70ನೇ ವಿಧಿ ರದ್ದತಿ ಸಂವಿಧಾನ ಪೀಠಕ್ಕೆ, ಏನು ಮಾಡಬೇಕು ನಮಗೆ ಗೊತ್ತಿದೆ: ಕೇಂದ್ರಕ್ಕೆ ಸುಪ್ರಿಂ ಚಾಟಿ

ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ದತಿ ಪರಾಮರ್ಶೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಕೇಂದ್ರ ಸರಕಾರಕ್ಕೆ ಕೆಲ ’ಬುದ್ಧಿಮಾತು’ ಹೇಳಿದ್ದಾರೆ.

ಈ ಪರಾಮರ್ಶೆಯಿಂದ ಅಂತಾರಾಷ್ಟ್ರೀಯ ಆಯಾಮಗಳನ್ನು ಪಡೆದುಕೊಳ್ಳುತ್ತದೆ ಎಂಬ ಕೇಂದ್ರದ ವಾದವನ್ನು ತಳ್ಳಿಹಾಕಿದ ಸಿಜೆ ’ನಮಗೆ ಏನು ಮಾಡಬೇಕೆಂದು ಗೊತ್ತಿದೆ’ ಎಂದು ಖಡಕ್ಕಾಗಿ ಹೇಳಿದ ಘಟನೆ ಬುಧವಾರ ನಡೆದಯಿತು.

ಈ ಮಧ್ಯೆ 370ನೇ ವಿಧಿ ರದ್ದತಿ ವಿರುದ್ಧದ ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟು ಅದರ ವಿಚಾರಣೆಯನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿದ್ದು ಮುಂದಿನ ತಿಂಗಳು ವಿಚಾರಣೆ ನಡೆಸುವುದಾಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಕಾಶ್ಮೀರ ಟೈಮ್ಸ್ ಕಾರ್ಯಕಾರಿ ಸಂಪಾದಕಿ ಅನುರಾಧ ಭಾಶಿನ್ ಸಲ್ಲಿಸಿದ್ದ ಮನವಿಗೆ ಸಂಬಂಧಪಟ್ಟಂತೆ ನೊಟೀಸ್ ಜಾರಿ ಮಾಡಿ ಇನ್ನು ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಮಾಧ್ಯಮಗಳಿಗೆ ಉತ್ತಮ ವಾತಾವರಣ ಕಲ್ಪಿಸಿ ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಲು ಮೊಬೈಲ್, ಇಂಟರ್ನೆಟ್ ಸೇವೆಗಳು ಸೇರಿದಂತೆ ಎಲ್ಲಾ ರೀತಿಯ ಸಂವಹನ ವಿಧಾನಗಳನ್ನು ಮರುಸ್ಥಾಪಿಸಲು ಆದೇಶ ನೀಡುವಂತೆ ಅನುರಾಧ ಬಾಶಿನ್ ಅರ್ಜಿಯಲ್ಲಿ ತಿಳಿಸಿದ್ದಾರೆ.

Leave a Reply