ಪತ್ನಿ ಮಲಗಿದ್ದ ವೇಳೆ ಹಗ್ಗ ಬಿಗಿದ ಪತಿ : ನರಳಿ ನರಳಾಡಿ ದೇಹ ತೊರೆದ ಪ್ರಾಣ…!

ಪತ್ನಿ ಮಲಗಿದ್ದ ವೇಳೆ ಹಗ್ಗ ಬಿಗಿದ ಪತಿ. ನರಳಿ ನರಳಾಡಿ ದೇಹ ತೊರೆದ ಪ್ರಾಣ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮನುಕುಲವೇ ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ.

ಪತ್ನಿಯ ಶೀಲ ಶಂಕಿಸಿ ಮಲಗಿದ್ದ ವೇಳೆ ಪತಿ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದಾನೆ. ಕಾವ್ಯ(30)ಮೃತಪಟ್ಟ ಮಹಿಳೆ. ಆರೋಪಿ ಶಂಕರ್ ಪತ್ನಿಯನ್ನ ಕೊಲೆ ಮಾಡಿದ ಕ್ರೂರಿ. ರಾತ್ರಿ ಮಲಗಿದ್ದ ವೇಳೆ ಹಗ್ಗದಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಂದ ಪಾಪಿ ಪತಿರಾಯ  ಪತ್ನಿಯನ್ನು ಕೊಂದೆನೆಂದು ಪೊಲೀಸರಿಗೆ ಶರಾಣಾಗಿದ್ದಾನೆ.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply