ಫ್ಯಾಕ್ಟ್‌ಚೆಕ್ : ಬಂಧನದ ವೇಳೆ ಕುಸ್ತಿಪಟುಗಳು ನಗುತ್ತಾ ಸೆಲ್ಫಿ ತೆಗೆದುಕೊಂಡರೇ?

ದೇಶಕ್ಕೆ ಒಲಂಪಿಕ್ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ನೆನ್ನೆ (ಭಾನುವಾರ) ಬಂಧಿಸಿದ್ದಾರೆ. ಜಂತರ್‌ಮಂತರ್‌ನಲ್ಲಿ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ದೇಶದ ಮಹತ್ವದ ಕುಸ್ತಿಪಟುಗಳನ್ನು ಎಳೆದಾಡಿ ವಶಕ್ಕೆ ಪಡೆಯಲಾಗಿದೆ.

ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಹೊಸ ಸಂಸತ್ತಿನ ಕಟ್ಟಡದ ಕಡೆಗೆ ಕುಸ್ತಿಪಟುಗಳು ತೆರಳಲು ಪ್ರಯತ್ನಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಮಹಿಳಾ ಮಹಾಪಂಚಾಯತ್ ನಡೆಸುವ ಮೂಲಕ ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕುಸ್ತಿಪಟುಗಳು ಬಯಸಿದ್ದರು.

Image

ಸಂಗೀತಾ ಫೋಗಟ್ ಮತ್ತು ವಿನೇಶ್ ಫೋಗಟ್ ಅವರನ್ನು ಬಂಧಿಸಿ ಕರೆದೊಯ್ಯೂವಾಗ ಇಬ್ಬರು ನಗುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಸದ್ಯ ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ತಮ್ಮ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದ್ದಾರೆ. ಹಾಗಿದ್ದರೆ ಪೋಗಟ್ ಸಹೋದರಿಯರು ನಿಜವಾಗಿಯೂ ನಗುತ್ತಿದ್ದರೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಸಂಗೀತಾ ಫೋಗಟ್ ಮತ್ತು ವಿನೇಶ್ ಫೋಗಟ್ ಅವರನ್ನು ಬಂಧಿಸಿ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ನಗುತ್ತಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ಚಿತ್ರವನ್ನು ಎಡಿಟ್ ಮೂಲಕ ಕ್ರಾಪ್ ಮಾಡಲಾಗಿದೆ ಎಂದು NDTV ವರದಿ ಮಾಡಿದೆ.

ಬಜರಂಗ್ ಪುನಿಯಾ ಅವರು ಎರಡು ಫೋಟೋಗಳನ್ನು ಟ್ವೀಟ್ ಮಾದಿದ್ದು ಒಂದರಲ್ಲಿ ಕುಸ್ತಿಪಟುಗಳು ನಗುತ್ತಿದ್ದು ಮತ್ತೊಂದರಲ್ಲಿ ದುಖಃದಿಂದ ಕುಳಿತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಒಂದು ಅಸಲಿ ಫೋಟೋ ಆಗಿದೆ. ಮತ್ತೊಂದು ನಕಲಿ ಫೋಟೋದಲ್ಲಿ ಸಂಗೀತಾ ಫೋಗಟ್ ಮತ್ತು ವಿನೇಶ್ ಫೋಗಟ್ ನಗುತ್ತಿದ್ದಾರೆ ಎಂದು ಎಡಿಟ್ ಮಾಡಲಾದ ಫೋಟೊವನ್ನು ಹಂಚಿಕೊಂಡಿದ್ದಾರೆ.

“ಐಟಿ ಸೆಲ್‌ನವರು ಈ ರೀತಿ ಮಾರ್ಪಡಿಸಿದ ಚಿತ್ರಗಳನ್ನು ವೈರಲ್ ಮಾಡುವ ಮೂಲಕ ಪ್ರತಿಭಟನೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ನಕಲಿ ಚಿತ್ರವನ್ನು ಪೋಸ್ಟ್ ಮಾಡಿದವರ ವಿರುದ್ಧ ದೂರು ದಾಖಲಿಸಲಾಗುವುದು” ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.

 

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಪೆಡರೇಷನ್‌ ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ಬಂಧನ ಮಾಡಬೇಕೆಂದು ಆಗ್ರಹಿಸಿ ಕುಸ್ತಿಪಟುಗಳು ಒಂದು ತಿಂಗಳಿಗಿಂತ ಹೆಚ್ಚು ಕಾಲ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

 

 

Image

ಜಂತರ್ ಮಂತರ್‌ನಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ. ವಿನೇಶ್ ಫೋಗಟ್ ಮತ್ತು ಅವರ ಸೋದರಸಂಬಂಧಿ ಸಂಗೀತಾ ಫೋಗಟ್ ಬ್ಯಾರಿಕೇಡ್‌ಗಳನ್ನು ಭೇದಿಸಲು ಪ್ರಯತ್ನಿಸಿದಾಗ ಕುಸ್ತಿಪಟುಗಳು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ತಿಕ್ಕಾಟ ನಡೆಯಿತು.

