ಒಂಬತ್ತನೇ ಸಿನಿಯರ್ ಹಾಕಿ ಚಾಂಪಿಯನ್ ಶಿಪ್ ಟೂರ್ನಿಗೆ ಸಕಲ ಸಿದ್ಧತೆ ಪೂರ್ಣ..

ಒಂಬತ್ತನೇ ಸಿನಿಯರ್ ಹಾಕಿ ಚಾಂಪಿಯನ್ ಶಿಪ್ (ಪುರುಷರ) ಟೂರ್ನಿಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಸ್ಟಾರ್ ಆಟಗಾರರು ತವರು ತಂಡವನ್ನು ಪ್ರತಿನಿಧಿಸಲಿದ್ದಾರೆ. 11 ದಿನಗಳ ಕಾಲ ಚಾಂಪಿಯನ್ ಶಿಪ್ ನಡೆಯಲಿದೆ.

ಕರ್ನಾಟಕ ತಂಡ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ. ಸ್ಟಾರ್ ಆಟಗಾರ ಎಸ್.ವಿ ಸುನಿಲ್ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ. ವಿಶ್ವಕಪ್ ಹಾಕಿ ಟೂರ್ನಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಸುನಿಲ್, ಈ ಬಾರಿ ಪದಕದ ಭರವಸೆ ಮೂಡಿಸಿದ್ದಾರೆ.

ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಂಗೊಳಿಸುವ ಯುವ ಆಟಗಾರರು ತಮ್ಮ ತಮ್ಮ ತಾಯ್ನಾಡಿನ ಪರ ಸ್ಟಿಕ್ ಎತ್ತಲಿದ್ದಾರೆ. ಕರ್ನಾಟಕ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಏರ್ ಇಂಡಿಯಾ ಸ್ಪೋರ್ಟ್ಸ್‌ ಪ್ರಮೋಷನ್ ಬೋರ್ಡ್‌, ಹಾಕಿ ಓಡಿಶಾ, ನಾಮ್ಧಾರಿ ಇಲೆವೆನ್, ಕೆನರಾ ಬ್ಯಾಂಕ್ ತಂಡಗಳ ವಿರುದ್ಧ ಸುನಿಲ್ ಪಡೆ ಅಂಗಳ ಪ್ರವೇಶಿಸಲಿದೆ.

Leave a Reply