JNU ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ : ತನಿಖೆ ಆರಂಭ – ಬಿಳಿಮಲೆ ಆರೋಪವೇನು?

ದೆಹಲಿಯ ಜೆಎನ್’ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ , ವಿದ್ಯಾರ್ಥಿ , ಉಪನ್ಯಾಸಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಶೀಘ್ರದಲ್ಲಿಯೇ ದೆಹಲಿ ಪೊಲೀಸರು ತನಿಖೆ ಆರಂಭಿಸಲಿದ್ದಾರೆ.

ಹಿಂಸಾಚಾರ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತನಿಖೆಗೆ ಆದೇಶಿಸಿದ್ದು, ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಪ್ರಕರಣ ಕುರಿತ ವರದಿಯನ್ನು ಶೀಘ್ರಗತಿಯಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಕರಣದ ತನಿಖೆಯನ್ನು ಜಂಟಿ ಪೊಲೀಸ್ ಆಯುಕ್ತ, ದೆಹಲಿ ಪೊಲೀಸ್, ಶಾಲಿನಿ ಸಿಂಗ್ ನೇತೃತ್ವದಲ್ಲಿ ನಡೆಯಲಿದೆ. ಈಗಾಗಲೇ ದೆಹಲಿ ಪೊಲೀಸರಲ್ಲಿ ಪ್ರಕಱಣ ಕುರಿತು ದೂರುಗಳು ದಾಖಲಾಗಿದ್ದು, ಶೀಘ್ರದಲ್ಲಿಯೇ ಎಫ್‌ಐಆರ್ ದಾಖಲಿಸಲಾಗುತ್ತದೆ ಎನ್ನಲಾಗಿದೆ.

ಈ ಬಗ್ಗೆ ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿದ JNU ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ ಅವರು , JNU ಕಾಲೇಜಿನ ಪರಿಸ್ಥಿತಿ ಇವತ್ತು ತುಂಬಾ ಹದಗೆಟ್ಟಿದೆ. ಯೂನಿವರ್ಸಿಟಿಯ ಕಾವಲು ಸಿಬ್ಬಂದಿ ಇದ್ದರು ಕೂಡ ಅವರು ಮುಖವಾಡ ಧರಿಸಿದ ವ್ಯಕ್ತಿಗಳನ್ನು ತಡೆದಿಲ್ಲ ಇದರರ್ಥ ಕಾವಲು ಸಿಬ್ಬಂದಿಗಳು ಕೂಡ ಇದರ ಭಾಗಿಯಾಗಿದ್ದಾರೆ ಎಂದು ತಿಳಿದು ಬರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

JNU ಯೂನಿವರ್ಸಿಟಿ ಬಾಗಿಲಿಗೆ ತಲುಪುವ ಬಾಬಾ ಗಂಧರ್ವ ರಸ್ತೆಯಲ್ಲಿನ ಕರೆಂಟ್ ಕೂಡ ತೆಗೆದಿದ್ದಾರೆ. ಕರೆಂಟ್ ತೆಗೆದಿದ್ದರಿಂದ ಒಳಗೆ ಯಾರು ಬರ್ತಾರೆ ಯಾರು ಬರಲ್ಲ ಎಂಬುದು ತಿಳಿಯುವುದು ಕಷ್ಟ ಆಗಾಗಿ ನಮಗೆ ಈಗ ಸಿಸಿ ಕ್ಯಾಮರಾ ದಾಖಲೆ ಕೂಡ ಸಿಗಲ್ಲ. ಆಯಿಷೆ ಎಂಬ ವಿಧ್ಯಾರ್ಥಿ ನಾಯಕ ಮೇಲೆ ಹಲ್ಲೆ ಮಾಡಿದ್ದಾರೆ. ಆ ವಿಧ್ಯಾರ್ಥಿ ಹೇಳುವ ಪ್ರಕಾರ ಇದು ABVP ಗುಂಡಾಗಳು ಮಾಡಿರುವ ಹಲ್ಲೆ ಎಂದು ಸ್ಪಷ್ಟವಾಗಿ ಹೇಳಿದ್ದಾನೆ ಎಂದು ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದ್ದಾರೆ.

ಇನ್ನೂ ಮುಂದೆ ಮಾತನಾಡಿ, ನನ್ನ ಸಹೋದ್ಯೋಗಿಯಾದ ಸುಚಿತ್ರ ಮೇಡಂ ಅವರು ಹಲ್ಲೆಯಾಗುವುದನ್ನು ತಡೆಯಲು ಹೊಗಿ ಅವರಿಗು ಸ್ವಲ್ಪ ಪೆಟ್ಟಾಗಿದೆ ಅವರನ್ನು ಮತ್ತು ಓರ್ವ ವಿಧ್ಯಾರ್ಥಿಯನ್ನು ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಟೀಚರ್ ಅಸೋಸಿಯೇಷನ್ ಅವರು ಭಾರತ್ ಗೇಟ್ ಬಳಿ ಪತ್ರಿಕಾ ಪ್ರಕಟಣೆ ಮಾಡುವುದಕ್ಕೆ ಹೊರಟಿದ್ದಾರೆ ಆದರೆ ಯಾವುದೆ ವ್ಯಕ್ತಿ ಪತ್ರಿಕಾ ಪ್ರಕಟಣೆಯಲ್ಲಿ ಭಾಗವಹಿಸದಂತೆ ಎಲ್ಲಾ ಬಾಗಿಲುಗಳನ್ನು ಮುಚ್ಚಾಲಾಗಿದೆ ಎಂದು ತಿಳಿಸಿದ್ದಾರೆ.

