ಮೋದಿ ರಾಜ್ಯಕ್ಕೆ ಬಂದೇ ಕೊಡಬೇಕಂತೇನಿದೆ? : ನಮೋ ನೆರೆ ವೀಕ್ಷಣೆಗೆ ಬಾರದನ್ನ ಸಮರ್ಥಿಸಿಕೊಂಡ RSS ಮುಖಂಡ

ರಾಜ್ಯದ ನೆರೆ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಬಾರದಿರೋದನ್ನು ಬಾಗಲಕೋಟೆಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದೇ ಕೊಡಬೇಕಂತೇನಿದೆ? ಅಮಿತ್ ಷಾ ಬಂದಿದ್ರು,ವರದಿ ಕೊಟ್ಟಿದ್ದಾರೆ. ಪ್ರತಿ ಹಂತದಲ್ಲೂ ಮೋದಿಯವ್ರು ಬರಬೇಕಂದ್ರೆ ಅವ್ರು ಪ್ರಧಾನಿಮಂತ್ರಿ. ಮೋದಿ ಇಡೀ ಜಗತ್ತಿನ ವಿಶ್ವ ನಾಯಕ. ಪ್ರತಿ ಬಾರಿಯೂ ರಾಜ್ಯಕ್ಕೆ ಬರಬೇಕೆಂದು ಅಪೇಕ್ಷಿಸೋದು ಯಾಕೆ? ಏನು ಬರಬೇಕು,ಅದು ಬಂದಿದೆ ಎಂದಿದ್ದಾರೆ ಕಲ್ಲಡ್ಕ ಪ್ರಭಾಕರ ಭಟ್ .

ರಾಜ್ಯದ ನೆರೆಗೆ ಕೇಂದ್ರದ 1200ಕೋಟಿ,ಕೊಟ್ಟಿದ್ದು ಕಡಿಮೆ ಅನ್ನೋ ವಿಚಾರಕ್ಕೆ ಮಾತನಾಡಿದ ಭಟ್ ಹಂತ ಹಂತದಲ್ಲಿ ಅನುದಾನ ಕೊಡ್ತಾರೆ. ಹಲವ್ರು ಕೇಂದ್ರದಿಂದ ಪರಿಹಾರ ಬಂದಿಲ್ಲವೆಂದು ಬೊಬ್ಬೆ ಹೊಡಿಯುತ್ತಿದ್ರು. ಐದು ರಾಜ್ಯಗಳಲ್ಲೂ ನೆರೆಯಾಗಿದೆ. ಅದನ್ನು ಯೋಚನೆ ಮಾಡಿ 1200ಕೋಟಿ ಬಿಡುಗಡೆ ಮಾಡಿದ್ದಾರೆ. ಇನ್ನುಳಿದಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಕೇಂದ್ರ ಸರ್ಕಾರ ಜನಪರ ಸರ್ಕಾರ. ಕಳೆದ ಐದು ವರ್ಷಗಳಿಂದ ಜನಪರ ಕೆಲ್ಸ ಮಾಡ್ತಾ ಬಂದಿದೆ. ನೆರೆಗೆ ಪರಿಹಾರ ಬರೋದು ತಡವಾಯ್ತು ಅಂತ ಬೊಬ್ಬೆ ಯಾಕಿಷ್ಟು. ಕೇಂದ್ರ ಸರ್ಕಾರ ಹಣ ಇಟ್ಟುಕೊಂಡು ಏನ್ರಿ ಮಾಡ್ತಾರೆ. ಹಂತ ಹಂತದಲ್ಲಿ ಬಿಡುಗಡೆ ಮಾಡ್ತಾರೆ. ಮುಂದೆಯೂ ಬರುತ್ತೇ ಗಡಿಬಿಡಿ ಮಾಡ್ಬೇಡಿ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ. ಕೇಂದ್ರ ಸರ್ಕಾರ ನೆರೆಗೆ ಸ್ಪಂದಿಸಿದಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸಿಎಂ ಬಿಎಸ್ವೈಗೆ ಮೋದಿ ಸ್ಪಂದಿಸುತ್ತಿಲ್ಲ, ನಾನು ಹೋದಾಗ ಭೇಟಿಯಾಗ್ತಿದ್ರು-ಎಚ್ ಡಿ ಕೆ ಹೇಳಿಕೆ ವಿಚಾರ ಮಾತನಾಡಿದ ಭಟ್, ಕೇಂದ್ರ ಸರ್ಕಾರ ಸ್ಪಂದಿಸ್ತಿಲ್ಲ ಅಂತ ಅವತ್ತು ಬೊಬ್ಬೆ ಹೊಡೆದ ಮನುಷ್ಯ ಎಚ್ ಡಿ ಕೆ. ಇವತ್ತು ಯಾಕೆ ಈ ರೀತಿ ಹೇಳ್ತಿದ್ದಾರೆ. ಬಿಎಸ್ವೈ ಗೆ ಸ್ಪಂದಿಸದೇ ಹೋಗಿದ್ರೆ 1200ಕೋಟಿ ಬಂದಿರೋದು ಹೇಗೆ? ಅವ್ರ ಹತ್ತಿರ ಹೋಗಿದ್ದಾರೆ, ಮಾತನಾಡಿದ್ದಾರೆ,1200ಕೋಟಿ ಬಂದಿದೆ. ಅವತ್ತು ಎಚ್ ಡಿಕೆ ಒಳ್ಳೆಯ ಪ್ರಧಾನಿ, ಬಿಜೆಪಿ ರಾಷ್ಟ್ರಾಧ್ಯಕ್ಷ ,ಒಳ್ಳೆಯ ಸತ್ಕಾರ,ಸ್ಪಂದನೆ ಸಿಕ್ತು ಅಂತ ಹೇಳಲಿಲ್ಲ ಯಾಕೆ?

ರಾಜಕಾರಣಕ್ಕಾಗಿ ಎಚ್ ಡಿಕೆ ಹೇಳಿಕೆ ಕೊಡ್ತಿದ್ದಾರೆ. ಎಚ್ ಡಿ ಕೆ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ. ಮೊನ್ನೆ ಪ್ರವಾಹವಾದಾಗ ಎಚ್ ಡಿ ಕೆ ಎಲ್ಲಿ ಹೋಗಿದ್ರು. ಸಿದ್ದರಾಮಯ್ಯ, ದೇವೇಗೌಡ ಪ್ರವಾಹಪೀಡಿತ ಪ್ರದೇಶಕ್ಕೆ ಹೋಗಿದ್ರಾ..? ದೇವೇಗೌಡ್ರು ಒಂದೊಳ್ಳೆ ಕೆಲ್ಸ ಮಾಡಿದ್ದಾರೆ. ನಾನು ನೋಡಿರುವ ಪ್ರವಾಹ ಪೀಡಿತರ ಬಳಿಹೋದ ಸಿಎಂ ಬಿಎಸ್ವೈ ಎಂದು ಎಚ್ ಡಿಡಿ ಹೇಳಿದ್ರು. ಇದನ್ನು ಹೇಳುವ ಯೋಗ್ಯತೆ,ಎಚ್ ಡಿ ಕೆಗಿಲ್ಲ ಎಂದರು.

ರಾಜ್ಯದ ಖಜಾನೆ ಖಾಲಿ -ಸಿಎಂ ಬಿಎಸ್ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್-ಜೆಡಿಎಸ್ ಸರ್ಕಾರ ಖಜಾನೆ ಖಾಲಿ ಮಾಡ್ದೆ ಹೋಗ್ತಾರಾ ಅವ್ರು. ಕಾಂಗ್ರೆಸ್-ಜೆಡಿಎಸ್ ಖಜಾನೆ ಖಾಲಿ ಮಾಡ್ದೇ ಹೋಗಿರೋ ಇತಿಹಾಸ ಇಲ್ಲ.ಮೈತ್ರಿ ಸರ್ಕಾರ ಖಜಾನೆ ಖಾಲಿ ಮಾಡಿಯೇ ಹೋಗಿದೆ,ಇದ್ರಲ್ಲಿ ಎರಡು ಪ್ರಶ್ನೆಯಿಲ್ಲ. ಖಜಾನೆ ಮತ್ತೆ ತುಂಬುತ್ತೆ. ಹಿಂದೆ ಬಿಎಸ್ವೈ ಸಿಎಂ ಆಗಿದ್ದಾಗ ಖಜಾನೆ ತುಂಬಿದ್ದು ನೋಡಿ ಕಾಂಗ್ರೆಸ್, ಜೆಡಿಎಸ್ ನವ್ರಿಗೆ ಆಶ್ಚರ್ಯವಾಗಿತ್ತು. ಇಷ್ಟೋಂದು ತೆರಿಗೆ ಸಂಗ್ರಹವಾಗುವದಾ,ಜನ್ರಿಗೆ ಕೊಡೋದು ಅಂತ ಆಶ್ಚರ್ಯ. ಹಿಂದೆ ಸಂಗ್ರಹವಾದ ತೆರಿಗೆ ಕಾಂಗ್ರೆಸ್, ಜೆಡಿಎಸ್ ಜೇಬಿಗೆ ಹೋಗ್ತಾಯಿತ್ತು.

