ವೋಟ್ ತಕೊಂಡು ಅಂಬರೀಷ್ ರೀತಿ ಈಯಮ್ಮನ್ನೂ ಕದ್ಬಿಟ್ಟೋಳು ಎಂಬ ಭಯ ಇತ್ತು- ಎಲ್.ಆರ್.ಶಿವರಾಮೇಗೌಡ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಟೂರಿಂಗ್ ಟಾಕಿಸ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವೋಟ್ ತಕೊಂಡು ಅಂಬರೀಷ್ ರೀತಿ ಈಯಮ್ಮನ್ನೂ ಕದ್ಬಿಟ್ಟೋಳು ಎಂಬ ಭಯ ಇತ್ತು ಎಂದು ಟಾಂಗ್ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಫಲಿತಾಂಶದ ಬಳಿಕ‌ ಸುಮಲತಾ ಟೂರಿಂಗ್ ಟಾಕೀಸ್ ಎತ್ತಂಗಡಿಯಾಗಲಿದೆ ಎಂದು ಟೀಕಿಸಿದ್ದಾರೆ.

ಚುನಾವಣೆ ಬಳಿಕ ಟೂರಿಂಗ್ ಟಾಕಿಸ್ ಆಗಬಹುದೆಂದು ಅನಿಸಿತ್ತು, ಹೇಳಿದ್ದೆ. ಸುಮಲತಾ ಅವ್ರ ಬಗ್ಗೆ ನನಗೆ ವೈಯಕ್ತಿಕವಾಗಿ ಏನೂ ಇಲ್ಲ, ಅವ್ರು ನನ್ನ ಸಿಸ್ಟರ್ ಇದ್ದಂಗೆ. ಅಂಬರೀಶ್ ಅವ್ರನ್ನ ರಾಜಕೀಯಕ್ಕೆ ಕರೆದು ತರುವಲ್ಲಿ ನನ್ನದೂ ಪಾತ್ರವಿದೆ. ಯಾವ ರೀತಿ ಪಾತ್ರ ಅನ್ನೋದರ ಬಗ್ಗೆ ತಿಳಿಯಲು ಸುಮಲತಾ ಚರ್ಚೆಗೆ ಬರಲಿ ಎಂದು ಸುಮಲತಾರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ ಮಾಜಿ ಸಂಸದ ಶಿವರಾಮೇಗೌಡ.

ಅಂಬರೀಶ್ ರಾಜಕೀಯವಾಗಿ ಯಾರಿಗೂ ತೊಂದರೆ ಕೊಟ್ಟಿಲ್ಲ. ಕೆಲಸ ಮಾಡ್ಲಿಲ್ಲ ಅಂದ್ರೂ ಜನಾಭಿಪ್ರಾಯದಲ್ಲಿ ದೊಡ್ಡ ಹೆಸರು ಉಳಿಸಿಕೊಂಡಿದ್ರು. ಅದೇ ರೀತಿ ಇವ್ರು ಕೆಲಸ ಮಾಡಲ್ವೇನೊ ಎಂಬ ಭಯ ಇತ್ತು. ಸ್ವಾಭಿಮಾನ, ಅನುಕಂಪದ ಅಲೆಯಲ್ಲಿ ಸುಮಲತಾ ಗೆಲುವು ಸಾಧಿಸಿದ್ರು. ನಮ್ಮ ಶಾಸಕರು ಒನ್ ಟು ಡಬಲ್ ವೋಟ್ ಒತ್ತಿಸ್ತೀನಿ ಅಂದ್ರು, ಅದು ಆಯ್ತಾ…?.

ಬೇರೆ ಜಿಲ್ಲೆಯಿಂದ ಅಭ್ಯರ್ಥಿ ಕರೆತಂದ್ರು ಎಂದು ಜನ ತೀರ್ಪು ತೆಗೆದುಕೊಂಡ್ರು. ಹೊರ ಜಿಲ್ಲೆಯವರಾಗಿದ್ರಿಂದ ನಿಖಿಲ್ ಸೋಲಾಯ್ತು ಎಂದು ಶಿವರಾಮೇಗೌಡ ಹೇಳಿದ್ದಾರೆ. ಜೆಡಿಎಸ್ ಮುಖಂಡ್ರುಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ರು.

ಸುಮಲತಾ ಗೆದ್ದ ಮೇಲೆ ಎಲ್ಲಾ ಸಮಸ್ಯೆಯೂ ಪರಿಹಾರ ಆಗೋಯ್ತಾ? ಏನೂ ಆಗಿಲ್ಲ. ಹೆಣ್ಣು ಮಗಳು, ಸ್ವಾಭಿಮಾನಕ್ಕಾಗಿ ಸುಮಲತಾರನ್ನು ಗೆಲ್ಲಿಸಿದ್ರು. ಸುಮಲತಾ ಗೆಲುವು ಸ್ವಾಭಿಮಾನದ ಗೆಲುವು ಎಂದು ಒಪ್ಪಿಕೊಂಡಿದ್ದಾರೆ ಶಿವರಾಮೇಗೌಡ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights