ದೇಶದ ಆರ್ಥಿಕ ಅಭಿವೃದ್ಧಿಗೆ ಅಗತ್ಯವಿದ್ದರೆ ಭಾರತಕ್ಕೆ ಹಿಂದಿರುಗುತ್ತೇನೆ – ರಘುರಾಮ್ ರಾಜನ್‌

ಕೊರೊನಾ ವೈರಸ್‌ನಿಂದ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ಒತ್ತಡವನ್ನು ಎದುರಿಸಲು ದೇಶಕ್ಕೆ ತಮ್ಮ ನೆರವಿನ ಅಗತ್ಯವಿದೆ ಎಂದಾದರೆ ದೇಶಕ್ಕೆ ಸಹಾಯ ಮಾಡಲು ತಾವು ಸಿದ್ದರಿರುವುದಾಗಿ ಭಾರತದ ಮಾಜಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ರಘುರಾಮ್ ರಾಜನ್ ಸೂಚಿಸಿದ್ದಾರೆ.

ಯುಎಸ್‌ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ರಘುರಾಮ್‌ ರಾಜನ್‌, ಕೊರೊನಾ ಹರಡುವಿಕೆಯನ್ನು ತೆಡೆಗಟ್ಟಲು ದೇಶವು ಲಾಕ್‌ಡೌನ್‌ ಆಗಿರುವುದರಿಂದಾಗಿ ದೇಶದ ಬ್ಯಾಂಕಿಂಗ್‌ ಕ್ಷೇತ್ರವೂ ಒಳಗೊಂಡಂತೆ ಹಲವಾರು ಆರ್ಥಿಕ ಕ್ಷೇತ್ರಗಳು ಒತ್ತಡಕ್ಕೆ ಒಳಗಾಗಿವೆ. ಈ ಸಂದಿಗ್ಧ ಸಂದರ್ಭದಲ್ಲಿ ಅವರ ನೆರವು ದೇಶಕ್ಕೆ ಅಗತ್ಯವಿದ್ದರೆ ಭಾರತಕ್ಕೆ ಹಿಂದಿರುಗುವುದಾಗಿ ತಿಳಿಸಿದ್ದಾರೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

“ಕೊರೊನಾ ವೈರಸ್‌ ಇಟಲಿ ಮತ್ತು ಅಮೇರಿಕಾದಲ್ಲಿ ಹರಡಿದಂತೆ ಭಾರತದಲ್ಲಿಯೂ ಹರಡಬಹುದು. ಹಾಗಾಗಿ ಅದನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ದೇಶಗಳಲ್ಲಿ ನಾವು ನೋಡಿರುವಂತೆ ಸಾರ್ವಜನಿಕ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರಿದೆ. ಅಬೇಕ ಸಾವುಗಳು ಸಂಭವಿಸಿವೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವುದು ಕಷ್ಟ” ಎಂದು ರಾಜನ್ ಹೇಳಿದ್ದಾರೆ.

“ಪ್ರಪಂಚವು ಆಳವಾದ ಆರ್ಥಿಕ ಹಿಂಜರಿತದಲ್ಲಿದೆ.” ನಾವು ಆಶಾದಾಯಕವಾಗಿ ಮುಂದಿನ ವರ್ಷ ಇದು ಸುಸ್ಥಿರತೆ ಕಾಪಿಟ್ಟುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಇದು ಸುಸ್ಥಿರತೆಗೆ ಬರಬೇಕಾದರೆ, ಅದು ಕೊರೊನಾ ನಿಯಂತ್ರಣಕ್ಕೆ ಮತ್ತುಆರ್ಥಿಕ ಸ್ಥಿರತೆಗೆ ಸರ್ಕಾರಗಳು ತೆಗೆದುಕೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.

ಇಎಂಐಗಳನ್ನು ಮೂರು ತಿಂಗಳವರೆಗೆ ಮುಂದೂಡಲು ಸರ್ಕಾರ ಬ್ಯಾಂಕುಗಳಿಗೆ ಅವಕಾಶ ನೀಡಿದೆ. ವಿಮಾನಯಾನ ಮತ್ತು ಪ್ರವಾಸೋದ್ಯಮವು ಎಲ್ಲಾ ವಿಮಾನಗಳನ್ನು ನಿಲ್ಲಿಸಿದ ನಂತರ ಮತ್ತು ಜನರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಿದ ನಂತರ ಭಾರಿ ನಷ್ಟವನ್ನು ಕಂಡಿದೆ.

“ಭಾರತದಲ್ಲಿನ ಸಮಸ್ಯಗಳ ಛಾಯೆಯು ವಿದೇಶಿ ವಿನಿಮಯ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರೂಪಾಯಿ ಮೌಲ್ಯವು ಡಾಲರ್‌ ವಿರುದ್ಧ ಕುಸಿತ ಕಂಡಿದೆ” ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ತಪ್ಪುಗಳನ್ನು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುವುದರ ಜೊತೆಗೆ ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಿರುವ ರಾಜನ್‌ ಅವರು, ವಿಭಜನೆ ಮತ್ತು ಬಹುಸಂಖ್ಯಾತರ ಓಲೈಕೆಯು ಒಂದು ನಿರ್ಧಿಷ್ಟ ಅವಧಿಯವರೆಗೆ ಚುನಾವಣೆಯಲ್ಲಿ ಗೆಲ್ಲಬಹುದು. ಆದರೆ, ಅದು ದೇಶದ ಅಭಿವೃದ್ಧಿಯನ್ನು ಕುಂದಿಸುತ್ತದೆ ಎಂದು ಅಕ್ಟೋಬರ್ 9 ರಂದು ಬ್ರೌನ್ ವಿಶ್ವವಿದ್ಯಾಲಯದ ವ್ಯಾಟ್ಸನ್ ಇನ್ಸ್ಟಿಟ್ಯೂಟ್ನಲ್ಲಿ ನಡೆದ ಒಪಿ ಜಿಂದಾಲ್ ಉಪನ್ಯಾಸದಲ್ಲಿ ರಾಜನ್ ಹೇಳಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights