2002 ರ ಗೋಧ್ರಾ ದಂಗೆ ಪ್ರಕರಣ : ಗುಜರಾತ್ ಸರ್ಕಾರಕ್ಕೆ ನಾನಾವತಿ ಅಯೋಗ ಕ್ಲೀನ್ ಚಿಟ್

2002 ರ ಗೋಧ್ರಾ ದಂಗೆ ಪ್ರಕರಣ ಸಂಬಂಧ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರಕ್ಕೆ ನಾನಾವತಿ ಅಯೋಗ ಕ್ಲೀನ್ ಚಿಟ್ ನೀಡಿದೆ.

ಗೋಧ್ರಾ ದಂಗೆ ಕುರಿತು ನಾನಾವತಿ ಮೆಹ್ತಾ ಆಯೋಗ ಸಿದ್ದಪಡಿಸಿರುವ ವರದಿಯನ್ನು ರಾಜ್ಯ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ದಂಗೆಯಲ್ಲಿ ಸರ್ಕಾರದ ಪಾತ್ರವಿಲ್ಲ. ದಂಗೆ ಕುರಿತು ಸಂಜೀವ್ ಭಟ್​ ಸುಳ್ಳು ಹೇಳಿದ್ದಾರೆ. ಇದು ಪೂರ್ವನಿಯೋಜಿತ ಗಲಭೆಯಲ್ಲ. ಈ ದಂಗೆ ನಿಯಂತ್ರಣಕ್ಕೆ ಮೋದಿ ಯತ್ನಿಸಿದ್ದರು ಎಂದು ಅಂದಿನ ಮೋದಿ ಸರ್ಕಾರಕ್ಕೆ ಕ್ಲೀನ್​ಚಿಟ್​ ನೀಡಲಾಗಿದೆ. ಆಯೋಗದ ಮೊದಲ ವರದಿಯನ್ನು 2008ರಲ್ಲಿ ಮೊದಲ ಬಾರಿಗೆ ಮಂಡಿಸಲಾಗಿತ್ತು. ಮೊದಲ ವರದಿಯಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದರ ಬಗ್ಗೆ  ತಿಳಿಸಲಾಗಿತ್ತು, ಯೋಚಿತ ಪಿತೂರಿಯಿಂದಾಗಿ ಗೋಧ್ರಾ ರೈಲ್ವೆ ಸಮೀಪದಲ್ಲಿ ಸಬರಮತಿ ಎಕ್ಸ್​ಪ್ರೆಸ್​ ರೈಲಿನ 5-6 ಬೋಗಿಗಳಿಗೆ ಬೆಂಕಿ ಇಡಲಾಗಿತ್ತು ಎಂದು ಈ ವರದಿಯಲ್ಲಿ ತಿಳಿಸಲಾಗಿತ್ತು.

ಇನ್ನು ಗೋಧ್ರಾ ದಂಗೆಯಲ್ಲಿ ಅಧಿಕೃತ ಮಾಹಿತಿ ಪ್ರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 1000ಕ್ಕೂ ಹೆಚ್ಚು ಜನರು ಈ ಗಲಭೆಯಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಈ ಘಟನೆ ಕುರಿತು ತನಿಖೆಗೆ 2002ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಯೋಗವನ್ನು ರಚಿಸಿತ್ತು.

Leave a Reply

Your email address will not be published.