ಈ ವಾರ ಕನ್ನಡದ 9 ಚಿತ್ರಗಳು ತೆರೆಗೆ, ಪ್ರೇಕ್ಷಕರ ಮನ ಗೆಲ್ಲುವ ಚಿತ್ರ ಯಾವುದು?

ಚಿತ್ರರಂಗದಲ್ಲಿ ಈ ರೀತಿಯ ಬೆಳವಣಿಗೆಗಳಾದರೆ ಕನ್ನಡ ಚಿತ್ರದ ನಿರ್ಮಾಪಕರ ಗತಿ ಏನು ಎಂಬುದೇ ಯಕ್ಷಪ್ರಶ್ನೆಯಾಗಿದೆ. ವಾರಕ್ಕೆ 2-3 ಚಿತ್ರ ಓಕೆ… ಅದರೆ 9 ಚಿತ್ರ ಏಕೆ?

ಈ ವಾರ ತೆರೆ ಮೇಲೆ ಬರೋಬ್ಬರಿ 9 ಚಿತ್ರಗಳು ಅಬ್ಬರಿಸಲಿವೆ. ನಾನಾ ನೀನಾ ಎಂಬಂತೆ ಪೈಪೋಟಿ ಮಾಡುತ್ತಾ ಬರುತ್ತಿರುವ ಈ ಚಿತ್ರಗಳು ಎಂತಹ ಸ್ಥಿತಿಗೆ ತಲುಪುತ್ತವೆ ಎಂಬುದನ್ನು ಹೇಳುವುದು ಕಷ್ಟವಾಗಿದೆ.

ಒಟ್ಟಾರೆ ಬಿಡುಗಡೆಯಾಗುತ್ತಿರುವ ಈ 9 ಚಿತ್ರಗಳಲ್ಲಿ ಯಾರು ಪ್ರೇಕ್ಷಕರ ಮನಸ್ಸನ್ನು ಗೆದ್ದು ಜಯದ ಹಾದಿಯತ್ತ ಸಾಗುತ್ತಾರೆ ಎಂಬುದನ್ನು ಕಾದು ನೋಡಬೇಕು.

ಈ ವಾರ ತೆರೆಗೆ ‘ಕಿಸ್ಮತ್’
ಸ್ಪಂದನ ಸೃಷ್ಠಿ ಸಂಸ್ಥೆ ಲಾಂಛನದಲ್ಲಿ ಸ್ಪಂದನ ವಿಜಯ್ ಅವರು ನಿರ್ಮಿಸಿರುವ ‘ಕಿಸ್ಮತ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಟ ವಿಜಯರಾಘವೇಂದ್ರ ನಿರ್ದೇಶನದ ಈ ಚಿತ್ರಕ್ಕೆ ರಾಜೇಶ್ ಮುರುಗೇಶನ್ ಅವರ ಸಂಗೀತ ನಿರ್ದೇಶನವಿದೆ. ರಾಜೇಶ್ ಯಾದವ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್, ಗೌಸ್‌ಫ಼ಿರ್, ವಿ.ಮನೋಹರ್, ಹೇಮಂತ್‌ಕುಮಾರ್ ಬರೆದಿದ್ದಾರೆ.

ವಿಜಯರಾಘವೇಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಸಂಗೀತ ಭಟ್ ಅಭಿನಯಿಸಿದ್ದಾರೆ. ನಂದಗೋಪಾಲ್, ದಿಲೀಪ್‌ರಾಜ್, ನವೀನ್‌ಕೃಷ್ಣ, ಸಾಯಿಕುಮಾರ್, ಸುಂದರರಾಜ್, ಚಿಕ್ಕಣ್ಣ, ರಜನಿಕಾಂತ್, ಧರ್ಮ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಪ್ರಣಯಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

‘ತಾರಕಾಸುರ’
ಓಂ ಬಾಲಾಜಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್. ನರಸಿಂಹಲು ಅವರು ನಿರ್ಮಿಸಿರುವ ‘ತಾರಾಕಾಸುರ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಿಂದೆ ‘ರಥಾವರ‘ ಎಂಬ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ‘ತಾರಾಕಾಸುರ‘ ಚಿತ್ರದ ನಿರ್ದೇಶಕರು. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕುಮಾರ್ ಗೌಡ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಜಾಲಿ ಬಾಸ್ಟಿನ್, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ವೈಭವ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಮಾನ್ವಿತ ಹರೀಶ್. ಹಾಲಿವುಡ್‌ನ ನಟ ಡ್ಯಾನಿ ಸಫ಼ಾನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಜೈಜಗದೀಶ್, ಎಂ.ಕೆ.ಮಠ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

‘ಲೂಟಿ’
ಸ್ಟುಡಿಯೋ ಫ಼ೋಕಸ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಲಾಂಛನದಲ್ಲಿ ನಿರಂಜನ್.ಎನ್.ಎಂ ನಿರ್ಮಿಸಿರುವ ‘ಲೂಟಿ’ ಚಿತ್ರ ಈ ವಾರ ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಗಿರೀಶ್ ಕಂಪ್ಲಾಪುರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಗಂಗಾ ರಾಜೇಂದ್ರನ್ ಎಂ ಛಾಯಾಗ್ರಹಣ, ದಾಮೋದರ್ ಸಂಕಲನ ಹಾಗೂ ಮದನ್-ಹರಿಣಿ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಇಶಾ ಕೊಪ್ಪಿಕರ್, ಧ್ರುವ, ಶ್ವೇತ ಪಂಡಿತ್, ದಿಲೀಪ್‌ರಾಜ್, ದೀಪಿಕಾದಾಸ್, ಸಾಧುಕೋಕಿಲ, ರೋಬೋ ಗಣೇಶ್, ನವೀನ್ ಹಾಸನ್, ವೈಭವಿ, ಆಂಡ್ರಿಯ ಡಿಸೋಜ(ದುಬೈ), ಬಿ.ಜಯಶ್ರೀ, ಮೋಹನ್ ಜುನೇಜ, ಧರ್ಮ, ಮುಂತಾದವರಿದ್ದಾರೆ.

ನೀವು ಕರೆಮಾಡಿದ ಚಂದಾದಾರರು
ಸುಕೃತಿ ಚಿತ್ರಾಲಯ ಪ್ರಥಮ ಕಾಣಿಕೆ ನೀವು ಕರೆ ಮಾಡಿದ ಚಂದಾದಾರರು ನಿರ್ಮಾಪಕ ಸನತ್ ಕುಮಾರ್ ಅವರ ನಿರ್ಮಾಣದಲ್ಲಿ ತಯಾರಾಗಿರುವ ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ. ಉತ್ತರ ಕರ್ನಾಟಕದಲ್ಲಿ ನಡೆದಂತ ನೈಜ ಘಟನೆಯನ್ನು ಆಧರಿಸಿ ಸಿ.ಮೋನಿಶ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಕುತೂಹಲ ಜೊತೆಗೆ ಒಂದು ಸಾಮಾಜಿಕ ಸಂದೇಶ ಸಹ ಇದೆ. ಮೊಬೈಲ್ ಕ್ರಾಂತಿ ಆದ ಮೇಲೆ ಅದರಿಂದ ಆಗಿರುವ ಪರಿಣಾಮ ಮತ್ತು ದುಷ್ಪರಿಣಾಮ ಸಹ ಹೇಳಲಾಗಿದೆ. ದಿಲೀಪ್ ರಾಜ್, ಸಂತೋಷ್ ರೆಡ್ಡಿ, ಆದರ್ಶ್, ಶರತ್, ಶಿಲ್ಪಾ ಮಂಜುನಾಥ್, ಐಶ್ವರ್ಯ ರಂಗರಾಜನ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಒಂದು ಸಣ್ಣ ಬ್ರೇಕ್‍ನ ನಂತರ
ಕಲರ್ ಫುಲ್ ಕ್ರಿಸ್ಟಲ್ ಕಂಬೈನ್ಸ್ ಲಾಂಛನದಲ್ಲಿ ಸರ್ವಶ್ರೀ ಅವರು ನಿರ್ಮಿಸಿರುವ ಒಂದು ಸಣ್ಣ ಬ್ರೇಕ್ ನ ನಂತರ ಚಿತ್ರವು ಈ ವಾರ ರಾಜಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಅಭಿಲಾಷ್ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಹಿತನ್ ಹಾಸನ್ ಕಥೆ ಮತ್ತು ಸಂಗೀತ, ನಾಗರಾಜ್ ಉಪ್ಪುಂದ ಛಾಯಾಗ್ರಹಣವಿದೆ. ಹಿತನ್ ಹಾಸನ್, ಚೈತ್ರ, ಕಿರಣ್ ಕೂಡ್ಲಿಪೇಟೆ. ಸಿದ್ದರಾಜ್ ಕಲ್ಯಾಣ್‍ಕರ್ ಮುಂತಾದವರ ತಾರಾಬಳಗವಿದೆ.

ಕರ್ಷಣಂ
ಡಿ.ಜೆ.ಎಂಟರ್‍ಟೈನ್‍ಮೆಂಟ್ಸ್ ಲಾಂಛನದಲ್ಲಿ ಧನಂಜಯ ಅತ್ರೆ ನಿರ್ಮಿಸಿರುವ ಕರ್ಷಣಂ ಚಿತ್ರವು ಈ ವಾರ ರಾಜಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರವನ್ನು ಶರವಣ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಧನಂಜಯ ಅತ್ರೆ, ಶ್ರೀನಿವಾಸ ಮೂರ್ತಿ, ಅನುಷಾರೈ, ವಿಜಯ್ ಚಂಡೂರ್, ಹೆಚ್.ಎಂ.ಟಿ.ವಿಜಯ್ ಮುಂತಾದವರ ತಾರಾಬಳಗವಿದೆ.

ಆ್ಯಪಲ್ ಕೇಕ್‍
ಸ್ಟರ್ ಮೈಂಡ್ ಇಂಕ್ ಎಂಟರ್ ಟೈನ್ಮಂಟ್ ಲಾಂಛನದಲ್ಲಿ ಅರವಿಂದ ಕುಮಾರ್ ಗೌಡ ನಿರ್ಮಿಸಿರುವ ಆ್ಯಪಲ್ ಕೇಕ್‍ ಈ ವಾರ ಬಿಡುಗಡೆಯಾಗುತ್ತಿದೆ. ಜೀವನದಲ್ಲಿ ಯಾವುದೋ ಒಂದು ಸಂದರ್ಭದಲ್ಲಿ ರಿಜೆಕ್ಟ್ ಆದಂತ ಪಾತ್ರಗಳೇ ಒಂದೆಡೆ ಸೇರಿ ಮಾಡುವ ಸಾಧನೆಯನ್ನೇ ಈ ಕಥೆಯಲ್ಲಿ ಹೇಳಲಾಗಿರುವ ಈ ಚಿತ್ರವನ್ನು ರಂಜಿತ್ ಕುಮಾರ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಂಜಿತ್, ಅರವಿಂದ್, ವಿಜಯ್ ಶಂಕರ್, ಕೃಷ್ಣ ಅಣಗಿ, ಶುಭ ರಕ್ಷ, ಚೈತ್ರ ಶೆಟ್ಟಿ, ರಂಗಸ್ವಾಮಿ ತಾರಾಬಳಗದಲ್ಲಿದ್ದಾರೆ.

ಫ್ರೆಂಡ್ಲಿ ಬೇಬಿ
ಹಾರರ್ ಚಿತ್ರಗಳಲ್ಲಿ ದೆವ್ವ ಇತರರಿಗೆ ಕಾಟ ಕೊಡುವುದು ಕಾಮನ್ ಅಂಶ. ಆದರೆ ಇಲ್ಲೊಂದು ಸಿನಿಮಾದಲ್ಲಿ ದೆವ್ವ ಇದೆ. ಅದು ತುಂಬಾ ಫ್ರೆಂಡ್ಲಿಯಾಗಿ ಎಲ್ಲರ ಜೊತೆ ಮೂವ್ ಮಾಡುತ್ತದಂತೆ. ಮುತ್ತುಕುಮಾರ್ ಅವರ ನಿರ್ದೇಶನದಲ್ಲಿ ತಯಾರಾದ ಈ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಡಿ.ವೆಂಕಟೇಶರೆಡ್ಡಿ ಹಾಗೂ ಸುಂದರಂ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಂದರಂ ಅವರ ಪುತ್ರ ಅರ್ಜುನ್ ಸುಂದರಂ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾನೆ. ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಜ್ಯೋತಿ ನಟಿಸಿದ್ದಾರೆ. ಪತ್ರಕರ್ತ ಯತಿರಾಜ್ ಈ ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಗುಡುಗುವ ಒಬ್ಬ ಕ್ವಾರಿ ಓನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಬೇಬಿ ಅಮೂಲ್ಯ ನಟಿಸಿದ್ದಾರೆ. ನನಗೆ ದೆವ್ವಗಳ ಸಿನಿಮಾ ಅಂದ್ರೆ ತುಂಬಾ ಇಷ್ಟ ಎಂದು ಹೇಳಿಕೊಂಡರು.

ವರ್ಣಮಯ
ಇದೇ ವಾರ ಮತ್ತೊಂದು ಸಸ್ಪೆನ್ಸ್ ಹಾಗೂ ಹಾರರ್ ಥ್ರಿಲ್ಲರ್ ಕಥಾಹಂದರವುಳ್ಳ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರವೀಂದ್ರ ವಂಶಿ ನಿರ್ದೇಶನದಲ್ಲಿ ದೀಪ್ತಿ ದಾಮೋದರ್ ನಿರ್ಮಾಣದಲ್ಲಿ ಸಿದ್ಧಗೊಂಡಂತಹ ಈ ಚಿತ್ರದಲ್ಲಿ ರಾಜ್, ಅಥರ್ವ ಆರಾಧ್ಯ, ಸುನಿತಾ ಮ್ಯಾರಿಯೋ ಪಿಂಟೊ ಅಭಿನಯದ ಈ ಚಿತ್ರವು ಪ್ರೇಕ್ಷಕರ ಮುಂದೆ ಬರುತ್ತಿದೆ. ಒಟ್ಟಿನಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಎಲ್ಲ ಚಿತ್ರಗಳ ಭವಿಷ್ಯವನ್ನು ಪ್ರೇಕ್ಷಕರು ನೋಡಿ ನಿರ್ಧರಿಸಬೇಕಿದೆ.

Leave a Reply