ಸಿದ್ದರಾಮಯ್ಯ ಜೆಡಿಎಸ್‌‌ನ 7 ಮಂದಿಯನ್ನ ಕರೆದುಕೊಂಡು ಬಂದಿದ್ದು ಧ್ರುವೀಕರಣವೇ – ಹೆಚ್.ವಿಶ್ವನಾಥ್

ಸಿದ್ದರಾಮಯ್ಯ ಕುಮಾರ‌ಸ್ವಾಮಿ ಇಬ್ಬರದ್ದು ಇಬ್ಬಂದಿ ನೀತಿ. ಸಿದ್ದರಾಮಯ್ಯ ಜೆಡಿಎಸ್‌‌ನ 7 ಮಂದಿಯನ್ನ ಕರೆದುಕೊಂಡು ಬಂದರಲ್ಲ ಅದೇನು. ಅದು ಪಕ್ಷಾಂತರ ಅಲ್ಲವೇ ಅದು ಧ್ರುವೀಕರಣವೇ. ಅದು ಧ್ರುವೀಕರಣ ಆದ್ರೆ ನಮ್ಮದು ಆದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್  ಕನಕಜಯಂತಿಯಂದು ಇಬ್ಬರು ಕನಕರು ಬಿಜೆಪಿ ಮನೆಗೆ ಬಂದಿದ್ದೇವೆ. ನಾನು ಮತ್ತು ವಿಜಯ್‌ಶಂಕರ್‌ ಇಂದು ಒಟ್ಟಿಗೆ ಬಿಜೆಪಿ ಕಚೇರಿಗೆ ಬಂದಿದ್ದೇವೆ. ಇದು ಒಳ್ಳೆಯ ಬೆಳವಣಿಗೆ ಎಂದರು.

ಮೋದಿ ಜಾತಿವಾದಿ ಪಕ್ಷದಿಂದ ಬಂದವರು. ಇಷ್ಟೇ ವಿಚಾರ ಇಟ್ಟು ಕೊಂಡು ಮೋದಿ ವಿಶ್ಲೇಷಣೆ ನಡೆಯುತ್ತಿದೆ. ಆದರೆ, ಮೋದಿ ವಿಭಿನ್ನ. ಅತಿ ಚಿಕ್ಕ ಸಮುದಾಯದಿಂದ ಬಂದ ಮೋದಿ ಜಾಗತಿಕ ಭಾರತ ಕಟ್ಟಿದ್ದಾರೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.

ನಾನು ಬಿಜೆಪಿ ಕಚೇರಿಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಹಾಗೇಯೆ ಜೆಡಿಎಸ್ ಸೇರಿ ಬಿಟ್ಟು ಬಿಜೆಪಿಗೆ ಬರ್ತೆನೆ ಅಂದುಕೊಂಡಿರಲಿಲ್ಲ. ಪರಿಸ್ಥಿತಿಯಿಂದಾಗಿ ಬಂದಿದ್ದೇನೆ. ಬಿಜೆಪಿಯವರು ನನ್ನನ್ನ ಆತ್ಮಿಯವಾಗಿ ಬರಮಾಡಿಕೊಂಡಿದ್ದಾರೆ. ಅವರಲ್ಲಿ ಒಬ್ಬರಂತೆ ಕಂಡಿದ್ದಾರೆ. ಮುಂದೆಯೂ ಬಿಜೆಪಿಯ ಎಲ್ಲರ ಜೊತೆ ಹೊಂದಿಕೊಂಡು‌ ಹೋಗುತ್ತೇವೆ. ಹುಣಸೂರಿನ ಜನ 3 ತಿಂಗಳಿನಿಂದ ಎಲ್ಲವನ್ನು ನೋಡ್ತಿದ್ದಾರೆ. ಅವರಿಗೆ ಆಗಿದ್ದ ಎಲ್ಲವು ಗೊತ್ತಿದೆ. ರಾಜೀನಾಮೆ ನೀಡುವಾಗ ಅವರನ್ನು ಕೇಳಿಲ್ಲ. ಅದಕ್ಕೆ ಕ್ಷಮೆಯಾಚಿಸುತ್ತೇನೆ. ಅದೆ ರೀತಿ ಈಗ ಮತ್ತೆ ಕ್ಷಮಿಸಿ ಎಂದು ಮನವಿ ಮಾಡಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ ಎಂದರು.

ಮಾಜಿ ಸಂಸದ ಧೃವನಾರಾಯಣ್‌ಗೆ ಯಾವ ಹಕ್ಕಿ ಹಾರುತ್ತೆ ಅಂತಾನೆ‌ ಗೊತ್ತಿಲ್ಲ. ಅವರ ದಡ್ಡತನಕ್ಕೆ ಏನು ಹೇಳಬೇಕು. ಸುಮ್ಮನೆ ಮಾತನಾಡೋರಿಗೆ ಉತ್ತರ ಕೊಡೋಲ್ಲ.

ಕುಮಾರ‌ಸ್ವಾಮಿ ನಮ್ಮನ್ನ ಸೋಲಿಸುವುದೆ ಗುರಿ ಎಂದಿದ್ದಾರೆ. ಕುಮಾರ‌ಸ್ವಾಮಿಯವರೇ ನಾವು 17 ಜನರಿಗ ಗೆಲ್ಲುವುದೆ ಗುರಿ.  ಕುಮಾರ‌ಸ್ವಾಮಿಗೆ ಹೆಚ್.ವಿಶ್ವನಾಥ್ ಸವಾಲು ಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights