ರಸ್ತೆ ಅಪಘಾತದಲ್ಲಿ ಪತ್ರಕರ್ತ ದುರ್ಮರಣ : ಕಸದ ಗಾಡಿಯಲ್ಲಿ ಶವ ಸಾಗಾಣಿಕೆ…!

ರಸ್ತೆ ಅಪಘಾತದಲ್ಲಿ ಪತ್ರಕರ್ತ ದುರ್ಮರಣಗೊಂಡ ಘಟನೆ ದಾವಣಗೇರಿ ತಾಲೂಕಿನ ಮಾಯಕೊಂಡ ಬಳಿಯ ಕೊಡಗನೂರು ಬಳಿ ನಡೆದಿದೆ. ಪತ್ರಕರ್ತ ಎಂ.ಸಿ.ಮಂಜುನಾಥ ಅವರ ಶವವನ್ನು ಆಪೆ ಆಟೋದಲ್ಲಿ, ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸಾಗಿಸಿರುವುದು ಮಾನವಂತವರ ಹೃದಯ ಕದಡಿದೆ.

ಮಂಜುನಾಥ್ ಸಹ್ಯಾದ್ರಿ 30,ಸಾವನ್ನಪ್ಪಿದ ಪತ್ರಕರ್ತ. ನೆನ್ನೆ ಸಂಜೆ ಕೆಲಸ ಮುಗಿಸಿ ಊರಿಗೆ ಹೋಗುವಾಗ ದುರ್ಘಟನೆ ನಡೆದಿದೆ. ಜಿಲ್ಲೆಯಲ್ಲಿ ಉತ್ತಮ ಕೆಲಸಗಾರರಾಗಿ ಹೆಸರು ಮಾಡಿದ್ದ ಮೃತ ಪತ್ರಕರ್ತ, ಹಾವೇರಿ ಜಿಲ್ಲೆಯ ಪ್ರಜಾ ವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲಾ ಪ್ರಜಾವಾಣಿ ವರದಿಗಾರ ಎಂ.ಸಿ.ಮಂಜುನಾಥ ಅವರ ಶವವನ್ನು ಆಪೆ ಆಟೋದಲ್ಲಿ ಸಾಗಿಸಲಾಗಿದೆ. ಈ ಘಟನೆ ಅತ್ಯಂತ ನೋವಿನ ಮತ್ತು ನಾಚಿಕೆಗೇಡಿನ ಹಾಗೂ ಖಂಡನಾರ್ಹ ಸಂಗತಿ. ಎರಡು ವರ್ಷದ ಹಿಂದೆ ಹೀಗೆ ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಮೌನೇಶ ಬಡಿಗೇರ ಅವರ ಶವವನ್ನು ಲಾರಿಯಲ್ಲಿ ಸಾಗಿಸಿದ್ದು ತಲೆತಗ್ಗಿಸುವ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆದದ್ದು ಕಳವಳಕಾರಿ ಸಂಗತಿ.

ಇಬ್ಬರು ಪತ್ರಕರ್ತರ ಸಾವಿನ ಸಂದರ್ಭದ ಘಟನೆಗಳು ಪತ್ರಕರ್ತರ ಸಮೂಹಕ್ಕೆ ಮಾಡಿದ ಅವಮಾನ. ಸಾವು, ಒಂದು ಗೌರವ, ಘನತೆ ಬಯಸುತ್ತದೆ. ಸಾವನ್ನು ಅವಮಾನಿಸಿದ ಘಟನೆಗೆ ಕಾರಣರಾದವರ ಮೇಲೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು.ಮುಂದೆ ಯಾವುದೇ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಗೃಹ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಬೇಕು.

ಈ ಅಮಾನವೀಯ ಘಟನೆಯ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸೂಕ್ತ  ಕ್ರಮ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ಜೊತೆಗೆ ಸಿಎಂ  ಮಂಜುನಾಥ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights