ನೂರು ರೂಪಾಯಿ ನಕಲಿ ನೋಟು ಹಾವಳಿ : ಕಂಗಲಾಗಿರುವ ವ್ಯಾಪಾರಿಗಳು..!

ಮೈಸೂರಿನಲ್ಲಿ ನೂರು ರೂಪಾಯಿ ನಕಲಿ ನೋಟು ಹಾವಳಿ ಶುರುವಾಗಿದೆ.

ಹೌದು… ಹೋಟೆಲ್‌ನಲ್ಲಿ ಕಾಫಿ ಕುಡಿದು ಹಣ ಕೊಟ್ಟಾಗ ನಕಲಿ ನೋಟು ಎಂಬುದು ಪತ್ತೆಯಾಗಿದೆ.  ಕಲರ್ ಪ್ರಿಂಟರ್ ಬಳಸಿ ಪ್ರಿಂಟ್ ಹಾಕಿರುವ 100ರ ನೋಟು, ದೇವರಾಜ ಮೊಹಲ್ಲಾದಲ್ಲಿರುವ ಮೇಘ ಪೋಟೋ ಗ್ಯಾಲರಿ ಸುದರ್ಶನ ಅವರಿಗೆ ಸಿಕ್ಕಿದೆ.

ಗ್ರಾಹಕರು ನೀಡಿದ ನೋಟಿನ‌ ಕಂತೆಯ ಮಧ್ಯದಲ್ಲಿ ಬಂದಿರುವ ನಕಲಿ ನೋಟಿನ ಹಾವಳಿಯಿಂದ ವ್ಯಾಪಾರಿಗಳು ಕಂಗಲಾಗಿದ್ದಾರೆ.