ಆಘಾತಕಾರಿ ಘಟನೆ : ಸಾವನ್ನಪ್ಪಿದ್ದ ಮಹಿಳೆ ಪ್ರತ್ಯಕ್ಷ – ಜನಸಾಮಾನ್ಯರು ಶಾಕ್..!

ಬಿಹಾರದ ಮುಜಾಫಪುರ್ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 10 ವರ್ಷದ ಹಿಂದೆ ಸಾವನ್ನಪ್ಪಿದ್ದಾಳೆ ಎಂದುಕೊಂಡಿದ್ದ ಮಹಿಳೆ ಎಲ್ಲರ ಮುಂದೆ ಪ್ರತ್ಯಕ್ಷಳಾಗಿದ್ದಾಳೆ. ಆಕೆಯನ್ನು ನೋಡಿದ ನ್ಯಾಯಮೂರ್ತಿ, ಪೊಲೀಸ್ ಸೇರಿದಂತೆ ಜನಸಾಮಾನ್ಯರು ದಂಗಾಗಿದ್ದಾರೆ.

ಕೋರ್ಟ್ ಮುಂದೆ ಹಾಜರಾದ ರೇಖಾ ದೇವಿ, ನಾನು ಜೀವಂತವಾಗಿದ್ದೇನೆ. ನನ್ನ ಪತಿಯನ್ನು ಬಿಡಿ ಎಂದು ಮನವಿ ಮಾಡಿದ್ದಾಳೆ. ಆಕೆ ಪತಿ ವಿಜಯ್ ಸಿಂಗ್ ನನ್ನು ರೇಖಾದೇವಿ ಹತ್ಯೆ ಪ್ರಕರಣದಲ್ಲಿ ಜೈಲಿಗಟ್ಟಲಾಗಿತ್ತು. ರೇಖಾ ದೇವಿ, ತಾನೇ ವಿಜಯ್ ಸಿಂಗ್ ಪತ್ನಿ ಎನ್ನುತ್ತಿದ್ದು, ಆಧಾರ್ ಕಾರ್ಡ್ ಕೂಡ ತೋರಿಸಿದ್ದಾಳೆ.

ನವೆಂಬರ್ 18, 2018 ರಂದು ವಿಜಯ್ ಸಿಂಗ್ ನನ್ನು ಬಂಧಿಸಲಾಗಿತ್ತು. ವಿಜಯ್ ನಾಪತ್ತೆಯಾಗಿದ್ದಾನೆಂದು 2017 ರಲ್ಲಿ ಕೋರ್ಟ್ ಗೆ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದರು. ನಂತ್ರ ವಿಜಯ್ ಸಿಕ್ಕಿಬಿದ್ದಿದ್ದ. 2010ರಲ್ಲಿ ಅಸ್ಸಾಂ ಮಹಿಳೆಯನ್ನು ವಿಜಯ್ ಮನೆಗೆ ಕರೆ ತಂದಿದ್ದ. ರೇಖಾಗೆ ಒಂದು ಹೆಣ್ಣು ಮಗು ಇತ್ತು. 10 ವರ್ಷದ ಹಿಂದೆ ಬ್ಯಾಗ್ ಒಂದರಲ್ಲಿ ಶವ ಸಿಕ್ಕಿತ್ತು. ಅದು ರೇಖಾ ದೇವಿಯದ್ದು ಎಂದಿದ್ದ ಗ್ರಾಮಸ್ಥರು ವಿಜಯ್ ನಾಪತ್ತೆಯಾಗಿದ್ದಾನೆ ಎನ್ನಲಾಗಿತ್ತು. ರೇಖಾ ದೇವಿ ಮಾತಿನ ಮೇಲೆ ಅನುಮಾನ ಬರ್ತಿದೆ. ಆಕೆ ಇಷ್ಟು ವರ್ಷ ಏನು ಮಾಡ್ತಿದ್ದಳು ಎಂಬ ಪ್ರಶ್ನೆ ಎದ್ದಿದ್ದು, ತನಿಖೆ ನಂತ್ರ ಉತ್ತರ ಸಿಗಬೇಕಿದೆ.

 

Leave a Reply