ಎಪಿಎಲ್ ಪಡಿತರ ಚೀಟಿ ಆನ್ ಲೈನ್ ನಲ್ಲಿ ಲಭ್ಯ

ನಾಳೆಯಿಂದ ರಾಜ್ಯಾದ್ಯಂತ ಎಪಿಎಲ್‌‌ ಕಾರ್ಡ್‌ ಅನ್ನು ಆನ್‌‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪಡೆಯಬಹುದು. 15 ದಿನಗಳಲ್ಲಿ ಎಪಿಎಲ್‌‌ ಕಾರ್ಡ್‌ನ ಓರಿಜನಲ್‌ ಪ್ರತಿ ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್‌ ಸುದ್ದಿಗೋಷ್ಠಿ ನಡೆಸಿದ್ದಾರೆ.
ಇನ್ನೂ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ. ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ರೇಷನ್‌ ಕಾರ್ಡ್ ಬಗ್ಗೆ ಸಾಕಷ್ಟು ಗೊಂದಲವಿತ್ತು. ರೇಷನ ಕಾರ್ಡ್ ಗೊಂದಲ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಎಪಿಎಲ್‌  ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಲು ಆಧಾರ ಕಾರ್ಡ್ ಇದ್ದರೇ ಸಾಕು ಎಂದ ಸಚಿವರು, ಇದರಿಂದ ಎಪಿಎಲ್‌ ಕಾರ್ಡ್‌ ಪಡೆಯಲು ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಸಕಾಲ ಯೋಜನೆಯಡಿ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ಯೋಜನೆಗೆ ಸೇರಿಸಲಾಗಿದೆ. ಇನ್ನ್ಮುಂದೆ ಎಪಿಎಲ್‌ ಕಾರ್ಡಿಗಾಗಿ ಆನ್‌‌ಲೈನ್ ನಲ್ಲಿ ಅಗತ್ಯ ಮಾಹಿತಿ ಭರಿಸಿದ್ರೆ ಸಾಕು ಎಂದರು.

ಆನ್‌‌ಲೈನ್ ಸೇವೆಯಿಂದ ಕಾರ್ಡ್‌ ವಿತರಣೆಯಲ್ಲಿ ಪಾರದರ್ಶಕತೆ ಬರಲಿದೆ. Www.ahara.kar.nic.in ಈ ವೆಬ್‌ಸೈಟ್ ನಲ್ಲಿ ನಾಳೆಯಿಂದ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಎಪಿಎಲ್‌ನೊಂದಿಗೆ ಬಿಪಿಎಲ್‌ ಕಾರ್ಡ್‌ ಅನ್ನು ಆನ್‌‌ಲೈನ್ ಸೇವೆ ಚಾಲನೆ ಉದ್ದೇಶವಿತ್ತು. ಆದ್ರೆ ಮುಂದಿನ 15 ದಿನಗಳಲ್ಲಿ ಬಿಪಿಎಲ್‌ ಕಾರ್ಡ್‌ಗಾಗಿ ಆನ್‌‌ಲೈನ್ ಅರ್ಜಿ ಸಲ್ಲಿಸುವ ಸೇವೆ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದ್ದಾರೆ.

ಇನ್ನೂ ಇನ್ನು ಕೇಂದ್ರ ಸರ್ಕಾರದಿಂದ ನೋಟ್ ಬ್ಯಾನ ವಿಚಾರ ಬಗ್ಗೆ ಮಾತನಾಡಿ, ಜನಸಾಮಾನ್ಯರ ಸಂಕಷ್ಟಗಳನ್ನ ಬಗೆಹರಿಸುವಲ್ಲಿ ಪ್ರಧಾನಿ ಸಂಪೂರ್ಣ ವಿಫಲರಾಗಿದ್ದಾರೆ. ಮೋದಿಯವರ ಸರ್ವಾಧೀಕಾರದ ಧೋರಣೆಯಿಂದ ಸಾಕಷ್ಟು ಜನ ಜೀವಕಳೆದು ಕೊಂಡಿದ್ದಾರೆ. ಕೇಂದ್ರ ಸರ್ಕಾರ ಬರಿ ಪ್ರಚಾರ ಪಡೆಯಲು ಆದ್ಯತೆ ಕೋಡುತ್ತಿದೆ ಹೊರತು ಜನರ ಸಮಸ್ಯೆಗಳನ್ನ ಬಗೆಹರಿಸುತಿಲ್ಲ ಎಂದು ಸಚಿವ ಖಾದರ ಪ್ರಧಾನಿ ಮೇಲೆ ಗುಡುಗಿದರು.

Comments are closed.