45ನೇ ವರ್ಷಕ್ಕೆ ಕಾಲಿಟ್ಟ ಕಿಚ್ಚಾ : ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 45ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿದ್ದಾರೆ.

ಜೆಪಿ ನಗರದ ಸುದೀಪ್ ನಿವಾಸದ ಬಳಿ ರಾತ್ರಿಯಿಂದಲೇ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ನಟನನ್ನು ಕಂಡು ಶುಭಾಶಯ ಹೇಳಿದ್ದಾರೆ. ಸುದೀಪ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಮೊದಲೇ ನಿರ್ಧರಿಸಿದ್ದು, ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.

ಅವರ ಹುಟ್ಟುಹಬ್ಬಕ್ಕೆ ಕೇಕ್, ಹೂವು, ಪಟಾಕಿ ತರದಂತೆ ಅಭಿಮಾನಿಗಳಿಗೆ ಮೊದಲೇ ಹೇಳಿರುವ ಸುದೀಪ್ ಹಣವನ್ನು ಸಮಾಜಸೇವೆಗೆ ಬಳಸುವಂತೆ ತಿಳಿಸಿದ್ದಾರೆ. ಅಂತೆಯೇ ಅವರ ಅಭಿಮಾನಿಗಳು ವಿವಿಧ ಕಡೆಗಳಲ್ಲಿ ಸೇವಾ ಕಾರ್ಯಗಳ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ರಾತ್ರಿ ಜೆಪಿ ನಗರದ ನಿವಾಸದ ಸುದೀಪ್ ಮನೆ ಬಳಿ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ನಟನನ್ನು ಕಂಡು ಘೋಷಣೆ ಕೂಗಿ ಅಭಿನಂದಿಸಿದ್ದಾರೆ. ಸುದೀಪ್, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published.