ಯಾವ ಯಾವ ಖಾತೆ ಹಂಚಿಕೆಯಾಗಲ್ಲ..? ಸಚಿವರಿಗೆ ಬಿಗ್ ಶಾಕ್

ರಾಜ್ಯ ರಾಜಕಾರಣದಲ್ಲಿ ಇಷ್ಟು ದಿನ ಸಂಪುಟ ರಚನೆಯ ಗೊಂದಲ ಸೃಷ್ಟಿಯಾಘಿದ್ದರೆ, ಸದ್ಯ ಖಾತೆ ಹಂಚಿಯೆ ಖ್ಯಾತೆ ಶುರುವಾಗಿದೆ. 17 ಸಚಿವರಿಗೆ ಯಾವ ಖಾತೆ ಹಂಚಿಯಾಗಲಿದೆ..? ಯಾರಿಗೆ ಯಾವ ಖಾತೆಯ ಮೇಲೆ ಆಸೆ ಇದೆ? ಇಷ್ಟ ಪಟ್ಟ ಖಾತೆನೇ ಸಿಗುತ್ತಾ..? ಅದ್ರಲ್ಲೂ ಅಸಮಧಾನ ಆರಂಭವಾಗುತ್ತಾ..? ಇದೆಲ್ಲವೂ ಒಂದು ಇಂಟ್ರಸ್ಟಿಂಗ್. ಈಗ ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಪ್ರಭಾವಿಗಳಿಗೆ ಬಿಗ್ ಶಾಕ್ ಎದುರಾಗಿದೆ.

ಹೌದು… ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳಾಗಿದ್ದು, ಒಂದು ತಿಂಗಳ ಬಳಿಕ ಖಾತೆ ಹಂಚಿಕೆ ಮಾಡಲಾಗುತ್ತಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಿದ್ದಾರೆ. ಖಾತೆ ಹಂಚಿಕೆಯಲ್ಲಿ ಭಾರೀ ಲೆಕ್ಕಾಚಾರ ಹಾಕುತ್ತಿರುವ ಸಿಎಂ ಯಡಿಯೂರಪ್ಪ ಪ್ರಮುಖ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ.

ಇಂಧನ, ಅಬಕಾರಿ, ಹಣಕಾಸು, ವೈದ್ಯಕೀಯ, ಲೋಕೋಪಯೋಗಿ ಖಾತೆ ಹಂಚಿಕೆ ಮಾಡದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪ್ರಮುಖ ಖಾತೆ ಹಂಚಿಕೆ ಮಾಡದಿರಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಈಗಾಗಲೇ ಕೆಲವು ಪ್ರಮುಖ ಖಾತೆಗಳ ಮೇಲೆ ಪ್ರಭಾವಿ ಸಚಿವರು ಕಣ್ಣಿಟ್ಟಿದ್ದು, ಇವರೊಂದಿಗೆ ಅನರ್ಹ ಶಾಸಕರಿಗೂ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಅಸಮಾಧಾನವಾಗುವುದು ಬೇಡವೆಂದು ಪ್ರಮುಖ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights