7ಕ್ಕೆ ರಟ್ಟಾಗಲಿದೆಯಂತೆ ಆಪಲ್ 7ರ ಮಹಾ ಗುಟ್ಟು

ಪ್ರತಿ ಸಾರಿ ಮಾರುಕಟ್ಟೆಗೆ ಬರುವಾಗಲು ಒಂದಿಷ್ಟು ಕೌತುಕಗಳನ್ನ ಹುಟ್ಟು ಹಾಕುವುದು ಆಪಲ್ ಗೆ ಸಾಮಾನ್ಯ ವಿಷಯ. ಹೊಸ ಆವೃತ್ತಿಯ ಆಪಲ್ ಫೋನ್ ಮಾರ್ಕೆಟ್ ಗೆ ಬರುತ್ತೆ ಅಂದ್ರೆ ಸಾಕು ನೂರಾರು ರೀತಿಯ ನಿರೀಕ್ಷೆಗಳು ಗರಿಗೆದರುತ್ತವೆ. ಈ ಬಾರಿ ಹೊಸದಾಗಿ ಏನಪ್ಪಾ ಇರುತ್ತೆ ಅಂತ ಆಪಲ್ ಪ್ರಿಯರು ಕಣ್ಣುಬಿಟ್ಟುಕೊಂಡು ಕಾಯ್ತಾ ಇರ್ತಾರೆ. ಅದ್ರಲ್ಲಿಯೂ ಆಪಲ್ 7ರ ಬಗ್ಗೆ ಈಗಾಗಲೇ ನಾನಾ ಬಗೆಯ ಊಹಾಪೋಹಗಳು ಹರಿದಾಡುವದಕ್ಕೆ ಆರಂಭಿಸಿವೆ. 7ರಲ್ಲಿ ಹಾಗೆ ಇರಲಿದೆಯಂತೆ, ಹೀಗೆಯಂತೆ ಅಂತ ಅಂತೆ, ಕಂತೆಗಳ ಪುರಾಣ ಜೋರಾಗಿಯೇ ಕೇಳಿಸುತ್ತದೆ. ಅದಕ್ಕೆಲ್ಲಾ ಫುಲ್ ಸ್ಟಾಪ್ ಇಡುವ ದಿನ ಹತ್ತಿರವಾಗಲಿದೆಯಾ ಅನ್ನೋ ಸುಳಿವು ಸಣ್ಣದಾಗಿ ಸಿಕ್ಕಿದೆ.

APPLE IPHONE 7

ಹೌದು ಆಪಲ್ ಸೆಪ್ಟೆಂಬರ್ 7ಕ್ಕೆ ಇವೆಂಟ್ ಆರ್ಗನೈಸ್ ಮಾಡಿದೆ. ಬಹುಶಃ ಇಲ್ಲಿ ಹೊಸ ಆವೃತ್ತಿಯ ಫೋನ್ ಬಿಡುಗಡೆಯಾಗಬಹುದೇನೋ ಅನ್ನೋ ಮಾತುಗಳು ಕೇಳಿಬರುತ್ತಿವೆ. ಯಾಕಂದ್ರೆ ಕಳೆದ ಐದು ವರ್ಷಗಳಿಂದ ಆಪಲ್  ಸೆಪ್ಟೆಂಬರ್ ನಲ್ಲಿ ಇವೆಂಟ್ ನಡೆಸುತ್ತಲೇ ಬರುತ್ತಿದೆ. ಅದ್ರಲ್ಲಿ ಯಾವುದಾದ್ರು ಹೊಸ ಆವೃತ್ತಿಯ ಫೋನ್ ಬಿಡುಗಡೆಯಾಗುತ್ತಲೇಯಿತ್ತು. ಈ ಬಾರಿಯೂ ಆಪಲ್ ನಿಂದ ಇನ್ವಿಟೇಷನ್ ಹೊರಬಿದ್ದಿದ್ದು, ಅದು ಸೆಪ್ಟೆಂಬರ್ 7ಕ್ಕೆ ಇವೆಂಟ್ ಆರ್ಗನೈಸ್ ಮಾಡಿದೆ. ಹೀಗಾಗಿ ಆವತ್ತು ಆಪಲ್ 7ರ ಆವೃತ್ತಿ ಬಿಡುಗಡೆಯಾಗಬಹುದು ಅಂತ ಆಪಲ್ ಪ್ರಿಯರು ಕಾದು ಕುಳಿತಿದ್ದಾರೆ.

ಈಗಾಗಲೇ 7ರ ಆವೃತ್ತಿಯ ಬಗ್ಗೆ ಒಂದಿಷ್ಟು ವಿಷಯಗಳು ಲೀಕ್ ಆಗಿವರ. ಅದರಂತೆ ಫೋನ್ ಲ್ಲಿ ಹೆಡ್ ಫೋನ್ ಜಾಕ್ ಇರುವುದಿಲ್ಲವಂತೆ. ಹಾಗೆಯೇ ಡ್ಯೂಯಲ್ ಕ್ಯಾಮರಾ ಇರಲಿದೆ. ವಾಟರ್ ಪ್ರೂಫ್ ಆಗಿರಲಿದೆ ಅಂತ ಹೇಳಲಾಗುತ್ತೆ. ಅಚ್ಚರಿಯೆಂದ್ರೆ 16ಜಿಬಿಯ ಫೋನ್ ಮೆಮೋರಿಯ ಫೋನ್ ಈ ಬಾರಿ ಇರುವುದು ಸಂದೇಹವಿದ್ದು, ಕೇವಲ 32 ಜಿಬಿಗೆ ಆಪಲ್ ಸ್ಟೀಕ್ ಆಗುವ ಸಾಧ್ಯತೆ ಇದೆ. ಡಿಸೈನ್ ನಲ್ಲಿ ಯಾವುದೇ ಬದಲಾವಣೆ ಕಾಣುವುದು ಅನುಮಾನ. ಒಟ್ಟಿನಲ್ಲಿ ಆಪಲ್ ಫೋನ್ ಬಿಡುಗಡೆಯಾಗುತ್ತೆ ಅಂದ್ರೆ ಸಾಕು ಎಲ್ಲರು ಕಣ್ಣರಳಿಸಿಕೊಂಡು ಕಾಯುವುದಂತು ಗ್ಯಾರಂಟಿ.

Comments are closed.