ರಂಗೇರಿದ ಕೆ.ಆರ್‌.ಪೇಟೆ ಉಪಚುನಾವಣೆ : ನಾರಾಯಣಗೌಡ ಗೆಲ್ಲಿಸಲು ಸಿಎಂ ನ್ಯೂ ಸ್ಟಾಟರ್ಜಿ

ಮಂಡ್ಯದ ಕೆ.ಆರ್‌.ಪೇಟೆ ಉಪಚುನಾವಣೆ ದಿನದಿಂದ ಸಾಕಷ್ಟು ರಂಗು ಪಡೆದುಕೊಳ್ಳುತ್ತಿದೆ. ಮೂರು ಪಕ್ಷಗಳು ತಮ್ಮ ಮುಖಂಡರನ್ನು ಗೆಲ್ಲಿಸಬೇಕೆಂದು ಹಲವು ಸ್ಟಾಟರ್ಜಿ ಮಾಡ್ತಾ ಇದ್ದಾರೆ. ಹೀಗೆ ಸಿಎಂ ಯಡಿಯೂರಪ್ಪ ಕೂಡ ಒಂದು ಋಣ ತೀರಿಸಬೇಕು ಎಂದು ತಮ್ಮ ಅಭ್ಯರ್ಥಿ ಗೆಲ್ಲಿಸಬೇಕೆಂದು ತಂತ್ರ ಮಾಡ್ತಾ ಇದಾರೆ.

ಹೌದು! ಸದ್ಯ ಹಳೆ ಮೈಸೂರು ಭಾಗದ ಕೆಆರ್‌ಪೇಟೆ ಉಪಚುನಾವಣೆಯನ್ನು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪ್ರತಿಷ್ಠೆಗೆ ಬಿದ್ದು, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹಲವು ರಣತಂತ್ರಗಳನ್ನು ರೂಪಿಸುತ್ತಿದೆ. ಅದೇ ರೀತಿ ಸಿಎಂ ಯಡಿಯೂರಪ್ಪ ಕೂಡ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸ ಬೇಕೆಂದು ಪಣತೊಟ್ಟಿದ್ದಾರೆ. ಇದಕ್ಕೆ ಕಾರಣ ಸಿಎಂ ಯಡಿಯೂರಪ್ಪ ಅವರು ಹೇಳುವ ಕಾರಣ ನಾನು ನನ್ನ ಹುಟ್ಟೂರು ಕ್ಷೇತ್ರದ ಋಣ ತೀರಿಸಲು ಎಂದು ಹೇಳ್ತಾರೆ. ನಾನು ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆದರು ಸಹ, ನಂಗೆ ಜನ್ಮ ನೀಡಿದ್ದು ಕೆಆರ್‌ಪೇಟೆ ತಾಲೂಕಿನ ಬೂಕನಕೆರೆ. ಹೀಗಾಗಿ ನಾನು ಕೆಆರ್‌ಪೇಟೆ ಋಣ ತೀರಿಸಬೇಕು, ಆದ್ದರಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು, ಈ ಮೂಲಕ ತಾಲೂಕಿನ ಋಣ ತೀರಿಸಬೇಕು ಎಂದುಕೊಂಡಿದ್ದಾರೆ.

ಯಡಿಯೂರಪ್ಪ ಅವರು ತಮ್ಮ ಕೆಆರ್‌ಪೇಟೆ ತಾಲೂಕಿನ ಋಣ ತೀರಿಸಬೇಕೆಂಬ ಬಯಕೆಯಿಂದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಬೇಕೆಂದು ರಣತಂತ್ರ ಮಾಡ್ತಾ ಇದಾರೆ. ಒಟ್ಟಾರೆ ಯಡಿಯೂರಪ್ಪ ಅವರು ತನ್ನ ಹುಟ್ಟುರಿನಲ್ಲಿ ಕಮಲವನ್ನು ಅರಳಿಸುವ ಮೂಲಕ ಪ್ರಥಮ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಖಾತೆ ತೆರೆಯಬೇಕೆಂಬ ಕನಸನ್ನು ಹೊತ್ತಿದ್ದಾರೆ. ಆದ್ರೆ ಮತದಾರ ಪ್ರಭು ಎಷ್ಟರ ಮಟ್ಟಿ ಆಶೀರ್ವಾದ ಮಾಡುತ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights