ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಹಸಿರುಕರೆಗೆ ಅದ್ಭುತ ಸ್ಪಂದನೆ….

ಮಕ್ಕಳಿಂದ ಮದುಕರವರೆಗೂ ಎಲ್ಲಾರೂ ಯಶ್ ಫ್ಯಾನ್ಸ್ ಗೋಗ್ರೀನ್ಗೆ ಹಸಿರು ನಿಶಾನೆ ತೋರಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಹಸಿರುಕರೆಗೆ ಅದ್ಭುತ ಸ್ಪಂದನೆ ವ್ಯಕ್ತವಾಗಿದ್ದು,  50,49,48, 47ನೇ ದಿನಕ್ಕೆ ಅರ್ಧ ದೇಶದ ಜೊತೆಗೆ ಬಾಂಗ್ಲಾದೇಶದ ಅಭಿಮಾನಿಗಳು ಭಾಗಿಯಾಗಿದ್ದಾರೆ. ಯಶ್ ಅಭಿಮಾನಿಗಳ ಈ ಅಭಿಯಾನ ಬರ್ತ್ದೇ ದಿನಕ್ಕೆ ಅಂದ್ರೆ ಜನವರಿ 8ನೇ ತಾರೀಖಷ್ಟರಲ್ಲಿ ಇಡೀ ದೇಶ ವ್ಯಾಪಿ ಪಸರಿಸೋ ಹಾಗೇ ಕಾಣ್ತಿದೆ. ಇಡೀ ದೇಶದಾದ್ಯಂತ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಈ ಅಭಿಯಾನದಲ್ಲಿ ಭಾಗಿಯಾಗಿದ್ದು, ಈ ಅಭಿಯಾನಕ್ಕೆ ಜನಸಾಮಾನ್ಯರ ಸ್ಪಂದನೆ ಮತ್ತು ಬೆಂಬಲ ಅಷ್ಟು ಅದ್ಭುತವಾಗಿ ವ್ಯಕ್ತವಾಗ್ತಿದೆ.

ಈ ಹಿನ್ನೆಲೆಯಲ್ಲಿ ಅಭಿಯಾನ ಆಯೋಜಿಸಿರೋ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಇವತ್ತು ಈ ಅಭಿಯಾನಕ್ಕೆ ಸಿಕ್ಕಿರೋ ಭವ್ಯ ಸ್ಪಂದನೆಗೆ ಧನ್ಯವಾದ ಹೇಳೋ ಒಂದು ವಿಡಿಯೋವನ್ನ ತಮ್ಮ ಪೇಜ್ ನಲ್ಲಿ ಅಪ್ಲೋಡ್ ಮಾಡಿದೆ. ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಹಸಿರು ಕ್ರಾಂತಿ ಗೋ ಗ್ರೀನ್ ಕರೆಯಲ್ಲಿ ಭಾಗವಹಿಸಿದ, ಭಾಗವಹಿಸುತ್ತಿರುವ ಎಲ್ಲಾರಿಗೂ ಧನ್ಯವಾದಗಳನ್ನ ಹೇಳಿದೆ.

ಅಂದ್ಹಾಗೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದಂದು ಈ ಅಭಿಯಾನದ ಪರಿಣಾಮ ಮತ್ತು ಪ್ರತಿಫಲದ ಸಂಪೂರ್ಣ ವಿವರವನ್ನ ಕೊಡೋದಕ್ಕೆ ಅಭಿಮಾನಿ ಸಂಘ ನಿರ್ಧರಿಸಿದೆ.

https://m.facebook.com/story.php?story_fbid=2860962020583006&id=705373192808577&sfnsn=scwspmo&d=n&vh=e

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights