ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ನಾರಾಯಣಗೌಡ ಬೆಂಬಲಿಗರಿಂದ ಉಪಚುನಾವಣೆಗೆ ಸಿದ್ದತೆ….

ರಾಜ್ಯ ರಾಜಕೀಯದಲ್ಲಿ‌ ಸಂಚಲನ ಉಂಟು ಮಾಡಿದ ಅನರ್ಹ ಶಾಸಕರ ತೀರ್ಪು ಇಂದು ಪ್ರಕಟವಾಯ್ತು.ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಕೋರ್ಟ್ ತೀರ್ಪು ಒಂದು ಕಡೆ ಚುನಾವಣೆಗೆ ನಿಲ್ಲಲು ಅವಕಾಶ ಕಲ್ಪಿಸಿದ್ದು,ಒಂದು ಸಂತಸ ತಂದ್ರೆ,ಮತ್ತೊಂದು ಕಡೆ ಸ್ಪೀಕರ್ ಅನರ್ಹನತೆ ಎತ್ತಿ ಹಿಡಿದಿದ್ದು ಮಂತ್ರಿಯಾಗಿ ಚುನಾವಣೆ ಎದುರಿಸುವ ಕನಸಿಗೆ ತಣ್ಣೀರೆರಚಿದೆ. ಅದ್ರಲ್ಲೂ ಸಕ್ಕರೆನಾಡು ಮಂಡ್ಯದ ಕೆ.ಆರ್.ಪೇಟೆಯ ಅನರ್ಹ‌ಶಾಸಕ ನಾರಾಯಣಗೌಡಗೆ ಬಿಗ್ ರಿಲೀಪ್ ಸಿಕ್ಕಿದಂತಾಗಿದ್ದು ಮತ್ತೆ ಉಪ ಚುನಾವಣೆ ಎದುರಿಸುವ ಅವಕಾಶ ಸಿಕ್ಕಿರೋದು ಅನರ್ಹ ಶಾಸಕ ಮತ್ತು ಮತ್ತವರ ಬೆಂಬಲಿಗರ ಸಂತಸಕ್ಕೆ ಕಾರಣವಾಗಿದೆ‌.

ಹೌದು ! ಇಂದು ಸುಪ್ರೀಂಕೋರ್ಟ್ನಲ್ಲಿ ರಾಜ್ಯದ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ೧೭ ಜನ ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟವಾಯ್ತು. ಸುಪ್ರೀಂಕೋರ್ಟ್ ನ ತೀರ್ಪಿನ ಮೇಲೆ ಅನರ್ಹ ಶಾಸಕ ಭವಿಷ್ಯ ನಿಂತಿತ್ತು.ಆಗಾಗಿ ಇಂದು ಬಹುತೇಕ ಅನರ್ಹ ಶಾಸಕರ ಬೆಂಬಲಿಗರು ದೇವರ ಮೊರೆ ಹೋಗಿದ್ರು.ಅದೇ ರೀತಿ ಸಕ್ಕರೆನಾಡು ಮಂಡ್ಯದ ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕನ‌ ಬೆಂಬಲಿಗರು ಪಟ್ಟಣದ ಭ್ರಮರಾಂಭ ದೇವಾಲಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪರವಾಗಿ ಬರಲೆಂದು ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ರು.

ಇನ್ನು ಪೂಜೆ ಸಲ್ಲಿಕೆ ಬಳಿಕ ಪಟ್ಡಣದ ಅನರ್ಹ ಶಾಸಕನ‌ ಮನೆಯಲ್ಲಿ ಕುಳಿತು ಸುಪ್ರೀಂಕೋರ್ಟ್ ತೀರ್ಪಿಗೆ ಕಾಯ್ದು ಕುಳಿತ್ರು. ತೀರ್ಪು ಪೂರ್ಣ ಪ್ರಮಾಣದಲ್ಲಿ ಪರವಾಗಿ ಬಂದಿದ್ರೆ ಬೆಂಬಲಿಗರು ಭರ್ಜರಿ ಸಂಭ್ರಮಾಚರಣೆಗೆ ಬೇಕಾದ ಸಿದ್ದತೆ ನಡೆಸಿದ್ರು.ಆದ್ರೆ ಸುಪ್ರೀಂಕೋರ್ಟ್ ತೀರ್ಪು ಅನರ್ಹತೆಯನ್ನು ಎತ್ತಿ ಹಿಡಿದು,ಚುನಾವಣೆಗೆ ಅನರ್ಹರ ನಿಲ್ಲಲು ಅವಕಾಶ ನೀಡಿದ್ದು ಕೊಂಚ ಸಮಾಧಾನ ತಂದಿತ್ತು. ಅನರ್ಹ ಶಾಸಕನ ಬೆಂಬಲಿಗರು ಸುಪ್ರೀಂಕೋರ್ಟ್ ತೀರ್ಪುನ್ನು ಅನರ್ಹ ಶಾಸಕನ ಮನೆಯಲ್ಲೇ ಕುಳಿತು ಮೊಬೈಲ್ ಟಿವಿಗಳ ಮೂಲಕ ನೋಡಿ ಚುನಾವಣೆಗೆ ಅವಕಾಶ ನೀಡಿದ ಸುಪ್ರೀಂಕೋರ್ಟ್ ನ ತೀರ್ಪನ್ನು  ಸ್ವಾಗತಿಸಿದ್ರು.ಬಳಿಕ ಸುದ್ದಿಘೋಷ್ಟಿ ನಡೆಸಿದ ಅನರ್ಹ ಶಾಸಕನ ಬೆಂಬಲಿಗರು ತೀರ್ಪುನ್ನ ಸ್ವಾಗತಿಸ್ತಿವಿ. ಉಪ ಚುನಾವಣೆಯಲ್ಲಿ ಗೆದ್ದು ನಮ್ಮ ನಾರಾಯಣಗೌಡ್ರು‌ ಮಂತ್ರಿಯಾಗ್ತಾರೆ ಅದಕ್ಕೆ ಚುನಾವಣೆ ಬೇಕಾದ ತಯಾರಿಗೆ ಸಿದ್ದತೆ‌ ಮಾಡಿಕೊಳ್ತೀವಿ ಅಂದಿದ್ದು, ನಾಳೆ ನಮ್ಮ‌ನಾಯಕರು ಬಂದ ಮೇಲೆ ಸಭೆ ನಡೆಸಿ ಚರ್ಚಿಸ್ತಿವಿ ಅಂದಿದ್ದಾರೆ.

ಒಟ್ಟಾರೆ ಸುಪ್ರೀಂಕೋರ್ಟ್ ನೀಡಿದ ಈ ತೀರ್ಪು ಅನರ್ಹರಿಗೆ ಕೊಂಚ ನೆಮ್ಮದಿ‌ ತಂದಿದೆ. ಅದ್ರಲ್ಲೂ‌ ಮಂಡ್ಯ ಜಿಲ್ಲೆಯ ಈ ಅನರ್ಹ ಶಾಸಕ ನಾರಾಯಣಗೌಡರಿಗೆ ಸುಪ್ರೀಂಕೋರ್ಟ್ ನ ತೀರ್ಪು ಮತ್ತಷ್ಟು ಹುಮ್ಮಸ್ಸು ತಂದಿದ್ದು, ಚುನಾವಣೆ ಗೆಲ್ಲುವ ಹುರುಪು ತಂದಿದೆ. ಅನರ್ಹಗೊಂಡವರು ಚುನಾವಣೆ ಸ್ಪರ್ಧೆಗೆ ಇದ್ದ ತೊಡಕು ಸುಪ್ರೀಂಕೋರ್ಟ್ ನ‌ ತೀರ್ಪಿನಿಂದ ಮುಗಿದಿದ್ದು, ಮುಂದಿನ ಯೋಚನೆ ಮತ್ತು ಯೋಜನೆ ಹೇಗಿರಲಿದೆ ಅನ್ನೋದ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights