ವೈದ್ಯರ ನಿರ್ಲಕ್ಷ್ಯದಿಂದ ೯ ತಿಂಗಳ ಗರ್ಭಿಣಿ ಸಾವು : ಸಂಬಂಧಿಕರಿಂದ ಪ್ರತಿಭಟನೆ

೯ ತಿಂಗಳ ಗರ್ಭಿಣಿ ತಾಯಿ, ಮಗು ಸಾವನ್ನಪ್ಪಿರೊ‌ ಹೃದಯ ವಿದ್ರಾವಕ ಘಟನೆ ಕೋಲಾರ ನಗರದಲ್ಲಿ ತಡರಾತ್ರಿ ನಡೆದಿದೆ.

ನಗರದ ಗಣೇಶ್ ಹೆಲ್ತ್ ಕೇರ್ ನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ 22 ವರ್ಷದ ಸುಧಾರಾಣಿ ೯ ತಿಂಗಳ ಗರ್ಭಿಣಿ ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷ್ಯ ಎಂದು ಸಂಬಂದಿಕರು ಆರೋಪಿಸಿದ್ದಾರೆ. ಕೋಲಾರ ತಾಲೂಕಿನ ಮುದುವತ್ತಿ ಗ್ರಾಮದ ನಿವಾಸಿಯಾದ ಸುಧಾರಾಣಿ ನೆನ್ನೆ ಬೆಳಗ್ಗೆ ೧೧ ಗಂಟೆಗೆ ಹೊಟ್ಟೆ ನೋವು ವಾಂತಿಯಿಂದ ಆಸ್ಪತ್ರೆಗೆ ತಾಯಿ ಲಕ್ಷ್ಮಿದೇವಮ್ಮ ದಾಖಲಿಸಿದ್ರು.

ರಾತ್ರಿ ಮತ್ತ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ವೈದ್ಯೆ ಲತಾ ಎನ್ನುವರು ನೀಡಿದ ಚುಚ್ಚು ಮದ್ದು, ಔಷದಿ ನಂತರ ಸಾವನ್ನಪ್ಪಿದ್ದಾಗಿ ತಾಯಿ ಲಕ್ಷ್ನಿದೇವಮ್ಮ ಆರೋಪಿಸಿದ್ದಾರೆ. ಗರ್ಭಿಣಿ ತಾಯಿ ಮಗು ಸಾವಿಂದ ಕೆರಳಿದ ಸಂಬಂದಿಕರು ಆಸ್ಪತ್ರೆ ಮಹಿಳಾ ವಾರ್ಡ್ ಗೆ ನುಗ್ಗಿ ವೈದ್ಯರು ಮತ್ತು ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದ್ರಿಂದ ಗಲಾಟೆ ಉಂಟಾಗಿ ಆಸ್ಪತ್ರೆ ಮಹಿಳಾ ವಾರ್ಡ್ ಬಾಗಿಲು ಗಾಜು ಪುಡಿ ಪುಡಿಯಾಗಿದೆ, ಸ್ತಳಕ್ಕೆ ಕೋಲಾರ ನಗರ ಪೊಲೀಸರು ಆಗಮಿಸಿ ಸಂಬಂದಿಕರನ್ನ ಹೊರಕಳಿಸಿದ್ದಕ್ಜೆ ಆಸ್ಪತ್ರೆ ಹೊರಗೆ ಸಂಬಂದಿಕರು ನೂರಾರು ಜನರು ಪ್ರತಿಭಟನೆ ನಡೆಸ್ತಿದ್ದಾರೆ.

ವೈದ್ಯರ ನಿರ್ಲಕ್ಷ್ಯ ದಿಂದ ತಾಯಿ ಮಗು ಸಾವನ್ನಪ್ಪಿದ್ದು ಕಠಿಣ ಕ್ರಮಕ್ಕಾಗಿ ಸಂಬಂದಿಕರು ಆಗ್ರಹಿಸಿದ್ದಾರೆ, ಸದ್ಯ ಗರ್ಭಿಣಿ ತಾಯಿ ಮಗು ಸಾವಿನ ಬಗ್ಗೆ ಆಸ್ಪತ್ರೆ ವೈದ್ಯರು ಇನ್ನು ಪ್ರತಿಕ್ರಿಯೆ ನೀಡಿಲ್ಲ, ನ್ಯಾಯ ಸಿಗೋವರೆಗು ಯಾವುದೇ ಕಾರಣಕ್ಕು ಮೃತದೇಹ ಪಡೆಯೊಲ್ಲ ಎಂದು ಪಟ್ಟು ಹಿಡಿದಿದ್ದು, ಆಸ್ಪತ್ರೆ ಎದುರು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ, ಈ ಬಗ್ಗೆ ಮಾತನಾಡಿದ ತಾಯಿ ಲಕ್ಷ್ಮಿ ದೇವಮ್ಮ ವೈದ್ಯರು ಸರಿಯಾಗಿ ನೋಡಿಲ್ಲ ಎಂದು ಅಳಲು ತೋಡಿಕೊಂಡ್ರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights