ರಷ್ಯಾದ ಪರ್ಮ್ ವಿವಿಯಲ್ಲಿ ಅಪರಿಚಿತನಿಂದ ಗುಂಡಿನ ದಾಳಿ : ಎಂಟು ಜನ ಬಲಿ – ವಿಡಿಯೋ ವೈರಲ್!
ರಷ್ಯಾದ ಪರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಪರಿಚಿತನಿಂದ ಗುಂಡಿನ ದಾಳಿಗೆ ಎಂಟು ಜನ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.
ಸೋಮವಾರ ಮುಂಜಾನೆ ಪರಿಚಿತನೊಬ್ಬ ರಷ್ಯಾದ ಪರ್ಮ್ ಸ್ಟೇಟ್ ಯೂನಿವರ್ಸಿಟಿಯ ಕೊಠಡಿಗೆ ಆಗಮಿಸಿ ಮನಸೋ ಇಚ್ಚೆ ಫೈರಿಂಗ್ ಮಾಡಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ವಿದ್ಯಾರ್ಥಿಗಳು ಹಾರಿದ್ದಾರೆ. ಆರೇಳು ಅಡಿ ಎತ್ತರದಿಂದ ಕೆಲ ವಿದ್ಯಾರ್ಥಿಗಳು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ ಫೈರಿಂಗ್ ವೇಳೆ ಆರು ಗಾಯಗೊಂಡಿದ್ದಾರೆನ್ನಲಾಗುತ್ತಿದೆ. ಎಂಟು ಜನ ಮೃತಪಟ್ಟಿದ್ದಾರೆನ್ನಲಾಗುತ್ತಿದೆ. ವರದಿಗಳ ಪ್ರಕಾರ ಸದ್ಯ ದಾಳಿಕೋರರನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯ ವೀಡಿಯೋಗಳು ವೈರಲ್ ಆಗಿವೆ.
Вооруженный человек вошел в здание университета и открыл стрельбу. pic.twitter.com/sQCh7JoHSb
— Рустем Адагамов (@adagamov) September 20, 2021