ಬಿಗ್ ಬಾಸ್ ಮನೆಗೆ ಮತ್ತೊಂದು ಸ್ಪರ್ಧಿ ಎಂಟ್ರಿ : ಸಿಹಿ ಸುದ್ದಿ ಕೇಳಿ ಸ್ಪರ್ಧಿಗಳೆಲ್ಲ ಫುಲ್ ಖುಷ್

ಬಿಗ್ ಬಾಸ್ ಮನೆಗೆ ಮತ್ತೊಂದು ಸ್ಪರ್ಧಿ ಎಂಟ್ರಿ ಕೊಟ್ಟಿದ್ದು ಮನೆಮಂದಿಯಲ್ಲ ಫುಲ್ ಖುಷ್ ಆಗಿದ್ದಾರೆ.  ಹೌದು… ಬಿಗ್ ಬಾಸ್ ಮನೆಗೆ ಸ್ಪರ್ಧಿ ಚಂದನಾ ಅವರು ಎಂಟ್ರಿ ಕೊಟ್ಟು ಮನೆಯ ಸ್ಪರ್ಧಿಗಳ ಬಳಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ಶುಕ್ರವಾರ ಹಾಡು ಹಾಡುವ ಮೂಲಕವೇ ಚಂದನಾ ಕನ್ಛೇಶನ್ ರೂಮಿನಿಂದ ಮನೆಯೊಳಗೆ ಪ್ರವೇಶಿಸಿದರು. ಚಂದನಾ ಬರುತ್ತಿದ್ದಂತೆ ಮೊದಲು ಕಿಶನ್ ಅವರನ್ನು ತಪ್ಪಿಕೊಂಡಿದ್ದಾರೆ. ಬಳಿಕ ಮನೆಯ ಸದಸ್ಯರೆಲ್ಲಾ ಚಂದನಾ ಅವರನ್ನು ತಪ್ಪಿಕೊಂಡು ಸ್ವಾಗತಿಸಿದ್ದಾರೆ. ಚಂದನಾರನ್ನು ನೋಡಿ ಸದಸ್ಯರು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ. ಚಂದನಾ ಲಿವಿಂಗ್ ಏರಿಯಾದಲ್ಲಿ ಕುಳಿತು ನಾನು ನಿಮ್ಮೆಲ್ಲರಾ ಜೊತೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯವನ್ನು ನಾನು ಇದುವರೆಗೂ ಯಾರ ಬಳಿಯೂ ಹಂಚಿಕೊಂಡಿಲ್ಲ. ಮೊದಲ ಬಾರಿಗೆ ನಿಮ್ಮೆಲ್ಲರಾ ಬಳಿ ಹೇಳುತ್ತಿದ್ದೇನೆ ಎಂದರು. ಚಂದನಾ ಈ ರೀತಿ ಹೇಳುತ್ತಿದ್ದಂತೆ ತಕ್ಷಣ ವಾಸುಕಿ ನಿಮಗೆ ಮದುವೆ ಫಿಕ್ಸ್ ಆಯ್ತಾ ಎಂದು ಹೇಳಿದ್ದಾರೆ. ಇದನ್ನು ಕೇಳಿ ಚಂದನಾ ಹಾಗೂ ಮನೆಯ ಸದಸ್ಯರು ನಕ್ಕಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಹೊಸದೊಂದು ಹಾಡಿನ ಕಾರ್ಯಕ್ರಮ ಶುರುವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಚಂದನಾ ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದಾರೆ. ಈ ವಿಷಯವನ್ನು ಚಂದನಾ ಬಿಗ್ ಬಾಸ್ ಮನೆಯ ಸದಸ್ಯರ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕಾಗಿ ವಾಸುಕಿ ಅವರಿಗೆ ಶೀರ್ಷಿಕೆ ಗೀತೆ ಬರೆದುಕೊಡಲು ಹೇಳಿದ್ದಾರೆ. ವಾಸುಕಿ ಕಾರ್ಯಕ್ರಮಕ್ಕಾಗಿ ಹಾಡನ್ನು ಬರೆದು ಅದನ್ನು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಹಾಡು ಹಾಡಿದ್ದಾರೆ. ವಾಸುಕಿ ಹಾಡು ಹಾಡಿದ ಬಳಿಕ ಬಿಗ್ ಬಾಸ್ ಚಂದನಾರನ್ನು ಮನೆಯಿಂದ ಹೊರಡುವಂತೆ ಹೇಳುತ್ತಾರೆ. ಆಗ ವಾಸುಕಿ, ಚಂದನಾರನ್ನು ತಪ್ಪಿಕೊಂಡು ಮುತ್ತು ನೀಡಿ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.