ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರಾ..!? – ಆರ್ ಬಿ ತಿಮ್ಮಾಪುರ

ಬಿಎಸ್ವೈ ಪ್ರವಾಹ ಪರಿಹಾರ ಕೇಳಿದ್ರೆ ದೆಹಲಿಗೆ ಬರಬೇಡಿ ಅಂತಾರೆ. ಅನರ್ಹ ಶಾಸಕರಿಗೆ ತೊಂದ್ರೆಯಾದ್ರೆ ಬಿಎಸ್ವೈ ರಾತ್ರೋರಾತ್ರಿ ದೆಹಲಿಗೆ ಅಮಿತಾ ಷಾ ಭೇಟಿಯಾಗೋಕೆ ಹೋಗ್ತಾರೆ. ೧೫ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನಮ್ಮಿಂದ ಹೋದವರಿಗೆ ಜನ ತಕ್ಕ ಪಾಠ ಕಲಿಸ್ತಾರೆ. ಅನರ್ಹರ ಸ್ಪರ್ದೆಗೆ ಕೋರ್ಟ್ ಅವಕಾಶ ಕೊಡೋದಿಲ್ಲ ಅನ್ನೋದು ನನ್ನ ಭಾವನೆ. ಬೈ ಎಲೆಕ್ಷನ್ ನಲ್ಲಿ ಮೈತ್ರಿ ಮುಂದುವರೆಯೋ ಬಗ್ಗೆ ಹೈಕಮಾಂಡ್ ಗೆ ಬಿಟ್ಟಿದ್ದು. ಕೇಂದ್ರ ಸರ್ಕಾರ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಹರಿಹಾಯ್ದಿದ್ದಾರೆ.

ದೇಶಾದಲ್ಲಿ ಆರ್ಥಿಕ ದಿವಾಳಿತನವಾಗಿದೆ. ಆದ್ರೆ ಪ್ರಧಾನಿ ಮೋದಿ ಅಮೇರಿಕಾಕ್ಕೆ ಹೋಗಿ ಚಪ್ಪಾಳೆ ಗಿಟ್ಟಿಸಿಕೊಳ್ತಾರೆ. ದೇಶದಲ್ಲಿ ಕಂಪನಿಗಳು ಮುಚ್ಚಿ ಉದ್ಯೋಗ ಕಳೆದುಕೊಳ್ತಿದ್ದಾರೆ. ದೇಶದ ಆರ್ಥಿಕ ಸುಧಾರಣೆ ಮಾಡಿದ್ರೆ ಒಳ್ಳೆಯದಾಗುತ್ತೆ. ಟ್ರಂಪ್ ಗೆಲ್ಲಿಸೋಕೆ ಮೋದಿ ಸಹಾಯ ಮಾಡ್ತಾರಂತೆ. ಪುಣ್ಯಾತ್ಮ ನಿನ್ನ ಗೆಲ್ಸಿದೋರಿಗೆ ಸಹಾಯ ಮಾಡೋದು ನೋಡು. ಇಲ್ಲಿ ಜನ ಬೇಸತ್ತು ಹೋಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗರ್ದಿ ಗಮ್ಮತ್ತು ಡಬ್ಬಿ ತೋರಿ ಮರಳು ಮಾಡ್ತಿದ್ದಾರೆ. ಗರ್ದಿ ಗಮ್ಮತ್ತು ನೋಡು, ತಾಜಮಹಲ್ ನೋಡು, ಬಿಜಾಪುರ ಗೋಳಗುಮ್ಮಟ ನೋಡೆಂದು ಮೋದಿ ಐದು ಹಾಳಿ ತೋರಿಸುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರ್ ಬಿ ತಿಮ್ಮಾಪುರ ವಾಗ್ದಾಳಿ ಮಾಡಿದ್ದಾರೆ. ಸಿಎಂ ಬಿಎಸ್ವೈ ಕಂಟ್ರೋಲ್ ಮಾಡಲಿಕ್ಕೆ ಗುಜರಾತ್ ನಿಂದ ವ್ಯಕ್ತಿ ನಿಯೋಜಿಸಿದ್ದಾರೆ. ಇಂತಹ ಅಸಹಾಯಕ ಸಿಎಂ ರಾಜ್ಯಕ್ಕೆ ದೊರೆತ ನೋವಿನ ಸಂಗತಿ. ಗುಜರಾತ್ ವ್ಯಕ್ತಿ ನಿಯೋಜಿಸುವ ಬದಲಿಗೆ ಮೋದಿ,ಷಾ, ಗುಜರಾತ್ ದವರನ್ನೇ ಸಿಎಂ ಮಾಡ್ಬೇಕಿತ್ತು ಎಂದು ವ್ಯಂಗ್ಯ ವಾಡಿದ್ದಾರೆ.

ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಬರುತ್ತಿಲ್ಲ. ನಾಳೆ ಬೆಳಗಾವಿಯಲ್ಲಿ ರಾಜ್ಯ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ.

ಕೋಡಿಹಳ್ಳಿ ಶ್ರೀ ಮಧ್ಯಂತರ ಚುನಾವಣೆ ಭವಿಷ್ಯ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಆರ್ ಬಿ ತಿಮ್ಮಾಪುರ,  ಇದೊಂದು ಅನೈತಿಕ ಸರ್ಕಾರ. ಬೇರೆ ಪಕ್ಷದ ಶಾಸಕರನ್ನು ರಾಜೀನಾಮೆ ಕೊಡಿಸಿದ್ರು. ಅನರ್ಹರು ಅಸಮಾಧಾನಗೊಂಡ್ರೆ ದೆಹಲಿಗೆ ಓಡೋದು. ಸಮಾಧಾನ ಮಾಡೋದು,ಹಿಂಗಾದ್ರೆ ಬಹಳದಿನ ಬದಕೋಕೆ ಆಗುತ್ತಾ. ಹಾಲು ಕುಡಿದ ಮಕ್ಕಳೇ ಬದುಕುವುದಿಲ್ಲ. ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರಾ..!? ಎಂದು ಕಿಡಿಕಾರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights