ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು; ಬೀಳಲಿದೆಯೇ ಮೈತ್ರಿ ಸರ್ಕಾರ

ಮಹಾರಾಷ್ಟ್ರದಲ್ಲಿ ರಾಜಕೀಯ ಮತ್ತೆ ಬುಗಿಲೆದ್ದಿದೆ. ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳಿರುವ ಮಹಾರಾಷ್ಟ್ರದಲ್ಲಿ ಅಲ್ಲಿಯ ಶಿವಸೇನಾ ನೇತೃತ್ವದ ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿ ಸರ್ಕಾರ ಉಲ್ಬಣಗೊಳ್ಳುತ್ತಿರುವ ಸೋಂಕನ್ನು ನಿಯಂತ್ರಿಸುವುದರ ಜೊತೆಗೆ ತಮ್ಮ ಮೈತ್ರಿ ಸರ್ಕಾರವನ್ನೂ ಉಳಿಸಿಕೊಳ್ಳಲು ಎಣಗಾಡಬೇಕಾದ ಸಂದಿಗ್ಧತೆ ಉಂಟಾಗಿದೆ.

ಮೇ 25ರ ಸೋಮವಾರ ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿಯವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ನಂತರ ರಾಜ್ಯದ ರಾಜಕೀಯ ಬಿಕ್ಕಟ್ಟ ಮತ್ತಷ್ಟು ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಶರದ್ ಪವಾರ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕೇರಿ ಅವರೊಂದಿಗೆ ಚರ್ಚೆ ನಡೆಸಿದ್ದು, ಮೈತ್ರಿ ಸರ್ಕಾರ ಸುರಕ್ಷಿತವಾಗಿದೆ. ಯಾವುದೇ  ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ನಾಯಕ ದೇವೇಂದ್ರ ಫಡ್ನವಿಸ್ ಅವರು ಉದ್ದವ್ ಠಾಟ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಿ, ಮುಖ್ಯಮಂತ್ರಿ ಸ್ಥಾನವನ್ನು ಮರಳಿ ಪಡೆಯಲು ಹವಣಿಸುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ಯಾವುದೇ ಸಮಸ್ಯೆಯಿಲ್ಲ. ಎಲ್ಲಾ ಶಾಸಕರೂ ನಮ್ಮೊಂದಿಗಿದ್ದಾರೆ ಎಂದು ಶರದ್ ಪವಾರ್ ಹೇಳಿದ್ದಾರೆ.

ಕಳೆದ ವರ್ಷ ಕರ್ನಾಟಕದಲ್ಲಿ ಮಾಡಿದ ಅನೈತಿಕ ಆಪರೇಷನ್ ಕಮಲವನ್ನು ಮಹಾರಾಷ್ಟ್ರದಲ್ಲಿಯೂ ಮಾಡಲು ಮುಂದಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಅಸಮಧಾನ ಹೊಂದಿರುವ ಶಾಸಕರನ್ನು ಬಲೆಗೆ ಹಾಕಿಕೊಂಡು ಸರ್ಕಾರವನ್ನು ಉರುಳಿಸುವ ಯತ್ನಕ್ಕೆ ಮುಂದಾಗಿದೆ. ಆದರೆ, ನಮ್ಮಲ್ಲಿ ಅತೃಪ್ತರು ಯಾರೂ ಇಲ್ಲ ಎಂದು ಪವಾರ್ ತಿಳಿಸಿದ್ದಾರೆ.

ಅಲ್ಲದೆ, ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಉದ್ದವ್ ಠಾಕ್ರೆ ಅವರಿಗೆ ಕರೆ ಮಾಡಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದು, ಕಾಂಗ್ರೆಸ್‌ ನಿಮ್ಮ ಜೊತೆಗಿರುತ್ತದೆ ಎಂದು ಭರವಸೆ ಕೊಟ್ಟಿದ್ದಾರೆ.

ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಠಾಕ್ರೆ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ‘ನನ್ನ ಮನೆ-ನನ್ನ ಯುದ್ದಭೂಮಿ; ಮಹಾರಾಷ್ಟ್ರವನ್ನು ರಕ್ಷಿಸಿ’ ಘೋಷಣೆಯೊಂದಿಗೆ ಬಾಲ್ಕನಿ ಪ್ರತಿಭಟನೆ ನಡೆಸಿತ್ತು. ಠಾಕ್ರೆ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರೊಂದಿಗೆ ನಡೆಸಿದ ಸಭೆಯಲ್ಲಿ ನಾರಾಯಣ್ ರಾಣೆ ಒತ್ತಾಯಿಸಿದ್ದರು.

ಬಲಪಂಥೀಯ ಚಿಂತಕರು ರಾಜ್ಯ ವಿಧಾನಸಭೆಯಲ್ಲಿ 105 ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ನಿಜವಾದ ಜನಾದೇಶವಿದೆ. ಹಾಗಾಗಿ ಬಿಜೆಪಿಗೆ ಅಧಿಕಾರ ಕೊಡಬೇಕು ಎಂದು ವಾದಿಸುತ್ತಿದ್ದಾರೆ.

ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ 56 ಸ್ಥಾನಗಳನ್ನು ಗೆದ್ದುಕೊಂಡಿತು. ಶಿವಸೇನೆಯು ಬಿಜೆಪಿಯೊಂದಿಗೆ ಉಳಿದ್ದರೆ ಸುಲಭವಾಗಿ ಸರ್ಕಾರವನ್ನು ರಚಿಸಬಹುದಿತ್ತು, 288 ರ ಮನೆಯಲ್ಲಿ, ಆದರೆ ಸೇನಾ ಬಿಜೆಪಿಯ. ಆದರೆ, ಮುಖ್ಯಮಂತ್ರಿಯ ಹುದ್ದೆಗಾಗಿ ಭಿನ್ನಮತ ಎದುರಾಗಿದ್ದರಿಂದ ಶಿವಸೇನೆ ಎನ್‌ಸಿಪಿಯೊಂದಿಗೆ ಮೈತ್ರಿಗೆ ಮುಂದಾಗಿಯಿತು. ಜೊತೆಗೆ ಕೇವಲ 44 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಬೆಂಬಲವೂ ಶಿವಸೇನೆಗೆ ದೊರೆತಾಗ ಬಿಜೆಪಿಗೆ ದೊಡ್ಡ ಆಘಾತವಾಯಿತು.

ಈ “ಅಸ್ವಾಭಾವಿಕ ಮೈತ್ರಿ” ರಚನೆಯಾದಾಗಿನಿಂದ, ಬಿಜೆಪಿ ಮತ್ತು ಅದರ ಬೆಂಬಲಿಗರು ಸರ್ಕಾರವು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಊಹಿಸುತ್ತಿದ್ದಾರೆ. ಕರ್ನಾಟಕದಲ್ಲಾದ ಬೆಳವಣಿಗೆಯ ರೀತಿಯ ಪರಿಸ್ಥಿತಿಯನ್ನು ಮಹಾರಾಷ್ಟ್ರದಲ್ಲಿಯೂ ತಲೆದೂರುವುದೆಂದುಯ ವಾದಿಸುತ್ತಿದ್ದಾರೆ.

ಮತ್ತೊಂದು ಆಪರೇಷನ್ ಕಮಲಕ್ಕೆ ಸಮಯ ಕೂಡಿದೆ ಎಂದು ರಾಜಕೀಯ ವಿಮರ್ಶಕರು ಹೇಳುತ್ತಿದ್ದಾರೆ. ಬಿಜೆಪಿಯು ತನ್ನ ಕುದುರೆ ವ್ಯಾಪಾರದಿಂದ ಕರ್ನಾಟಕ ಮತ್ತು ಮರ್ಧಯಪ್ರದೇಶದಲ್ಲಿದ್ದ ಸರ್ಕಾರಗಳನ್ನು ಉರುಳಿಸಿ, ಅಧಿಕಾರ ಕಿತ್ತುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

“ಕೊರೊನಾ ಲಾಕ್‌ಡೌನ್ ಪ್ರಾರಂಭವು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಪತನದಿಂದ ಗುರುತಿಸಲ್ಪಟ್ಟಿದೆ. ಬಹುಶಃ ಲಾಕ್‌ಡೌನ್ ಅಂತ್ಯವು ಮಹಾರಾಷ್ಟ್ರ ಸರ್ಕಾರದ ಪತನದಿಂದ ಗುರುತಿಸಲ್ಪಡುತ್ತದೆ” ಎಂದು ಹಿರಿಯ ರಾಜಕೀಯ ವೀಕ್ಷಕ ಶ್ರೀ ಆರ್ ರಾಜಗೋಪಾಲನ್ ಹೇಳುತ್ತಾರೆ.

ಇದೆಲ್ಲದರ ನಡುವೆ, ಬಲಪಂಥೀಯ ಮಾಧ್ಯಮಗಳು ಮಹರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಉತ್ಸುಕವಾಗಿವೆ. ನಿನ್ನೆ ರಾತ್ರಿ ಝೀ ನ್ಯೂಸ್‌ ಚಾನಲ್‌ನ ಪ್ರೈಮ್‌ ಟೈಮ್ ಪ್ರೋಗ್ರಾಂನಲ್ಲಿ ಬಿಜೆಪಿ ನಾಯಕ ನಾರಾಯಣ್ ರಾಣೆ ಅವರು ರಾಜ್ಯಪಾಲ ಕೊಶಿಯಾರಿಯವರ ಭೇಟಿಯಾಗಿದ್ದ ಸುದ್ದಿಯನ್ನು ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಪ್ರಮೋಟ್ ಮಾಡಿದ್ದರು.

ಅದರ ವರದಿಗಾರರೊಬ್ಬರು ಮಹಾರಾಷ್ಟ್ರದಲ್ಲಿ “ನೀವು ನೋಡುವುದು ನಿಮಗೆ ಸಿಗುವುದಿಲ್ಲ, ಅದು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ” ಎಂದು ಪ್ರತಿಕ್ರಿಯಿಸಿದ್ದರು. ಕರ್ನಾಟಕದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಉರುಳಿಸುವುದರಲ್ಲಿ ಬಿಜೆಪಿಗಿಂತ  ಮಾಧ್ಯಮಗಳೇ ಹೆಚ್ಚು ತಲೆ ಕೆಡಿಸಿಕೊಂಡಿದ್ದವು. ಎಲ್ಲೆಂದರಲ್ಲಿ ಕ್ಯಾಮೇರಾ ಹಿಡಿದು ರಾಜಕೀಯ ಲೀಡರ್‌ಗಳ ಹಿಂದೆ ಅವರ ಕಾರುಗಳು ಹೋಗುವುದನ್ನೂ ಬಿಡದೆ ಕ್ಯಾಪ್ಚುರ್ ಮಾಡಿ ಸುದ್ದಿ ಮಾಡಿದ್ದವು. ಅಂತಹದ್ದೇ ಕೆಲಸಕ್ಕೆ ಈಗ ಝೀ ನ್ಯೂಸ್‌ ಶುರು ಹಚ್ಚಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights