ಮದ್ದೂರು ಪಿಡಿಒ ಕಿರುಕುಳ ಪ್ರಕರಣ ಮಾಸುವ ಮುನ್ನವೇ ಸಕ್ಕರೆನಾಡಲ್ಲಿ ಮತ್ತೊಂದು ಪ್ರಕರಣ……

ಮದ್ದೂರು ಪಿಡಿಒ ಕಿರುಕುಳ ಪ್ರಕರಣ ಮಾಸುವ ಮುನ್ನವೇ ಸಕ್ಕರೆನಾಡಲ್ಲಿ ಮತ್ತೊಂದು ಪ್ರಕರಣ ನಡೆದಿದೆ.

ನಾಗಮಂಗಲ ತಾಲೂಕಿನ ಹರಳಕೆರೆ ಗ್ರಾಮದ ಕಾಂಗ್ರೆಸ್ ಮುಖಂಡ ಪ್ರಸನ್ನ ಎಂಬುವವನಿಂದ ಪಿಡಿಒ ಸಂತೋಷ್ ಮೇಲೆ ಹಲ್ಲೆ ಮಾಡಲಾಗಿದೆ. ಗ್ರಾ.ಪಂ.‌ವ್ಯಾಪ್ತಿಯ ಕ್ರಿಯಾ ಯೋಜನೆ ಸಂಬಂಧ ಮಾಹಿತಿ ಕೋರಿ ಕಿರುಕುಳ ನೀಡ್ತಿದ್ದ ಪ್ರಸನ್ನ,  ಮೇಲಧಿಕಾರಿಗಳ ಅನುಮತಿ ಪಡೆದು ಮಾಹಿತಿ ನೀಡುವುದಾಗಿ ತಿಳಿಸಿದ್ರು ಏಕಾಏಕಿ ಹಲ್ಲೆ ಮಾಡಿದ್ದಾನೆ.

ಪಟ್ಟಣದ ತಾಲೂಕು ಪಂಚಾಯ್ತಿಯಲ್ಲಿ ಸಭೆ ಮುಗಿಸಿ ಹೊರ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ತಾಲೂಕು ಪಂಚಾಯ್ತಿ ಮುಂಭಾಗ ಮೂವರು ಸ್ನೇಹಿತರೊಂದಿಗೆ  ಸೇರಿ ಪ್ರಸನ್ನ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸುತ್ತಿದ್ದಂತೆ ಕುಸಿದು ಬಿದ್ದು ಪಿಡಿಒ ನನ್ನು ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಬಳಿಕ ಆರೋಪಿಗಳ ವಿರುದ್ದ ಪೊಲೀಸರಿಗೆ ಪಿಡಿಒ ದೂರು ನೀಡಿದ್ದಾರೆ. ದೂರು ಆಧರಿಸಿ ನಾಗಮಂಗಲ ಪೊಲೀಸರಿಂದ ಆರೋಪಿ‌ಯನ್ನು ಬಂಧಿಸಲಾಗಿದೆ. ಆರೋಪಿ ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲೆಯಲ್ಲಿ ಪಿಡಿಒ ಮೇಲೆ ಹೆಚ್ಚುತ್ತಿರುವ ಹಲ್ಲೆ ಹಾಗೂ ಕಿರುಕುಳ ಪ್ರಕರಣಕ್ಕೆ ಪಿಡಿಒಗಳಲ್ಲಿ ಮನೆ ಮಾಡಿರೋ ಆತಂಕ ಶೂರುವಾಗಿದೆ.