IBM CEO : ಗೂಗಲ್, ಮೈಕ್ರೋಸಾಫ್ಟ್, ಅಡೋಬ್ ನಂತ್ರ ಈಗ ಐಬಿಎಂಗೆ ಭಾರತೀಯ ಮುಖ್ಯಸ್ಥ

ಅಮೆರಿಕದ ಬಹುದೊಡ್ಡ ಅಂತಾರಾಷ್ಟ್ರೀಯ ಉದ್ದಿಮೆಗಳಲ್ಲಿ ಭಾರತೀಯರ ಪಾರುಪತ್ಯ ಮುಂದುವರಿದಿದೆ. ಪ್ರತಿಷ್ಠಿತ ಐಬಿಎಂ ಸಂಸ್ಥೆಯ ಕಾರ್‍ಯ ನಿರ್ವಾಹಕ ಆಧಿಕಾರಿ (ಸಿಇಒ) ಆಗಿ ಭಾರತೀಯ ಮೂಲದ ಅರವಿಂದ ಕೃಷ್ಣ ನೇಮಕಗೊಂಡಿದ್ದಾರೆ.


ಇದರೊಂದಿಗೆ ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಡೋಬ್ ಸಂಸ್ಥೆಗಳ ನಂತರ ಅಮೆರಿಕದ ನಾಲ್ಕನೇ ದೊಡ್ಡ ಉದ್ದಿಮೆಯ ಸಾರಥ್ಯ ಭಾರತಿಐರಿಗೆ ಇಲಿದಂತಾಗಿದೆ. ಗೂಗಲ್‌ಗೆ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ಗೆ ಸತ್ಯ ನಾಡೆಲ್ಲಾ ಮತ್ತು ಅಡೋಬ್‌ಗೆ ಶಾಂತನು ನಾರಾಯಣ್ ಮುಖ್ಯಸ್ಥರಾಗಿದ್ದಾರೆ.

ಉತ್ತರಪ್ರದೇಶ ಮೂಲದ 57 ವರ್ಷದ ಅರವಿಂದ್ ಕೃಷ್ಣ 1990ರಲ್ಲಿ ಐಬಿಎಂ ಸಂಸ್ಥೆ ಸೇರಿ ಅದರ ಕ್ಲೌಡ್ ಮತ್ತು ಕಾಗ್ನೈಟಿವ್ ಸಾಫ್ಟ್​​ವೇರ್ ಸೇವೆಗಳ ವಿಭಾಗಕ್ಕೆ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ಧಾರೆ.