5 ಜಿ ಸೇವೆಗಾಗಿ ಒಗ್ಗೂಡಿದ ಟೆಲಿಕಾಂ ಕಂಪನಿಗಳು

ಬಾರ್ಸಿಲೋನಾ: 4 ಜಿ ಟೆಲಿಕಾಂ ತಂತ್ರಜ್ಞಾನದಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಮತ್ತು 5ಜಿ ಟೆಲಿಕಾಂ ವಾಣಿಜ್ಯೀಕರಣದ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಟೆಲಿಕಾಂ ಆಪರೇಟರ್ ಜತೆಯಾಗಿ ರಂಗಕ್ಕಿಳಿದಿದ್ದಾರೆ. ಚೀನಾ ಮೊಬೈಲ್ಗಳು ಸೇರಿದಂತೆ ಏರ್ಟೆಲ್, ವೊಡಾಫೋನ್, ಭಾರ್ತಿ ಏರ್ಟೆಲ್ ಮೊದಲಾದ ಕಂಪನಿಗಳು ಈ ರಂಗದಲ್ಲಿ ಮುಂದೆ ಬಂದಿವೆ.

ಏರ್ಟೆಲ್ ಚೇರ್ಮೆನ್ ಸುನಿಲ್ ಭಾರ್ತಿ ಮಿತ್ತಲ್, ಚೀನಾ ಮೊಬೈಲ್ ಚೇರ್ಮೆನ್ ಶಾಂಗ್ ಬಿಂಗ್, ಸಾಫ್ಟ್ ಬ್ಯಾಂಕ್ ಚೇರ್ಮೆನ್ ಮಸಯೊಷಿ ಸನ್, ಕೆಟಿ ಚೇರ್ಮೆನ್ ಚಾಂಗ್ ಗ್ಯೂ ಹ್ವಾಂಗ್, ವೊಡಾಫೋನ್ ಚೇರ್ಮೆನ್ ವಿಟ್ಟೋರಿಯೋ ಕೊಲಾವೋ ಮೊದಲಾದವರು ಜೆಟಿಐ 2.0 ಎಂಬ ಹೆಸರಿನ 5 ವರುಷದ ಕರಾರು ಪದ್ಧತಿಯನ್ನು ಪ್ರಕಟಿಸಿದ್ದಾರೆ.

ಜಗತ್ತಿನ ಅತೀ ದೊಡ್ಡ ಟೆಲಕಾಂ ಸೇವಾ ಕಂಪನಿಯಾದ ಚೀನಾ ಮೊಬೈಲ್ ಸೇರಿದಂತೆ 122 ಟೆಲಿಕಾಂ ಸೇವಾ ಕಂಪನಿಗಳು ಮತ್ತು ಟೆಲಿಕಾಂ ವ್ಯವಹಾರದಲ್ಲಿನ 103 ಕಂಪನಿಗಳ ಒಕ್ಕೂಟವಾಗಿದೆ ಜಿಟಿಐ.

Comments are closed.