ವಿಶ್ವವಿಖ್ಯಾತ ಮೈಸೂರು ದಸರಾ : ಗಜಪಡೆಯಲ್ಲಿ ಸಮಸ್ಯೆಗಳ‌ ಸರಮಾಲೆ

ದಸರಾ ಗಜಪಡೆಯಲ್ಲಿ ಸಮಸ್ಯೆಗಳ‌ ಸರಮಾಲೆ ಸೃಷ್ಟಿಯಾಗಿದೆ. ಈ ಬಾರಿ ಗಜಪಡೆಯ ಮೂರು ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗೋದೆ ಅನುಮಾನವಾಗಿದೆ.

ಹೌದು… ಒಟ್ಟು 13 ಆನೆಗಳು ಈ ಬಾರಿಯ ದಸರಾ ಗಜಪಡೆಯ ಟೀಂ‌ನಲ್ಲಿವೆ. ಇವುಗಳಲ್ಲಿ ಮೂರು ಆನೆಗಳು ಅನಾರೋಗ್ಯ ಹಾಗೂ ಇತರೆ ಸಮಸ್ಯೆಯಿಂದ ಮೆರವಣೆಗೆಯಿಂದ ದೂರಾಗುವ ಸಾಧ್ಯತೆ. ಈಶ್ವರ ಆನೆ ಗಜಪಡೆ ತಂಡದಿಂದ ಹಿಂದಕ್ಕೆ ಸರಿಯುವ ಸಾಧ್ಯತೆ.
ನಗರದ ವಾತಾವರಣಕ್ಕೆ ಇನ್ನು ಹೊಂದಿಕೊಳ್ಳದ ಹಾರನ್ ಹಾಗೂ ವಾಹನ, ಕುಶಾಲತೋಪು ಸಿಡಿಮದ್ದಿಗು ಶಬ್ದಕ್ಕೆ ಈಶ್ವರ ಆನೆ ಬೆದರುತ್ತಿದೆ.

ಇನ್ನೂ ವರಲಕ್ಷೀ ಆನೆಯೂ ಮೆರವಣಿಯಿಂದ ದೂರ ಸರಿಯುವ ಸಾಧ್ಯತೆ ಇದೆ. ತುಂಬು ಗರ್ಭಿಣಿಯಾಗಿರುವ ವರಲಕ್ಷೀ ಆನೆ. ಮೊದಲ ತಂಡದಲ್ಲಿ ಆಗಮಿಸಿ ಅರ್ಜುನನ ಕುಮ್ಕಿ ಆನೆಯಾಗಿದ್ದ ವರಲಕ್ಷೀ ಆನೆಯನ್ನು ಹೊಟ್ಟೆಯೋಳಗಿರುವ ಮರಿಯ ಹಿತದೃಷ್ಟಿಯಿಂದ ಕಾಡಿಗೆ ವಾಪಸ್ ಕಳುಹಿಸುವ ನಿರ್ಧಾರ ಅರಣ್ಯ ಇಲಾಖೆ‌ ಮಾಡಿತ್ತಿದೆ.

ಇನ್ನು ಅನಾರೋಗ್ಯಕ್ಕಿಡಾಗಿರುವ ಗೋಪಿ ಆನೆ, ತೀವ್ರ ಭೇದಿಯಿಂದ ಬಳಲುತ್ತಿದೆ. ಎರಡು ಮೂರು ದಿನದಿಂದ ಭೇದಿಯಾಗಿ ನಿಶಕ್ತನಾಗಿದೆ. ದಸರಾದೋಳಗೆ ಗೋಪಿಯನ್ನ ಸಿದ್ದಪಡಿಸುವ ಸವಾಲು ಅರಣ್ಯ ಇಲಾಖೆ ಎದುರಿಸುತ್ತಿದೆ.

ಒಟ್ಟು ಮೂರು ಆನೆಗಳು ಈ ಬಾರಿ ಮೆರವಣಿಗೆಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಈ ಬಾರಿ ದಸರಾ ಜಂಬಸವಾರಿ ಮೆರವಣಿಗೆಗೆ 14 ಆನೆಗಳ ಪಟ್ಟಿ ಸಿದ್ದ ಮಾಡಲಾಗಿತ್ತು. ಕೊನೆ ಕ್ಷಣದಲ್ಲಿ ರೋಹಿತ್ ಆನೆಯನ್ನ ಕೈ ಬಿಟ್ಟು 13 ಆನೆಯನ್ನ ಅರಮನೆಗೆ ಕರೆತರಲಾಯಿತು. ಇದೀಗ 3 ಆನೆಗಳಲ್ಲಿ ಸಮಸ್ಯೆ ಹೆಚ್ಚಾಗಿದೆ. ಮೆರವಣಿಗೆಗೆ ಕೇವಲ 10 ಆನೆಗಳು ಮಾತ್ರ ಭಾಗಿಯಾಗುವ ಸಾಧ್ಯತೆ. ಮೆರವಣಿಗೆಯಲ್ಲಿ ಆನೆಗಳು ಕಡಿಮೆಯಾಗುವ ಆತಂಕದಲ್ಲಿ ಅರಣ್ಯ ಇಲಾಖೆ ಇದ್ದು ಈ ಬಾರಿಯ ದಸರಾಗೆ ಗಜಪಡೆಯೇ ಸಮಸ್ಯೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights