ವಿಮಾನ ಹತ್ತುವ ಮೊದಲು ಮೋದಿ ಹೆಂಡತಿಯನ್ನು ಭೇಟಿ ಮಾಡಿದ ‘ದೀದಿ’

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಮಂಗಳವಾರ ಭೇಟಿಯಾಗಿ ಕುತೂಹಲ ಕೆರಳಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಬ್ಯಾನರ್ಜಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದು, ಅದಕ್ಕೂ ಮುನ್ನ ಮೋದಿ ಅವರ ಪತ್ನಿಯನ್ನು ಭೇಟಿಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಶೋದಾ ಬೆನ್ ಅವರೊಂದಿಗೆ ಉಭಯಕುಶಲೋಪರಿ ಚರ್ಚೆ ನಡೆಸಿದ ದೀದಿ, ಅವರಿಗೆ ಒಂದು ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಶೋದಾ ಬೆನ್ ಅವರು ಸೋಮವಾರ ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮನ್ ಜಿಲ್ಲೆಯ ಅಸನ್ಸೋಲ್ ನ ಕನ್ಯಾಣೇಶ್ವರಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ನೆರವೇರಿಸಿ, ಮಂಗಳವಾರ ಜಾರ್ಖಂಡ್ ಗೆ ತೆರಳುವ ವೇಳೆ ಈ ಭೇಟಿ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights