ಮಾನವನ ಮುಖ ಹೋಲುವ ವಿಶೇಷ ಕೀಟ ಪತ್ತೆ- ಎಲ್ಲಿ ಗೊತ್ತಾ?

ಮಾನವನ ಮುಖವನ್ನು ಹೋಲುವ ವಿಶೇಷ ಕೀಟವೊಂದು ವಿಜಯಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ ಪಿಲೆಕೆಮ್ಮ ನಗರದ ಈಶ್ವರ ಹೆಬ್ಬಾಳ ಅವರ ಮನೆಯಲ್ಲಿ ಈ ಅಪರೂಪದ ಕೀಟ ಕಂಡು ಬಂದಿದೆ. ಮಾನವನ ಮುಖವನ್ನು ಹೋಲುವ ಈ ಕೀಟ ನೋಡುಗರ ಗಮನವನ್ನು ಸೆಳೆಯುತ್ತಿದೆ.

ಇಂದು ಬೆಳಗ್ಗೆ ಮನೆ ಮುಂದಿನ ಗಿಡದಲ್ಲಿ ಕೂತಿದ್ದ ಈ ಕೀಟವನ್ನು ಕಂಡು ಅಚ್ಚರಿಗೊಂಡ ಈಶ್ವರ ಹೆಬ್ಬಾಳ, ಅದರ ಚಿತ್ರವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights