10 ಲಕ್ಷ ಹಣಕ್ಕೆ ಹೆತ್ತ ಮಗಳನ್ನೆ ಮಾರಾಟ ಮಾಡಿದ್ದಾರಾ ತಂದೆ ತಾಯಿ…?

ತುಮಕೂರಿನಲ್ಲಿ 10 ಲಕ್ಷ ಹಣಕ್ಕೆ ಹೆತ್ತ ಮಗಳನ್ನೆ ಮಾರಾಟ ಮಾಡಿದ್ದಾರಾ ತಂದೆ ತಾಯಿ…? ಅಪ್ರಾಪ್ತ ಮಗಳ ಮೇಲೆ ಅತ್ಯಚಾರಕ್ಕೆ ಹೆತ್ತವರೇ ಅಗ್ರಿಮೆಂಟ್ ಮೂಲಕ ಅನುಮತಿ ಮಾಡಿಕೊಟ್ರಾ? ತುಮಕೂರು‌ ಜಿಲ್ಲೆಯಲ್ಲಿ ನಡೆದಿದೆಯಾ…? ನಾಗರೀಕ‌ ಸಮಾಜವೇ ತಲೆ ತಗ್ಗಿಸುವ ಘಟನೆ….? ಹೀಗೊಂದು ಗಂಭೀರ ಆರೋಪವನ್ನು ಕುರಿಹಳ್ಳಿ ಗ್ರಾಮದ ಬಸವಲಿಂಗಯ್ಯ, ಸುಶೀಲಮ್ಮ ದಂಪತಿಗಳ ಮೇಲೆ ಅಳಿಯ ರಾಜಶೇಖರ್ ಮಾಡಿದ್ದಾರೆ.
ಅಳಿಯ ರಾಜಶೇಖರ್ ಗೆ ಮಗಳು ಕಲ್ಪನಾ, ಮಗ ದಯಾನಂದ್ ಸಾಥ್‌ ನೀಡಿದ್ದಾರೆ.  ಬಸವಲಿಂಗಯ್ಯ, ಸುಶೀಲಮ್ಮ ದಂಪತಿ ತಮ್ಮ ಮಗಳು 15 ವರ್ಷದ ಬಾಲಕಿಯನ್ನ 40 ವರ್ಷದ ಗಿರೀಶ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಗಿರೀಶನಿಂದ ಹತ್ತು ಲಕ್ಷ ಹಣ ಪಡೆದು ಮದುವೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಅಳಿಯ ರಾಜಶೇಖರ್ ಮಾಡಿದ್ದಾರೆ.
ಅಗ್ರಿಮೆಂಟ್ ನಲ್ಲಿ ಬಾಲಕಿಯನ್ನ ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಉಲ್ಲೇಖವಿದೆ. ಮತ್ತೊಂದು ಅಗ್ರಿಮೆಂಟ್ ನಲ್ಲಿ ಬೇರೆ ಹುಡುಗರು ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಉಲ್ಲೆಖವಿದೆ. ಮೂರು ಅಗ್ರಿಮೆಂಟ್ ಪೇಪರ್ ಗಳನ್ನ ದಾಖಲೆಯಾಗಿ ಮುಂದಿಡುತ್ತಿರುವ ಅಳಿಯ ರಾಜಶೇಖರ್, 10 ದಿನಗಳಿಂದ ಬಾಲಕಿ, ತಂದೆ ತಾಯಿ‌ ನಾಪತ್ತೆಯಾಗಿದ್ದಾರೆ ಎಂದಿದ್ದಾರೆ.
ಮನೆಗೆ ಬೀಗ ಜಡಿದು ನಾಪತ್ತೆಯಾಗಿರುವ ಬಸವಲಿಂಗಯ್ಯ, ಸುಶೀಲಮ್ಮ ಎಂದು ಅಳಿಯ ರಾಜಶೇಖರ್  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ದಿ ಮತ್ತ ರಕ್ಷಣಾ ಇಲಾಖೆ ಗೆ ದೂರು ನೀಡಿದ್ದಾರೆ. ಇದರ ಸತ್ಯಾಸತ್ಯತೆಗಳ ಬಗ್ಗೆ ತನಿಖೆ ಬಳಿಕ ನಿಖರ ಮಾಹಿತಿ ಸಿಗಲಿದೆ.

Leave a Reply