ಪೊಲೀಸರು ಎಳೆದಾಡುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿರುವ ಸಾಕ್ಷಿ ಮಲ್ಲಿಕ್‌, “ನಮ್ಮ ಚಾಂಪಿಯನ್‌ಗಳನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಜಗತ್ತು ನಮ್ಮನ್ನು ನೋಡುತ್ತಿದೆ” ಎಂದು ನೊಂದು ನುಡಿದಿದ್ದಾರೆ.

ಕುಸ್ತಿಪಟುಗಳ ನಗುತ್ತಿರುವ ನಕಲಿ ಫೋಟೊಗಳನ್ನು ಹಂಚಿಕೊಂಡಿರುವುದಕ್ಕೆ ವ್ಯಾಪಕ ಆಕ್ರೊಶ ವ್ಯಕ್ತವಾಗಿದೆ. ದೇಶಕ್ಕಾಗಿ ಪದಕ ಗೆದ್ದುಕೊಟ್ಟ ಕುಸ್ತಿಪಟುಗಳಿಗೆ ಈ ರೀತಿ ಅವಮಾನ ಮಾಡುವುದು ಒಳ್ಳೆಯದಲ್ಲ ಎಂದು ಹಲವರು ಹೇಳಿದ್ದಾರೆ.

ಇನ್ನೂ ಕೆಲವರು ಆ ರೀತಿ ಫೋಟೊ ಮಾರ್ಪಡಿಸುವ ವಿಡಿಯೋ ಹಂಚಿಕೊಂಡಿದ್ದು, ಬಿಜೆಪಿ ಐಟಿ ಸೆಲ್ ಕುಸ್ತಿಪಟುಗಳಿಗೆ ಅವಮಾನ ಮಾಡಲು, ಅವರ ವ್ಯಕ್ತಿತ್ವ ಹಾಳು ಮಾಡಲು ಇಷ್ಟು ಕೆಳ ಮಟ್ಟಕ್ಕೆ ಇಳಿಯಬಾರದು ಎಂದು ಆರೋಪಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕುಸ್ತಿಪಟುಗಳನ್ನು ಬಂಧಿಸಿ ಕರೆದೊಯ್ಯುತ್ತಿರುವ ಚಿತ್ರವನ್ನು ಎಡಿಟ್ ಮಾಡಿ ಕುಸ್ತಿಪಟುಗಳು ನಗುತ್ತಿರುವಂತೆ ಮಾರ್ಫ್ ಮಾಡಿ ತಪ್ಪಾಗಿ ಚಿತ್ರಿಸಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದು ನಿಜವೇ? ವಾಸ್ತವ ಇಲ್ಲಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್ : ಬಂಧನದ ವೇಳೆ ಕುಸ್ತಿಪಟುಗಳು ನಗುತ್ತಾ ಸೆಲ್ಫಿ ತೆಗೆದುಕೊಂಡರೇ?

  • May 29, 2023 at 3:14 pm
    Permalink

    IT ಸೆಲ್ ನವರ ಈ ಕೃತ್ಯ ಹಣಕ್ಕಾಗಿ ವೇಶ್ಯಾವಾಟಿಕೆದಂದೆ ನಡೆಸುವವರ ಕೃತ್ಯಕ್ಕಿಂತ ಹೇಯ ಹಾಗೂ ಹೀನಾಯವಾಗಿದೆ,ತೂ ಬೆವರ್ಷಿಗಳ ಒಬ್ಬ ಹೀನಸುಳಿಯ ಸಂಸದನನ್ನ ಮತ್ತು ಅವನ ರಾಜಕೀಯ ಪಕ್ಷವನ್ನ ರಕ್ಷಣೆ ಮಾಡೋಕೋಸ್ಕರ ಇಷ್ಟು ಕೀಳು ಮಟ್ಟಕ್ಕೆ ಇಳಿಯಬೇಕೆ? ಬೆವರ್ಸಿಗಳ ನಿಮ್ಮ ಅಕ್ಕ,ತಂಗಿ ಮಗಳಿಗೆ ಸಂಸದನಿಂದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆದಿದ್ದರೆ ಇದೆ ಕೆಲಸ ಮಾಡುತ್ತಿದ್ದೀರಾ? ಕನಿಷ್ಠ ಮಾನ ಮರ್ಯಾದೆ ಇದ್ದರೆ ಆತ್ಮಾವಲೋಕನ ಮಾಡಿ ಕೊಳ್ಳಿ.

    Reply

Leave a Reply

Your email address will not be published.

Verified by MonsterInsights