ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಆರೋಪ ಪ್ರಕರಣ : ರೇಖಾ ಕಾಂತಿ ವಿರುದ್ಧ ಪ್ರಕರಣ ದಾಖಲು

ಬಾಗಲಕೋಟೆಯ ಜಮಖಂಡಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಆರೋಪ ಪ್ರಕರಣದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರೇಖಾ ಕಾಂತಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ರಮೇಶ್ ಎಂಬುವರು ಮಕ್ಕಳನ್ನು ಸಾಂತ್ವನ ಕೇಂದ್ರದಲ್ಲಿರಿಸಿಕೊಂಡಿದ್ದ ರೇಖಾ ಕಾಂತಿ, ವಾಪಸ್ ಮನೆಗೆ ಕಳುಹಿಸಲು ಹಣ ಪೀಕಿದ ಆರೋಪವನ್ನು ರಮೇಶ್ ಭಜಂತ್ರಿ  ಎಂಬುವವರು ಮಾಡಿದ್ದರು. ಸದ್ಯ ರಮೇಶ್ ಭಜಂತ್ರಿ ಅವರೇ ದೂರಿನನ್ವಯ ಪ್ರಕರಣ ದಾಖಲಾಗಿದೆ.

ರೇಖಾ ಕಾಂತಿ ೨೦ಸಾವಿರ ಹಣದ ಬೇಡಿಕೆ ಇಟ್ಟಿದ್ದಳು. ಬಳಿಕ ೧೦ಸಾವಿರ ಹಣ ಪಡೆದು ಮಕ್ಕಳನ್ನು ಕಳುಸಿದ್ರು ಅನ್ನೋ ದೂರು ದಾಖಲಿಸಲಾಗಿದೆ. ಮಕ್ಕಳ ಕಳ್ಳ ಸಾಗಾಣಿಕೆ, ಅನಧಿಕೃತ ವೃದ್ಧಾಶ್ರಮ ನಡೆಸ್ತಿದ್ದ ರೇಖಾ ಕಾಂತಿ, ಸಾಂತ್ವನ,ವೃದ್ದಾಶ್ರಮದಲ್ಲಿ ವೃದ್ಧರು, ಹೆಣ್ಣು ಮಕ್ಕಳನ್ನು ಅನ್ಯ ಕೆಲ್ಸಕ್ಕೆ ದುರ್ಬಳಕೆ ಮಾಡಿಕೊಳ್ತಾಯಿದ್ದರಂತೆ.

ಶ್ರೀ ಹನುಮಾನ್ ಗ್ರಾಮೀಣಾಭಿವೃದ್ಧಿ ಸಂಘದಡಿಯಲ್ಲಿ ನಡೆಯುತ್ತಿದ್ದ ಸಾಂತ್ವನ ಹಾಗೂ ವೃದ್ಧಾಶ್ರಮ ಕೇಂದ್ರವನ್ನು ಪ್ರಕರಣ ಹಿನ್ನಲೆಯಲ್ಲಿ ಸಂಸ್ಥೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಪ್ಪು ಪಟ್ಟಿಗೆ ಸೇರಿಸಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ತಲೆಮರಿಸಿಕೊಂಡ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರೇಖಾ ಕಾಂತಿ ಸೇರಿ ಪ್ರಶಾಂತ ಭಜಂತ್ರಿ, ಸುಜಾತ ಭಜಂತ್ರಿ ಎಂಬುವರ ವಿರುದ್ಧ ಕೇಸ್ ದಾಖಲಾಗಿದೆ.

ಅಕ್ಟೋಬರ್ ೨೩ರಂದು ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡು ಮುಂದುವರೆದ ತನಿಖೆ ನಡೆಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights