ಮಳೆ ಅಬ್ಬರಕ್ಕೆ ಕೊಡಸಳ್ಳಿ ಜಲಾಶಯದ ಮೇಲ್ಭಾಗದ ಗುಡ್ಡ ಕುಸಿತ..

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಅಲ್ಪ ಕಮ್ಮಿಯಾದರೂ ಅದರ ಪ್ರಭಾವ ಮಾತ್ರ ಈವರೆಗೂ ಬಾಧಿಸುತ್ತಲಿದೆ. ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದ ಗುಡ್ಡ ಕುಸಿತಗೊಂಡಿದೆ.

ಗುಡ್ಡ ಕುಸಿತದಿಂದ ಜಲಾಶಯದ ಮೇಲ್ಭಾಗಕ್ಕೆ ಹಾನಿಯಾಗಿದ್ದು ಜೋಯಿಡಾ ಭಾಗದ ಬಿರ್ಕೊಲ ಗ್ರಾಮಕ್ಕೆ ಹೋಗುವ ಡ್ಯಾಮ್ ನ ಮೇಲ್ಬಾಗದ ರಸ್ತೆಯಲ್ಲಿ ಹಲವು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಡ್ಯಾಮ್ ನಲ್ಲಿ 27754.00ಕ್ಯೂಸೆಕ್ಸ್ ನೀರು ಒಳಹರಿವು ಹಾಗೂ 24165.0 ಕ್ಯೂಸೆಕ್ಸ್ ನೀರು ಹೊರಹರಿವು ಇದೆ.

ಕಳೆದ 24 ಘಂಟೆಯಲ್ಲಿ ೨೦ ಮಿಲೀ ಮೀಟರ್ ಮಳೆಯಾಗಿದ್ದು ಹೆಚ್ಚಿನ ಮಳೆಯಾದಲ್ಲಿ ಡ್ಯಾಮ್ ಗೆ ತೊಂದರೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಜಲಾಶಯದ ಭಾಗ ಅಪಾಯದಲ್ಲಿದ್ದು  ಗುಡ್ಡ ಕುಸಿತ ಹಿನ್ನಲೆಯಲ್ಲಿ ಕೆ.ಪಿ.ಸಿ.ಯವರು ಸ್ಥಳೀಯರಿಗೆ ರಸ್ತೆ ಸಂಚಾರ ಸ್ಥಗಿತ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights