‘6 ಕೋಟಿ ಜನರಿಗೆ ಸಿಎಂ ಆಗೋ ಆಸೆ, ಆದರೆ ಬಿಎಸ್ ವೈ ಗೆ ಮಾತ್ರ ಅದೃಷ್ಟ’ : ಕತ್ತಿಗೆ ಕಾರ ವ್ಯಂಗ್ಯ

ಉಮೇಶ ಕತ್ತಿ ಸಿಎಂ ಆಗುವ ಅರ್ಹತೆ ಇದೆ ಅನ್ನೋ ಹೇಳಿಕೆಗೆ ಮುಧೋಳದಲ್ಲಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಅರ್ಹತೆಯಷ್ಟೇ ಅಲ್ಲ ಅದೃಷ್ಟವಿರಬೇಕೆಂದು ಕತ್ತಿ ವರಸೆಗೆ ಕಾರಜೋಳ ಟಾಂಗ್ ಕೊಟ್ಟಿದ್ದಾರೆ.

ಖಂಡಿತವಾಗಿ ಈ ರಾಜ್ಯದ ಆರೂವರೆ ಕೋಟಿ ಜನರಿಗೂ ಮುಖ್ಯಮಂತ್ರಿ ಆಗೋ ಅಹ೯ತೆ ಇದೆ. ಇದರಲ್ಲೇನೂ ತಪ್ಪಿಲ್ಲವೆಂದು ವ್ಯಂಗ್ಯವಾಡಿದ್ದಾರೆ. ಪ್ರತಿಯೊಬ್ಬರು ಅಹ೯ತೆ ಇದ್ದವರೇ. ಆದ್ರೆ ಅವಕಾಶ ಕೆಲವರಿಗೆ ಅದೃಷ್ಟವಿದ್ದರೆ ಮಾತ್ರ ಸಿಗುತ್ತೇ. ಅಂತಹ ಅದೃಷ್ಟವಂತರು ಯಡಿಯೂರಪ್ಪನವರು, ಅವ್ರು ಮುಖ್ಯಮಂತ್ರಿ ಆಗಿದ್ದಾರೆ.

ಬರೀ ಅದೃಷ್ಟವಂತರಲ್ಲ, ಸುಮಾರು ೪೫ ವಷ೯ಗಳ ಕಾಲ ನಿರಂತರ ಹೋರಾಟ ಮಾಡಿದ್ದಾರೆ. ಒಬ್ಬರಿಂದ ನೂರಾ ಹತ್ತರವರೆಗೆ ಶಾಸಕರನ್ನು ಗೆದ್ದಿಸಿರುವ ಕೀತಿ೯ ಯಡಿಯೂರಪ್ಪನವರಿಗೆ ಸಲ್ಲುತ್ತೇ. ಅವರ ಹೋರಾಟದ ಪ್ರತಿಫಲ, ಅವರು ಹೋರಾಟಗಾರರು ಬಿಎಸ್ವೈ ಸಿಎಂ ಆಗಿದ್ದಾರೆ. ನಾವು ಫಲಾನುಭವಿಗಳು. ಅವರು ಜೊತೆ ಸಕಾ೯ರ ನಡೆಸಿ ಪಕ್ಷ ಕಟ್ಟಿ ಬೆಳೆಸಬೇಕಿದೆ ಎಂದು ಉಮೇಶ್ ಕತ್ತಿಗೆ ಗುದ್ದಿದ್ದಾರೆ ಗೋವಿಂದ ಕಾರಜೋಳ.

ಬೈ ಎಲೆಕ್ಷನ್ ನಲ್ಲಿ ಅರಯನರ್ಹರಿಗೆ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ವಿಚಾರ ಮಾತನಾಡಿದ ಕಾರಜೋಳ, ನಮ್ಮದೊಂದು ದೇಶದಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷ. ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ಅತಿಹೆಚ್ಚು ಸದಸ್ಯರನ್ನ ಹೊಂದಿರೋ ಪಕ್ಷ. ಅದನ್ನ ನಿಭಾಯಿಸೋ ಶಕ್ತಿ ಸಾಮಥ್ಯ೯ ನಮ್ಮ ನಾಯಕರಿಗಿದೆ. ಅನಹ೯ರ ವಿಚಾರ ಕೋಟ೯ನಲ್ಲಿದೆ. ನಮ್ಮದೊಂದು ರಾಷ್ಟ್ರೀಯ ಪಕ್ಷ, ನಮ್ಮ ರಾಷ್ಟ್ರೀಯ ಅಧ್ಯಕ್ಷರು ನಿಣ೯ಯ ಮಾಡ್ತಾರೆ ಎಂದರು.

ಉತ್ತರ ಕನಾ೯ಟಕಕ್ಕೆ ಅನ್ಯಾಯವಾದ್ರೆ ಮತ್ತೇ ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಧ್ವನಿ ಎತ್ತುವ ಹೇಳಿಕೆ ವಿಚಾರ ಮಾತನಾಡಿದ ಕಾರಜೋಳ ಅವರು, ನಾನು ಉಳಿದವರಂತೆ ಮಾತನಾಡೋಕೆ ಆಗಲ್ಲ. ನಾನು ಕನಾ೯ಟಕ ಏಕೀಕರಣಕ್ಕಾಗಿ ಹೋರಾಡಿ ಜೈಲು ಶಿಕ್ಷೆ ಅನುಭವಿಸಿ ಬಂದ ಕುಟುಂಬದವನು‌. ನಮ್ಮ ಸೋದರ ಮಾವ ಹೋರಾಟ ಮಾಡಿದ್ದಕ್ಕಾಗಿ ಕನಾ೯ಟಕ ಸುವಣ೯ ಮಹೋತ್ಸವದಲ್ಲಿ ಸಕಾ೯ರ ಗೌರವಿಸಿದೆ‌.

ಅಂತಹ ಕುಟುಂಬದಿಂದ ಬಂದು ಒಡಕಿನ ಮಾತಾಡೋದು ನನಗಾಗೋದಿಲ್ಲ. ಯಾಕೆಂದರೆ ಕನಾ೯ಟಕ ಒಂದಾಗಿರಬೇಕು. ಕನ್ನಡನಾಡು ಒಂದಾಗಿರಬೇಕು, ಕನಾ೯ಟಕ ಅಗ್ರಸ್ಥಾನದಲ್ಲಿರಬೇಕೆಂದು ಬಂದ ಕುಟುಂಬದವನು. ಕನಾ೯ಟಕ ಏಕೀಕರಣಕ್ಕಾಗಿ ಸಾಕಷ್ಟು ಜನ ಮನೆ ಮಠ ಕಳೆದುಕೊಂಡು ಹೋರಾಟ ಮಾಡಿದ್ದಾರೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights