ಬೇಯಿಸಿದ ತರಕಾರಿ ಕೊರೊನಾ ತಡೆಗೆ ಹೇಗೆ ಸಹಕಾರಿ? – ಆಹಾರ ತಜ್ಞರ ಸಲಹೆ

ಕೊರೊನಾ ಹರಡುವ ಭೀತಿ ಹೆಚ್ಚಾಗಿರುವುದರಿಂದ ಜನರಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎನ್ನುವ ಪ್ರಶ್ನೆಗಳು ಎದುರಾಗಿವೆ. ಇದರಿಂದ ಯಾವ ರೀತಿಯ ಹಣ್ಣು , ತರಕಾರಿಗಳ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎನ್ನುವ ಪ್ರಶ್ನೆಗಳು ಹಲವಾರು ಜನರಿಗೆ ಇದೆ. ಇದಕ್ಕೆ ಆಹಾರ ತಜ್ಞ, ಡಾ.ಕೆ.ಸಿ ರಘು ಉತ್ತರ ನೀಡಿದ್ದಾರೆ.

ಜೀವನ ಶೈಲಿ ಕಾಯಿಲೆಗಳಿಗೆ ಆಹಾರ ಪದ್ಧತಿ ಮುಖ್ಯವಾಗುತ್ತದೆ. ಬಿಪಿ ,ಶುಗರ್ ಇದ್ದವರಿಗೆ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ಸೋಂಕು ಹರಡು ಸಾಧ್ಯತೆ ಹೆಚ್ಚಾಗಿದೆ. ಇಂತವರು ಆಹಾರ ಪದ್ಧತಿಯನ್ನು ಬದಲಾಯಿಸಿ. ಸಕ್ಕರಿ, ಉಪ್ಪು ಸೇವನೆಯಿಂದ ದೂರವಿರಿ. ಅಧಿಕ ನಾರಿನಾಂಶವಿರುವ ಪದಾರ್ಥಗಳನ್ನ ಸೇವನೆ ಮಾಡಿ. ಸಿರಿ ಧಾನ್ಯಗಳನ್ನು ಬಳಸಿ, ಅನ್ ಪಾಲಿಸ್ಡ್ ಅಕ್ಕಿ, ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿದೆ.

ಮೊದಲಿಗೆ ಹೊರಗಿನಿಂದ ತಂದ ಹಣ್ಣು ತರಕಾರಿಗಳನ್ನು ಸ್ವಚ್ಚ ನೀರಿನಿಂದ ಸ್ವಚ್ಚಗೊಳಿಸಿ. ನಿಮ್ಮ ಕೈಗಳನ್ನು ಹಣ್ಣು ಸ್ವಚ್ಚಗೊಳಿಸುವ ಮುನ್ನ ಮತ್ತು ನಂತರ ಚೆನ್ನಾಗಿ ಸಾನಿಟೈಸರ್ ನಿಂದ ತೊಳೆಯಿರಿ. ಆದಷ್ಟು ಈ ಸಂದರ್ಭದಲ್ಲಿ ಬೇಯಿಸಿದ ತರಕಾರಿಗಳನ್ನು ತಿನ್ನುವುದು ಒಳ್ಳೆದು ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರೋಟೀನ್ ಗಳು ಮುಖ್ಯವಾಗಿದ್ದರಿಂದ ಡ್ರೈ ಫ್ರೂಟ್ಸ್ ಹೆಚ್ಚಾಗಿ ಬಳಸಿ.ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ, ಪ್ರತಿದಿನ 50 ಗ್ರಾಮ್ ಸೊಪ್ಪು ಸೇವಿಸುವುಸರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಂಬೆ, ಕಿತ್ತಳಾ, ಪಪ್ಪಾಯ, ದ್ರಾಕ್ಷಿ ಹಾಗೂ ಸಪೋಟ ಹೀಗೆ ಎಲ್ಲಾ ಹಣ್ಣುಗಳನ್ನು ಸೇವಿಸಬಹದು. ಆದರೆ ಸೇವಿಸುವ ಮುನ್ನ ಚೆನ್ನಾಗಿ ತೊಳೆಯುವುದು ಅತೀ ಮುಖ್ಯವಾಗಿದೆ. ಜೊತೆಗೆ ತರಕಾರಿಗಳನ್ನು ಸ್ವಚ್ಚಗೊಳಿಸಿ ಬೇಯಿಸಿ ಸೇವಿಸಿ ಎಂದು ಆಹಾರ ತಜ್ಞರು ಸಲಹೆ ನೀಡಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights