ಸಕ್ಕರೆನಾಡು ಮಂಡ್ಯದಲ್ಲಿ ನಿಲ್ಲದ ಮೈತ್ರಿ ನಾಯಕರ ವಾಕ್ಸಮರ….

ಸಕ್ಕರೆನಾಡು ಮಂಡ್ಯದಲ್ಲಿ ನಿಲ್ಲದ ಮೈತ್ರಿ ನಾಯಕರ ವಾಕ್ಸಮರ ಮತ್ತೆ ಚುರುಕುಗೊಂಡಿದೆ. ಮಂಡ್ಯ ಕೈ ನಾಯಕ ಚಲುವರಾಯಸ್ವಾಮಿಯ ನೆನ್ನೆಯ ಹೇಳಿಕೆಗೆ ಮಾಜಿ ಸಚಿವ ಪುಟ್ಟರಾಜು ಕೆಂಡಾಮಂಡಲವಾಗಿದ್ದಾರೆ.

ಮಂಡ್ಯದ ಕೆ.ಆರ್.ಎಸ್.ನಲ್ಲಿ ಮಾಜಿ ಸಚಿವ ಪುಟ್ಟರಾಜು ಚಲುವರಾಯಸ್ವಾಮಿ ಮಾತನಾಡಿ, ಡಿ.ಕೆ‌.ಶಿ ವಿಚಾರದಲ್ಲಿ ಕುಮಾರಸ್ವಾಮಿ ಎಳೆದು ತಂದ ಚಲುವರಾಯಸ್ವಾಮಿಗೆ ಮೊದ್ಲು ಡಿಕೆಶಿ ಮತ್ತು ಕುಮಾರ ಸಂಬಂಧ ಏನ್ ಅಂತಾ ತಿಳಿದು ಮಾತನಾಡ್ಲಿ. ಚಲುವರಾಯಸ್ವಾಮಿ ಮೊದ್ಲು ತಾನು ಯಾವ ಪಕ್ಷ ಅನ್ನೋದ್ನ ಹೇಳಬೇಕು. ಹಗಲೊತ್ತು ಸಿದ್ದರಾಮಯ್ಯ ಜೊತೆ ರಾತ್ರಿ ವೇಳೆ ಯಡಿಯೂರಪ್ಪ ಜೊತೆ ರಾಜಕಾರಣ ಮಾಡೋದನ್ನ ಮೊದ್ಲು ಬಿಡಬೇಕು. ಈ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ನಾಯಕರು ಆ ಪಕ್ಷದ ತತ್ವ ಸಿದ್ದಾಂತದ ಮೇಲೆ ಈ ಜಿಲ್ಲೆಯ ಗೌರವ ಉಳಿಸಿಕೊಂಡು ಬಂದಿದ್ದಾರೆ ಎಂದರು.

ಮೊದಲು ಜಿಲ್ಲೆಯ ಸಂಸದರಾಗಿ , ಮಂತ್ರಿಯಾಗಿ ಕೆಲಸಮಾಡಿದ ಮಹಾನ್ ನಾಯಕರು. ಯಾರ ಬಗೆ ಮಾತನಾಡುವಾಗ ಮಾತನಾಡುವಾಗ ನಾಲಿಗೆ ಬಿಗಿ ಹಿಡಿಕೊಂಡು ಮಾತನಾಡಬೇಕು. ಹೌದು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ,ನಿಖಿಲ್ ಸೋಲಿಗೆ ಕಾರಣ ಹೊತ್ತಿದ್ದೇನೆ. ನಿಖಿಲ್ ಸೋಲಿನ‌ಹೊಣೆ ಹೊತ್ತು ರಾಜೀನಾಮೆ ನೀಡ್ತಿನಿ ಅಂದಾಗ ಪಕ್ಷದ ವರಿಷ್ಠರು ಬೇಡ ಅಂದ್ರು. ವರಿಷ್ಟರ ಆದೇಶಕ್ಕೆ ಗೌರವ ಕೊಟ್ಟು ನಾನು ನನ್ನ ಕೆಲಸ ಮಾಡ್ತಿದ್ದೀನಿ. ಜಿಲ್ಲೆಯ ಜನ ಅಂಬರೀಶ್ ಅವರ ಮೇಲಿನ ಅಭಿಮಾನದಿಂದ ಸುಮಲತಾರನ್ನ ಗೆಲ್ಲಿಸಿದ್ದಾರೆ.

ಚಲುವರಾಯಸ್ವಾಮಿ ವರ್ಚಸ್ಸು ಸುಮಲತಾ ಗೆಲುವಿನಲ್ಲಿ ಏನೂ ಇಲ್ಲ. ಇದಿದ್ರೆ ನಿಖಿಲ್ ಗೆ ನಾಗಮಂಗಲದಲ್ಲಿ ಲೀಡ್ ಬರಬೇಕಿತ್ತು. ಇದೆಲ್ಲವನ್ನು ಬಿಟ್ಟು ಜಿಲ್ಲೆಯಲ್ಲಿ ಅವ್ರು ಒಳ್ಳೆಯ ಕೆಲಸ ಮಾಡಲಿ. ಚಲುವರಾಯಸ್ವಾಮಿ ಬಾಳೆ ಎಲೆ ಆಗಬೇಕು ಎಂಜಲು ಎಲೆ ಆಗಬಾರದು. ಡಿಕೆಶಿ ಯವರು ಆರೋಪ ಮುಕ್ತರಾಗಿ ಹೊರ ಬರ್ಲಿ ಯಾರ ಯಾರ ಬಂಡವಾಳ ಎಲ್ಲವು ಸದ್ಯದಲ್ಲಿ ಹೊರ ಬರುತ್ತೆ ಎಂದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights