ಫ್ಯಾಕ್ಟ್‌ಚೆಕ್: ‘ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ’ ಎಂದು JNU ನಲ್ಲಿ ಬರೆದದ್ದು ಈ ವಿದ್ಯಾರ್ಥಿಗಳಾ ?

JNU ವಿಶ್ವವಿದ್ಯಾಲಯದ 2ನೇ ಮತ್ತು 3ನೇ ಮಹಡಿಗಳ ಗೋಡೆಗಳ ಮತ್ತು ಅಧ್ಯಾಪಕರ ಬಾಗಿಲುಗಳ ಮೇಲೆ ಆಕ್ಷೇಪಾರ್ಹ ಘೋಷಣೆಗಳಿಂದ ಚಿತ್ರಿಸಲ್ಪಟ್ಟಿದ್ದೇ ವಿವಾದಕ್ಕೆ ಕಾರಣವಾಗಿದೆ. ‘ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ, ಬ್ರಾಹ್ಮಣ ಭಾರತ್ ಛೋಡೋ, ನಾವು ಸೇಡು ತೀರಿಸಿಕೊಳ್ಳುತ್ತೇವೆ. ಈ ರಕ್ತಪಾತವನ್ನು ತಪ್ಪಿಸಲು JNU ಬಿಟ್ಟು ಹೊರಡಿ’ ಎಂದು ಗೋಡೆ ಮೇಲೆ ಬರೆಯಲಾಗಿದೆ.

JNU ನಲ್ಲಿ ಇತ್ತೀಚೆಗೆ ಬ್ರಾಹ್ಮಣ ವಿರೋಧಿ ಘೋಷಣೆಯ ಬರಹಗಳನ್ನು ಬರೆಯುವ ಮೂಲಕ ವಿವಾದ ಸೃಷ್ಟಿಯಾಗಿತ್ತು. ಈ ಬರಹಗಳನ್ನು ಬರೆದವರಲ್ಲಿ ಈ ಮೂವರು ಭಾಗಿಯಾಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಕೊಲಾಜ್ ಮಾಡಲಾದ ಫೋಟೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

JNU ನಲ್ಲಿ ಬ್ರಾಹ್ಮಣ ವಿರೋಧಿ ಬರಹಗಳನ್ನು ಬರೆದಿರುವ ಚಿತ್ರ ಎಂದು 3 ಗಾಯಗೊಂಡ ವ್ಯಕ್ತಿಗಳ ಚಿತ್ರಗಳನ್ನು ಸಾಮಾಜಿಕ ಮಾಧಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಕೊಲಾಜ್ ಫೋಟೋವನ್ನು ಗೂಗಲ್ ಸರ್ಚ್ ಮಾಡಿದಾಗ, ಅದೇ ಚಿತ್ರಗಳನ್ನು 02 ಡಿಸೆಂಬರ್ 2022 ರಂದು ಫೇಸ್‌ಬುಕ್ ಪುಟದಲ್ಲಿ ‘Campaign Against State Repression (CASR)’ ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ ಲಭ್ಯವಾಗಿದೆ.

ಪೋಸ್ಟ್‌ ವಿವರಣೆಯ ಪ್ರಕಾರ, ಡಿಸೆಂಬರ್ 01 ರ ಸಂಜೆ, ಸುಮಾರು 36 ಸಂಘಟನೆಗಳ Campaign Against State Repression CASRನ ಸದಸ್ಯರು ಪ್ರೊ. ಸಾಯಿಬಾಬಾ ಮತ್ತು ಇತರ ರಾಜಕೀಯ ಕೈದಿಗಳ ಬಿಡುಗಡೆಗೆ ಒತ್ತಾಯಿಸಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಚಾರ ನಡೆಸುತ್ತಿದ್ದರು, ಆಗ CASR ಮತ್ತು ABVP ಸದಸ್ಯರ ನಡುವೆ ಮಾರಾಮಾರಿ ನಡೆಯಿತು. ಇದರಿಂದ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ನಂತರ ಗಾಯಾಳುಗಳನ್ನು ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಎರಡು ಗುಂಪುಗಳ ವಿರುದ್ಧ ಮಾರಿಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಫ್‌ಐಆರ್ ಪ್ರತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಗಾಯಗೊಂಡ ವಿದ್ಯಾರ್ಥಿಗಳನ್ನು ಅಕ್ಷ್ ನೇಗಿ, ಡಿಯು ಪದವಿ ವಿದ್ಯಾರ್ಥಿ ಎಂಟ್ಮಾಮ್-ಉಲ್-ಹಕ್, ಜಾಮಿಯಾ ಮಿಲಿಯಾ ಎಂದು ಗುರುತಿಸಲಾಗಿದೆ. ಈ ಸಮಸ್ಯೆಗೆ ಸಂಬಂಧಿಸಿದ ಇತರ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದಲ್ಲದೆ, ಮಾಧ್ಯಮ ವರದಿಗಳ ಪ್ರಕಾರ,ಬ್ರಾಹ್ಮಣ ವಿರೋಧಿ ಬರಹಗಳನ್ನ ಗೋಡೆಗಳ ಮೇಲೆ ಬರೆಯಲಾಗಿತ್ತು. ಈ ಸಂಬಂಧ JNU ಉಪಕುಲಪತಿಯಾದ ಶಾಂತಿಶ್ರೀ ಧೂಳಿಪುಡಿ ಪಂಡಿತ್​ ತನಿಖೆಗೆ ಆದೇಶ ನೀಡಿದ್ದಾರೆ. ಎಂದು ಉಲ್ಲೇಖಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿದ್ಯಾರ್ಥಿ ಚಿತ್ರಗಳಿಗೂ, JNU ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆದವರಿಗೂ ಸಂಬಂಧವಿಲ್ಲ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ಯಾವುದೇ ವ್ಯಕ್ತಿಗಳ ವಿವರಗಳನ್ನು ಇನ್ನು ಬಹಿರಂಗ ಪಡಿಸಲಾಗಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ಕಳ್ಳ ಮತದಾನ ಎಂದು ವಿಡಿಯೋ ವೈರಲ್! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights