ರಣಾಂಗಣವಾಗ್ತಿದೆ ಸಕ್ಕರೆನಾಡಿನ ಉಪಚುನಾವಣಾ ಕಣ : ಬಿಜೆಪಿ ಅಭ್ಯರ್ಥಿಗೆ ಜೀವ ಭಯದ ಆತಂಕ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮತದಾನ ಹತ್ತಿರವಾಗ್ತಿದ್ದಂತೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ರಾಜಕೀಯ ಅಖಾಡ ದ್ವೇಷಕ್ಕೆ ತಿರುಗಿದ್ದು ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ನಾಮಪತ್ರ ಸಲ್ಲಿಕೆ ದಿನ ಬಿಜೆಪಿ‌  ಅಭ್ಯರ್ಥಿ ನಾರಾಯಣಗೌಡ ಮತ್ತು ಸಚಿವ ಮಾಧುಸ್ವಾಮಿ ಮೇಲೆ ಹಲ್ಲೆ ಯತ್ನ ಸೇರಿದಂತೆ ಚಪ್ಪಲಿ ತೂರಾಟ ನಡೆದಿರೋದಿ ಚುನಾವಣೆ ಸುಗಮವಾಗಿ ನಡೆಯೋ ಅನುಮಾನ ವ್ಯಕ್ತವಾಗಿದ್ದು ಮಿಲ್ಟ್ರಿಯೋಧರನ್ನು ಕರೆಸಿ ಚುನಾವಣೆ ಪರಿಸ್ಥಿತಿ‌ ನಿರ್ಮಾಣವಾಗಿದ್ರೆ, ಬಿಜೆಪಿ ಅಭ್ಯರ್ಥಿಗೆ ಜೀವ ಭಯ ಎದುರಾಗಿದೆ.

ಹೌದು ! ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ‌. ನಾಮಪತ್ರ ಸಲ್ಲಿಕೆ ದಿನ ನಾಮಪತ್ರ ಸಲ್ಲಿಸಲು ಬಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮತ್ತು ಸಚಿವ ಮಾಧುಸ್ವಾಮಿ ಮೇಲೆ ಹಲ್ಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಯತ್ನ ಸೇರಿದಂತೆ ಆತಂಕ ಸೃಷ್ಟಿಸಿದ್ದು ಚುನಾವಣೆ ಶಾಂತವಾಗಿ ನಡೆಯುವ ಅನುಮಾನ‌ ವ್ಯಕ್ತವಾಗಿದೆ. ಸ್ವತಃ ಬಿಜೆಪಿ ಅಭ್ಯರ್ಥಿ ತನಗೆ ಜೀವ ಭಯದ ಆತಂಕ ವ್ಯಕ್ತಪಡಿಸಿದ್ದು ಘಟನೆಯಿಂದ ತಾಲೂಕಿನ ಶಾಂತಿ ಸುವ್ಯವಸ್ಥೆಗೆ ಭಂಗುಂಟಾಗಿದೆ. ಜೆಡಿಎಸ್ ಗೂಂಡಾ ಸಂಸ್ಕೃತಿ‌ ಮೂಲಕ ತಾಲೂಕಿನಲ್ಲಿ ಭೀತಿಯ ವಾತಾವರಣ ನಿರ್ಮಿಸಿದ್ದಾರೆಂದು‌ ಗಂಭೀರ ಆರೋಪಿಸಿದ್ದಾರೆ.

ಇನ್ನು ನಾಮಪತ್ರ ಸಲ್ಲಿಕೆ ದಿನ ಆದ ಘಟನೆಯಿಂದಾಗಿ ತಾಲೂಕಿನಲ್ಲಿ ಶಾಂತಿ‌ ಸುವ್ಯವಸ್ಥೆ ಹದಗೆಟ್ಟಿರೋ ಮಾಹಿತಿ ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಇದ್ರಿಂದ ಎಚ್ಚತ್ತ ಜಿಲ್ಲಾಡಳಿತ ಇದೀಗ ಶಾಂತಿಯುತ ಚುನಾವಣೆಗಾಗಿ ಕೇಂದ್ರದಿಂದ ಮಿಲ್ಟ್ರಿ ಪಡೆ ಕರೆಸಲು ಕೇಂದ್ರಕ್ಕೆ ಪತ್ರ ಬರೆದಿದೆ.ಅಲ್ದೆ ಹಲ್ಲೆ ಸಂಬಂಧ ಚುನಾವಣಾ ಆಯೋಗಕ್ಜೆ ಬಿಜೆಪಿ ಪಕ್ಷ ದೂರು ನೀಡಿರೋದ್ರಿಂದ ಅಭ್ಯರ್ಥಿಗೆ ಪೊಲೀಸ್ ಭದ್ರತೆ ನೀಡಿದ್ದಾರೆ. ಅಲ್ದೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ನಿಯೋಜನೆಗಾಗಿ ಐಜಿಗೆ ಪತ್ರ ಬರೆದಿರೋದಾಗಿ ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ‌.

ಒಟ್ಟಾರೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಚುನಾವಣಾ ಅಖಾಡದಲ್ಲಿ ದ್ವೇಷದ ಹೊಗೆಯಾಡ್ತಿದ್ದು, ಅಶಾಂತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಕೇಂದ್ರದ ಮಿಲ್ಟ್ರಿ ಪಡೆ ಕರೆಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದು, ಪೊಲೀಸ್ ಬಿಗಿ ಭದ್ರತೆ ಉಪ ಚುನಾವಣೆ ನಡೆಯಲಿದೆ ಅನ್ನೋ ಮಾತು‌ ಕೇಳಿ ಬರ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights