ಮೈಸೂರು ಅರಮನೆ ಆಯುಧಪೂಜೆಗೆ ಜನಸಾಗರ : 10ದಿನದಲ್ಲಿ ಒಂದೂವರೆ ಕೋಟಿ ದಾಟಿದ ಮೃಗಾಲಯ ಆದಾಯ

ಮೈಸೂರು ದಸರಾ ಅರಮನೆ ಆಯುಧಪೂಜೆಗೆ ಜನಸಾಗರವೇ ಹರಿದು ಬಂದಿದೆ. ಅಷ್ಟೇ ಅಲ್ಲ ಮೈಸೂರು ಮೃಗಾಲಯಕ್ಕೆ ದಾಖಲೆಯ ಪ್ರವಾಸಿಗರು ಆಗಮಿಸಿದ್ದಾರೆ. ಪ್ರವಾಸಿಗರ ಆಗಮನದಿಂದ ಲಕ್ಷ ಲಕ್ಷ ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಹಾಗಾದ್ರೆ ಮೈಸೂರು ಮೃಗಾಲಯಕ್ಕೆ ಎಷ್ಟು ಜನ ಭೇಟಿ ನೀಡಿದ್ದಾರೆ..? ಎಷ್ಟು ಹಣ ಸಂಗ್ರಹವಾಗಿದೆ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

2ದಿನಕ್ಕೆ ಒಟ್ಟು 58,659 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಎರಡೇ ದಿನಕ್ಕೆ ಬರೋಬ್ಬರಿ 58ಲಕ್ಷದ 5 ಸಾವಿರ ದಾಖಲೆಯ ಹಣ ಸಂಗ್ರಹವಾಗಿದೆ ಎಂದು ಮೃಗಾಲಯದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರವಾಸಿಗರ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ 14ಲಕ್ಷದ 91ಸಾವಿರ ಹೆಚ್ಚಿನ ಹಣ ಸಂಗ್ರಹವಾಗಿದೆ.  ದಸರೆಯ 10ದಿನದಲ್ಲಿ ಬರೋಬ್ಬರಿ 1ಕೋಟಿ 59ಲಕ್ಷದ 76ಸಾವಿರ ಹಣ ಸಂಗ್ರಹವಾಗಿ ದಾಖಲೆ ಸೃಷ್ಟಿಯಾಗಿದೆ.

2 ವರ್ಷದಲ್ಲಿ ದ್ವಿಗುಣಗೊಂಡ ಮೃಗಾಲಯ ಟಿಕೆಟ್ ಆದಾಯ 10ದಿನದಲ್ಲಿ ಒಂದೂವರೆ ಕೋಟಿ ದಾಟಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights