No pay cut : ದೇಶದ 5 ರಾಜ್ಯಗಳಲ್ಲಿ ಸಂಬಳಕ್ಕೆ ಕುತ್ತು, ರಾಜ್ಯದಲ್ಲಿ ಸದ್ಯ ಇಲ್ಲ ಪೇ ಕಟ್ …

ಕೊರೋನಾ ವಿರುದ್ಧದ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಳ್ಳಲು ಸರಕಾರಿ ನೌಕರರು ಹಾಗೂ ಅಧಿಕಾರಿಗಳ ಜೇಬಿಗೆ ಕೈಹಾಕದಿರಲು ರಾಜ್ಯ ಸರಕಾರ ತೀರ್ಮಾನಿಸಿದೆ. ದೇಶದ ಹಲವು ರಾಜ್ಯಗಳು ಈಗಾಗಲೇ ತಮ್ಮ ನೌಕರರು ಹಾಗೂ ಅಧಿಕಾರಿಗಳ ಸಂಬಳ ಕಟ್ ಮಾಡಿ ಆದೇಶ ಹೊರಡಿಸಿದ್ದರೂ ರಾಜ್ಯ ಸರಕಾರ ಅಂತಹ ಚಿಂತನೆಯಲ್ಲಿಲ್ಲ.

ಲಾಕ್‌ಡೌನ್‌ ವಿಸ್ತರಣೆ ಆಗದೇ ನಿಗದಿತ ದಿನದಂದೇ ಕೊನೆಗೊಂಡರೇ ಏನೂ ತೊಂದರೆ ಇಲ್ಲ. ವಿಸ್ತರಣೆ ಆದಲ್ಲಿ ಸಂಬಳ ಕಡಿತದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.  ಸದ್ಯದ ಮಟ್ಟಿಗಂತೂ ಸರಕಾರಿ ನೌಕರರ ಜೇಬಿಗೆ ಕತ್ತರಿ ಹಾಕುವಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು ಹಣಕಾಸು ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.

ಕೊರೋನಾ ತಂದಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಈಗಾಗಲೇ ಆರು ರಾಜ್ಯಗಳಲ್ಲಿ ಸರಕಾರಿ ನೌಕರರು ಅಧಿಕಾರಿಗಳ ಸಂಬಳದಲ್ಲಿ ಭಾರೀ ಕಡಿತ ಘೊಷಿಸಲಾಗಿದೆ. ತೆಲಂಗಾಣದಿಂದ ಆರಂಭವಾದ ಈ ಕಡಿತ ಮಾದರಿಯನ್ನು ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಾಸ್ಥಾನಗಳಲ್ಲಿ ಸಹ ಕಾರ್‍ಯರೂಪಕ್ಕೆ ತರಲಾಗಿದೆ.

ಈ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಜನ ಪ್ರತಿನಿಧಿಗಳು ಆಡಳಿತ ಸೇವೆಯ ವಿವಿಧ ಮಜಲಿನ ಅಧಿಕಾರಿಗಳು, ಎ,ಬಿ,ಸಿ ದರ್ಜೆ ಸರಕಾರಿ ನೌಕರರ ವೇತನವನ್ನು ಕಡಿತಗೊಳಿಸಿ ಆದೇಶ ಜಾರಿ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights