ವಾಹನ ಸವಾರರೇ ಬೀ ಕೇರ್ ಫುಲ್..! : ಚಾಮುಂಡೇಶ್ವರಿ ಬೆಟ್ಟದಲ್ಲಿನ ಭಾರೀ ರಸ್ತೆ ಕುಸಿತ

ಕಳೆದು ಎರಡು ಮೂರು ದಿನಗಳಿಂದ ರಾಜ್ಯದ ಕೆಲವು ಕಡೆ ಭಾರೀ ಮಳೆಯಿಂದಾಗಿ ರಸ್ತೆಗಳು ನೀರು ತುಂಬಿ ಹೋಗಿವೆ. ಸಂಪರ್ಕ ಕಡಿತಗೊಂಡಿದೆ. ಭೂ ಕುಸಿತವೂ ಆಗಿದೆ. ಈಗ ಇದಕ್ಕೆ ಸಾಂಸ್ಕೃತ ನಗರಿ ಕೂಡ ಹೊರತಾಗಿಲ್ಲ.

ಕಳೆದರೆಡು ದಿನಗಳಿಂದ ಸಾಂಸ್ಕೃತಿಕ ನಗರಿಯಲ್ಲೂ ಸುರಿಯುತ್ತಿರುವ ಮಳೆಗೆ ಚಾಮುಂಡೇಶ್ವರಿ ಬೆಟ್ಟದಲ್ಲಿನ ರಸ್ತೆ ಕುಸಿದಿದೆ.

ಹೌದು..  ಚಾಮುಂಡೇಶ್ವರಿ ಬೆಟ್ದ ವ್ಯೂ ಪಾಯಿಂಟ್ ಬಳಿ ರಸ್ತೆ ಕುಸಿದಿದ್ದು  ರಸ್ತೆ ಕುಸಿದ ಪರಿಣಾಮ ಪೊಲೀಸ್ ಬ್ಯಾರಿಕೇಡ್ ಹಳ್ಳಕ್ಕೆ ಬಿದ್ದಿದೆ. ನಂದಿ ವಿಗ್ರಹದೆಡೆಗೆ ಸಾಗುವ ಮಾರ್ಗದಲ್ಲಿರೂ ವ್ಯೂ ಪಾಯಿಂಟ್ ನಲ್ಲಿ ಈ ಘಟನೆ ನಡೆದಿದೆ. ಬೆಟ್ಟದಿಂದ ಮೈಸೂರು ಅಂದವನ್ನು ಸವಿಯಲು ಮಾಡಲಾಗಿರುವ ವ್ಯೂ ಪಾಯಿಂಟ್ ಇದಾಗಿದೆ.

ಮುಂಜಾಗ್ರತಾ ಕ್ರಮವಾಗಿ ಆ ಭಾಗದಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದೀಗ ಮಳೆಯಿಂದಾಗಿ  ರಸ್ತೆ ಕುಸಿದು ಬ್ಯಾರಿಕೇಡ್ ಹಳ್ಳಕ್ಕೆ ಬಿದ್ದಿದೆ. ಇನ್ನು ಮಳೆಯಿಂದಾಗಿ ಚಾಮುಂಡೇಶ್ವರಿ ಬೆಟ್ಟದಿಂದ ಕೆಳಕ್ಕೆ ನಿರಂತರವಾಗಿ ಮಳೆ ನೀರು ಸುರಿಯುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights