ಸದ್ಯಕ್ಕೆ ಹೊಸ ಯೋಜನೆಗಳಿಲ್ಲ -15 ದಿನಗಳಲ್ಲಿ ಶ್ವೇತ ಪತ್ರ ಹೊರಡಿಸುವೆ- ಚಿತ್ರ ನಿರ್ದೇಶಕ ಟಿ. ಎಸ್. ನಾಗಾಭರಣ

ಮುಂದಿನ 15 ದಿನಗಳ ಕಾಲ ಅಧ್ಯಯನ ನಡೆಸಿ ಪ್ರಾಧಿಕಾರದ ಕುರಿತು ಶ್ವೇತಪತ್ರ ಹೊರಡಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಟಿ. ಎಸ್. ನಾಗಾಭರಣ ತಿಳಿಸಿದ್ದಾರೆ.

ವಿಜಯಪುರದಲ್ಲಿ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 1980ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಾಗ ವಿಜಯಪುರದಲ್ಲಿ ನಾಟಕದ ಸೆಟ್ ನಲ್ಲಿದ್ದೆ. ಈಗ ಬಾರಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕವಾದ ಸಂಗತಿಯೂ ವಿಜಯಪುರದಲ್ಲಿದ್ದಾಗಲೇ ಗೊತ್ತಾಗಿದೆ. ಹೀಗಾಗಿ ವಿಜಯಪುರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಕ್ರೀಯಾಶೀಲ ವ್ಯಕ್ತಿಗೆ ಸರಿಯಾದ ಅವಕಾಶ ಸಿಗಬೇಕು. ಇಂಥ ಸ್ಥಾನಮಾನಗಳು ನಮ್ಮ ಕನಸುಗಳನ್ನು ನನಸು ಮಾಡಲು ಅನುಕೂಲವಾಗಲಿವೆ. ಇಂಥ ಅವಕಾಶಗಳು ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಇ ಪ್ರಾಧಿಕಾರದ ನೂತನ ಅಧ್ಯಕ್ಷನಾಗಿ ಸಧ್ಯಕ್ಕೆ ಯಾವುದೇ .ಯೋಜನೆಗಳನ್ನು ಹೊಂದಿಲ್ಲ. 15 ದಿನಗಳ ಕಾಲ ಅಧ್ಯಯನ ಮಾಡುತ್ತೇನೆ. ಈಗಾಗಲೇ ಇರುವ ಸಮಸ್ಯೆಗಳ ಅಧ್ಯಯನ ನಡೆಸಿ ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಈ ಸಮಸ್ಯೆಗಳಿಗೆ ಪರಿಹಾರಕ್ಕೆ ಅಡ್ಡಿಯಾಗಿರುವ ಕಾನೂನು ತೊಡಕುಗಳನ್ನು ನಿವಾರಿಸಲು ಅಧ್ಯಯನ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲೇಬೇಕು ಎಂಬುದಕ್ಕೆ ಬದ್ಧನಾಗಿದ್ದೇನೆ ಎಂದು ತಿಳಿಸಿದ ಟಿ. ಎಸ್. ನಾಗಾಭರಣ, ಇದಕ್ಕೂ ಇರುವ ಅಡೆತಡೆಗಳ ಬಗ್ಗೆ ಮಾರ್ಗೋಪಾಯ ಕಂಡುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಟಿ. ಎಸ್. ನಾಗಾಭರಣ ಅವರನ್ನು ಮಾಜಿ ಸಚಿವ ಮತ್ತು ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಎಸ್. ಪಾಟೀಲ ಸನ್ಮಾನಿಸಿ ಗೌರವಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights