರ ನರ್ತನ ಪ್ರತ್ಯಕ್ಷವಾಗಿಯೇ ಕಣ್ಣಿಗೆ ರಾಚಿ ಹೋಗಿದೆ.ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾದ ಪರಿಣಾಮ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹ ಆರ್ಭಟ‌ ಜೋರಾಯಿತು.‌ ಇದ್ರಿಂದ ಗದಗ ಜಿಲ್ಲೆ ನರಗುಂದ ತಾಲೂಕಿನ ವಾಸನ ಗ್ರಾಮದ ವೃದ್ಧೆಯೊಬ್ಬಳು ಪ್ರವಾಹಕ್ಕೆ ತನ್ನ ಮನೆ ಮಠ ಕಳೆದುಕೊಂಡು ಬೀದಿಗೆ‌ ಬಂದಿದ್ದಾಳೆ. ೬೦ ವರ್ಷದ ಸಂಕಮ್ಮ ಅನ್ನೋ ಈ ವೃದ್ಧೆಗೆ ಹಿಂದೆ ಮುಂದೆ ಯಾರೂ ಇಲ್ಲ. ವಾಸ ಮಾಡಲಿಕ್ಕೆ ಅಂತ ಇದ್ದ ಮನೆಯನ್ನೂ ಸಹ ಪ್ರವಾಹ ಕೊಚ್ಚಿಕೊಂಡು ಹೋಗಿದೆ. ಅದಕ್ಕೆ ಪರಿಹಾರವಾಗಿ ಜಿಲ್ಲಾಡಳಿತವೇನೋ ಸದ್ಯ ಪರಿಹಾರ‌ ನೀಡ್ತಿದೆ. ಆದರೆ ಎ ಗ್ರೇಡ್ ನಲ್ಲಿ ಪರಿಹಾರ ನೀಡಬೇಕಾದ ಅಧಿಕಾರಿವರ್ಗ ಸಂತ್ರಸ್ಥೆಗೆ ಬಿ ಗ್ರೇಡ್ ನೀಡಿದೆ. ಬಿ ಗ್ರೇಡ್ ನಲ್ಲಿ ವೃದ್ದೆಗೆ ಬರೋ ಪರಿಹಾರ ಕೇವಲ ಒಂದೇ ಲಕ್ಷ ರೂಪಾಯಿ.‌ ಹೀಗಾಗಿ ಸಂಪೂರ್ಣ ನೆಲಕಚ್ಚಿರೋ ಮನೆಯನ್ನು ಒಂದು ಲಕ್ಷದಲ್ಲಿ ನಾನು ಹೇಗೆ ಪುನರ್ ನಿರ್ಮಿಸಿಕೊಳ್ಳಲಿ. ನನಗ್ಯಾವ ದುಡ್ಡು‌ಬೇಡ. ನೀವೆ ನನಗೆ ಮನೆ ಕಟ್ಟಿ ಕೊಟ್ಟು‌ಬಿಡಿ ಅಂತ ಅಧಿಕಾರಿವರ್ಗಕ್ಕೆ ಅಂಗಲಾಚತ್ತಾ ಕಣ್ಣೀರು ಸುರಿಸುತ್ತಿದ್ದಾಳೆ.. ಈ ವೃದ್ದೆ ಕಣ್ಣೀರಿಗೂ ಬೆಲೆ ಕೊಡದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾಳೆ ವೃದ್ದೆ..

ಸದ್ಯ ವೃದ್ಧೆ ಸಂಕಮ್ಮಳಿಗೆ ತಗಡಿನ‌ ಶೆಡ್ ಸಹ ದೊರೆತಿಲ್ಲ. ಹೀಗಾಗಿ ತಾಡಪಾಲ್ ನ ಪುಟ್ಟ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾಳೆ. ಗುಡಿಸಲು ತುಂಬಾ ಮನೆಯ ಗೃಹೋಪಯೋಗಿ ವಸ್ತು ಇಟ್ಟುಕೊಂಡು ಮಲಗೋಕು ಜಾಗ ಸಾಕಾಗದೇ ಪರದಾಟತ್ತಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ದಿನನಿತ್ಯ ಜೀವನ ದುಡ್ಡುತ್ತಿದ್ದಾಳೆ. ಆದ್ರೆ ಜಿಲ್ಲಾಡಳಿತ ಮಾತ್ರ ಎ ಗ್ರೇಡ್ ನಲ್ಲಿದ್ದವರಿಗೆ ಮಾತ್ರ ಶೆಡ್ ನೀಡಲಾಗುತ್ತೆ. ವೃದ್ಧೆ ಮನೆ ಸಂಪೂರ್ಣವಾಗಿ ಬಿದ್ರು ಸಹ ಹ ವೃದ್ಧೆಗೆ ಬಿ ಗ್ರೇಡ್‌ ನೀಡಲಾಗಿದೆ. ಹೀಗಾಗಿ ಅಧಿಕಾರಿವರ್ಗ ಮಾನವೀಯತೆ ಮರೆತು ಕೆಲಸ ಮಾಡಿದೆ. ವೃದ್ಧೆ ತಾಡಪಾಲ್ ಗುಡಿಸಲು ಕಟ್ಟಿಕೊಂಡು ಜೀವನ ನಡೆಸ್ತಿದಾಳೆ.‌ ತನ್ನ ಮನೆ ಸಾಮಗ್ರಿಗಳನ್ನೆಲ್ಲ ಅದೇ ತಾಡಪಾಲ್ ನೆರಳಿನಲ್ಲಿ ಕಾಪಾಡಿಕೊಳ್ತಿದಾಳೆ. ಜೋರಾದ ಮಳೆ ಗಾಳಿಗೆ ಅವುಗಳೂ ಸಹ ಹಾಳಾಗಿ ಹೋಗ್ತಿವೆ. ವೃದ್ಧೆ ಮನೆ ಸಂಪೂರ್ಣ ನೆಲಕಚ್ಚಿರೋದು ಕಣ್ಣಿಗೆ ಕಾಣ್ತಿದ್ರೂ ಸಹ ಬಿ ಗ್ರೇಡ್ ಅಂತ ಹೇಳಿ ವೃದ್ಧೆಗೆ ದಿಕ್ಕು ತೋಚದಂತೆ ಮಾಡಿದ್ದಾರೆ ಅಧಿಕಾರಿಗಳು. ಒಂಟಿ ಜೀವಕ್ಕೆ ಒಂದು ಲಕ್ಷ ಕೊಟ್ಟು ಮನೆ ಕಟ್ಟಿಕೋ ಅಂದ್ರೆ ಆ ವೃದ್ಧೆ‌ ಏನು ಮಾಡೋಕೆ ಸಾಧ್ಯ ಅಂತ ಸ್ಥಳೀಯ ಪ್ರಶ್ನೆಯಾಗಿದೆ. ಸದ್ಯ ವೃದ್ದೆ ಗೆ ತಾತ್ಕಾಲಿಕವಾಗಿ ಇರೋಕ್ಕೆ ಜಿಲ್ಲಾಡಳಿತ ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು..

ವೃದ್ಧೆ ಸಂಕಮ್ಮ ದಿನನಿತ್ಯ ಕಣ್ಣಿರಲ್ಲಿ ದಿನ ದೂಡ್ತಿದ್ರೂ ಸಹ ಜಿಲ್ಲಾಡಳಿತ ತಾತ್ಕಾಲಿಕ‌ ವ್ಯವಸ್ಥೆಯ‌ನ್ನಾದ್ರೂ ಸಹ ಮಾಡಿಲ್ಲ. ವೃದ್ಧೆ‌ ಅ‌ನ್ನೋ ಮಾನವೀಯತೆಗೆ ಬೆಲೆ ಕೊಟ್ಟು ಜಿಲ್ಲಾಡಳಿತ ಸದ್ಯದ ಮಟ್ಟಿಗಾದ್ರೂ ತಗಡಿನ ಶೆಡ್ ವ್ಯವಸ್ಥೆ ಮಾಡ್ಲಿ. ಎ ಗ್ರೇಡ್ ಬಿಗ್ರೇಡ್ ಅಂತ ಹೇಳಿ ವೃದ್ಧೆ ಜೀವನವನ್ನ ದುಡ್ಡಿನಲ್ಲಿ ಅಳೆಯೋ ಬದಲು ಆಕೆಗೆ ಅಂತಿಮ ಸೂರಿನ ವ್ಯವಸ್ಥೆ ಮಾಡಿ ಮಾನವೀಯ‌ ಧರ್ಮ ಮೆರೆಯಲಿ ಅನ್ನೋದು ನಮ್ಮ ಆಶಯ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights