ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್ ಸ್ಪೋಟಿಸಿದ ಸಿಬ್ಬಂದಿಗಳು…!

ಮಂಗಳೂರು ಏರ್ ಪೋರ್ಟ್ ಆವರಣದಲ್ಲಿ ಸಿಕ್ಕ ಸಜೀವ ಬಾಂಬ್ ನ್ನು ಬಾಂಬ್ ನಿಷ್ಕ್ರಿಯ ಸಿಬ್ಬಂದಿಗಳು ಮಂಗಳೂರಿನ ಕೆಂಜಾರು ಮೈದಾನದಲ್ಲಿ ಸ್ಪೋಟಿಸಿದ್ದಾರೆ.

ಹೌದು… ಇಡೀ ಮಂಗಳೂರನ್ನು ಬೆಚ್ಚಿ ಬೀಳಿಸಿದ್ದ ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದ ಬಾಂಬ್ ನ್ನು ಸಿಬ್ಬಂದಿಗಳು ಸ್ಪೋಟಿಸಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ಸಿದ್ದ ಮಂಗಳೂರು ವಿಮಾನ ನಿಲ್ದಾಣದ ಟಿಕೇಟ್ ಕೌಂಟರ್ ಬಳಿ ಇಡಲಾಗಿದ್ದ ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ಬಾಂಬ್ ಪತ್ತೆಯಾಗಿತ್ತು. ಕೂಡಲೆ ವಿಷಯ ತಿಳಿದ ಸಿಬ್ಬಂದಿಗಳು 400 ಮೀಟರ್ ನಿರ್ಜನ ಪ್ರದೇಶದಲ್ಲಿ ತಂದು ಪರಿಶೀಲನೆ ಮಾಡಿ ನಿಷ್ಕ್ರಿಯಗೊಳಿಸಿದ್ದರು.

ನಂತರ ಅದನ್ನ ಮಂಗಳೂರಿನ ಕೆಂಜಾರು ಮೈದಾನದಲ್ಲಿ ತಂದು ಸ್ಪೋಟದ ತೀವ್ರತೆಯನ್ನು ಕಡಿಮೆ ಗೊಳಿಸಲು ಸುತ್ತಲು ಮರಳಿನ ಮೂಟೆ ಇಟ್ಟು ಸ್ಪೋಟಿಸಲಾಗಿದೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸದ್ಯ ಸಿಬ್ಬಂದಿಗಳು ಸ್ಪೋಟದ ತೀವ್ರತೆಯ ಪರಿಶೀಲನೆಯನ್ನು ನಡೆಸಿದ್ದಾರೆ. ಸ್ಪೋಟಕ್ಕೆ ಬಳಕೆ ಮಾಡಲಾದ ವಸ್ತುಗಳ ಬಗ್ಗೆಯೂ ಕೂಡ ಪ್ರಕ್ರಿಯೆಗಳು ಇಲ್ಲಿ ನಡೆದಿವೆ. ಜೊತೆಗೆ ವಿಮಾನ ನಿಲ್ದಾಣದಲ್ಲಿಯೂ ಕೂಡ ಭಾರೀ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ.

ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ಮಾಡಲಾಗುತ್ತಿದ್ದು, ಬಾಂಬ್ ತಂದಿದ್ದು ಆಟೋದಲ್ಲಿ ಎಂದು ಹೇಳಲಾಗುತ್ತಿದೆ. ಆದರೆ ಇದು ಖಚಿತವಾಗಿಲ್ಲ.