ಬಿಎಸ್ವೈ ದೊಡ್ಡ ದೊಡ್ಡ ಯೋಜನೆ ಜಾರಿ ಮಾಡಿದ್ರು. ಬಿಎಸ್ವೈ ಗೆ ತೆರಿಗೆ ಕೊಟ್ಟವ್ರು ಜನ್ರು, ಕಾಂಗ್ರೆಸ್, ಜೆಡಿಎಸ್ ನವ್ರಿಗೆ ತೆರಿಗೆ ಕೊಟ್ಟವ್ರು ಜನ್ರು. ಹಾಗಾದ್ರೆ ಇವ್ರ ಕಾಲದಲ್ಲಿ ತೆರಿಗೆ ಎಲ್ಲಿ ಹೋಗುತ್ತಿತ್ತು. ಬಿಎಸ್ವೈ ತೆರಿಗೆ ಸೋರಿಕೆಯನ್ನ ತಡೆದ್ರು‌‌.

ಬಿಎಸ್ವೈ,ನಳೀನ್ ಕುಮಾರ್ ಕಟೀಲ್ ಮಧ್ಯೆ ಭಿನ್ನಮತ ವಿಚಾರ ಮಾತನಾಡಿದ, ಬಿಎಸ್ವೈ, ಕಟೀಲ್ ಒಟ್ಟಿಗೆ ಇದ್ದರೆ. ಕಟೀಲ್ ಚೆನ್ನಾಗಿ ಪಕ್ಷ ಕಟ್ಟುತ್ತಾರೆ. ಬಿಎಸ್ವೈ ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ. ಹಾಗಂತ ಬಿಎಸ್ವೈ ಹೇಳಿದ್ದಾರೆಯೇ? ಇದನ್ನು ಮಾಧ್ಯದವ್ರೇ ಸೃಷ್ಟಿ ಮಾಡ್ತಿರೋದು. ಹಾಗೆನಿಲ್ಲ ಬಿಎಸ್ವೈ, ಕಟೀಲ್ ಚೆನ್ನಾಗಿ ಇದ್ದಾರೆ ಎಂದಿದ್ದಾರೆ ಕಲ್ಲಡ್ಕ.

ರಾಮ ಮಂದಿರ ತೀರ್ಪು ವಿಚಾರಕ್ಕೆ ಮಾತನಾಡಿ, ನೂರಕ್ಕೆ ನೂರು ರಾಮಮಂದಿರ ಕಟ್ಟುತ್ತೇವೆ. ರಾಮಮಂದಿರ ಪರ ಸುಪ್ರೀಂ ತೀರ್ಪು ಕೊಡಲೇ ಬೇಕು. ಅದಕ್ಕೆ ಇನ್ನೊಂದು ದಾರಿಯೇ ಇಲ್ಲ. ಎಲ್ಲಾ ದಾಖಲಾತಿಗಳು ನಮ್ಮಪರವಿವೆ. ಈಗ ರಾಮನ ಮೂರ್ತಿ ಇರುವ ಜಾಗ ರಾಮ ಹುಟ್ಟಿದ ಜಾಗ ಅಂತ ಹೈಕೋರ್ಟ್ ಕೊಟ್ಟಿದೆ. ಇದನ್ನು ಸುಪ್ರೀಂ ಕೋರ್ಟ್ನ ಮುಸ್ಲಿಂ ನ್ಯಾಯಾಧೀಶರೊಬ್ರು ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ಅದನ್ನು ಬದಲು ಮಾಡೋದು ಸಾಧ್ಯವಿಲ್ಲ. ಮೂರು ತುಂಡು ಮಾಡಿದ್ದನ್ನು ಒಂದು ಮಾಡಿಕೊಡುವ ಕೆಲ್ಸವಾಗ್ಬೇಕು. ಅದು ನಮ್ಮಪರ ತೀರ್ಪು ಸಿಗುತ್ತೆ. ರಾಮಮಂದಿರ ಕಟ್ಟಿಕೊಡುವ ಕೆಲ್ಸವಾಗುತ್ತೆ ಎಂದು  ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights