ಪಶುವೈದ್ಯೆ ಕೊಲೆ ಪ್ರಕರಣದ ಬೆನ್ನಲ್ಲೇ ಮತ್ತೋರ್ವ ಮಹಿಳೆಯ ಮೃತದೇಹ ಪತ್ತೆ…!

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಹೈದರಾಬಾದ್‍ನ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಮತ್ತೋರ್ವ ಮಹಿಳೆಯ ಮೃತದೇಹವೂ ಹೈದರಾಬಾದ್ ಹೊರ ವಲಯದ ಅದೇ ಬಡಾವಣೆಯಲ್ಲಿ ಪತ್ತೆಯಾಗಿದೆ. ಇದರಿಂದ ಜನರು ಆತಂಕಗೊಂಡು ಭಯಬೀತರಾಗಿದ್ದಾರೆ.

ಶಂಶಾಬಾದ್ ಪ್ರದೇಶದಲ್ಲಿ ಸುಟ್ಟು ಕರಕಲಾದ ಮತ್ತೋರ್ವ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಈಕೆಯ ಮೇಲೂ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಂದು ನಂತರ ಸುಟ್ಟು ಹಾಕಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಶವದ ಗುರುತು ಪತ್ತೆಯಾಗಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಅತ್ಯಾಚಾರ-ಕೊಲೆಯೋ ಎಂಬ ಬಗ್ಗೆ ವರದಿ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿದೆ.

Leave a Reply