ಹತ್ತು ನಿಮಿಷದ ಹಿಂದೆ ರಿಜಿಸ್ಟರ್ ಸರ್ಕೂಲರ್ ಬಂದಿದ್ದು ಪೋಲಿಸರು ಪರಿಸ್ಥಿತಿಯಲ್ಲಿ ಕಂಟ್ರೋಲ್ ಮಾಡಲು ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಇದು ಅಧಿಕೃತ ವರದಿಯ ಎಂಬುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಹಲ್ಲೆ ಮಾಡಿದವರು ABVP ಸ್ಟೂಡೆಂಟ್ಸ್ JNU ದವರ ಅಥವಾ ಬೇರೆಯವರ?

ಈ ಹಲ್ಲೆ ಮಾಡಿದವರ ಮುಖವಾಡ ಧರಿಸಿ ಬಂದಿದ್ದಾರೆ ಆಗಾಗಿ ಯಾವ ಕಾಲೇಜಿನವರು ಎಂಬುದು ಗೊತ್ತಾಗಿಲ್ಲ, ಅದರಲ್ಲಿ ABVP ಕೂಡ ಇರ್ತಾರೆ, ಗುಂಡಾಗಳು ಕೂಡ ಇರ್ತಾರೆ. ಇದು ವಿಧ್ಯಾರ್ಥಿ ವಿಧ್ಯಾರ್ಥಿಗಳ ನಡುವಿನ ಸಂಘರ್ಷವಾಗಿದ್ದರೆ ಅವರದ್ದೆ ಆದ ಒಂದು ಶಿಸ್ತು ಇರುತ್ತದೆ ಆದರೆ ಈತರದ ದೊಣ್ಣೆ ಹಿಡಿದು ತಲೆ ಹೊಡೆಯುವ ಕೃತ್ಯಕ್ಕೆ ಮುಂದಾಗುವುದಿಲ್ಲ. ಈತರದ ಕೃತ್ಯಕ್ಕೆ ಏನು ಮಾಡ್ತಾರೆ ಎಂದರೆ ABVP ಜೊತೆ ಗುಂಡಾಗಳು ಸೇರಿ ಈ ಹಲ್ಲೆಯನ್ನು ಮಾಡುತ್ತಾರೆ. ಇಂತಹ ಗುಂಡಾಗಳನ್ನು ಯಾರು ಕಳಿಸುತ್ತಾರೆ ಎಂಬುದು ನಾವು ಹೇಳಬೇಕಾಗಿಲ್ಲ ದೇಶಕ್ಕೆ ಗೊತ್ತಿದೆ ಆಗಾಗಿ ಈ ಹಲ್ಲೆಯ ಹಿಂದೆ ಪೂರ್ತಿ ABVP ವಿಧ್ಯಾರ್ಥಿಗಳು ಇದ್ದಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಹಲ್ಲೆ ಮಾಡಿದವರನ್ನು ಹಿಡಿದು ಶಿಕ್ಷಿಸುವುದಕ್ಕೆ ಸಾಧ್ಯವಿಲ್ಲ ಕಾರಣ ಇದೆಲ್ಲವೂ ಯೋಜಿತ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.

ಇದುವರಿಗೆ ಯೂನಿವರ್ಸಿಟಿಯ ಉಪ ಕುಲಪತಿಯದ್ದು ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ ಎಂದು ನ್ಯೂಸ್ ಕನ್ನಡ ವರದಿಗೆ ಭಾನುವಾರ ರಾತ್ರಿ 9:00 ಗಂಟೆ ರಾತ್ರಿಯಲ್ಲಿ ತಿಳಿಸಿದ್ದಾರೆ. ಹಾಗೂ ನನ್ನ 40 ವರ್ಷದ ಸರ್ವಿಸ್ ನಲ್ಲಿ ಈತರಹದ ಕ್ರೂರವಾದ ಆಕ್ರಮಣವನ್ನು ನಾನು ನೋಡಿಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಈ ಹಲ್ಲೆ ನಡೆದಿದೆಯ?

ಶುಲ್ಕ ಹೆಚ್ಚಳದ ಬಗ್ಗೆ JNU ವಿಧ್ಯಾರ್ಥಿಗಳು ತಮ್ಮ ಗಟ್ಟಿ ನಿಲುವನ್ನು ಮೊದಲ ದಿನದಿಂದಲೆ ಹೇಳುತ್ತಾ ಬರುತ್ತಿದ್ದಾರೆ. ಹಾಗೂ ಮಾನವ ಹಕ್ಕುಗಳ ಸಚಿವಾಲಯ ಇದರ ಕುರಿತು ಉಪ ಕುಲಪತಿಗೆ ಪತ್ರ ಕೂಡ ಬರೆದು ತಿಳಿಸಿದ್ದಾರೆ ಅದು ಈಗಿದೆ, ವಿಧ್ಯಾರ್ಥಿಗಳ ಜೊತೆ ಕೂತು ಮಾತಾಡಿ ಈ ಸಮಸ್ಯೆಯನ್ನು ಬಗೆಹರಿಸಿ, ವರ್ಷದ ಮದ್ಯ ಶುಲ್ಕ ಹೆಚ್ಚಳ ಮಾಡಬೇಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಕೆಲವೇ ಕೆಲವು ಶುಲ್ಕವನ್ನು ಕಡಿಮೆ ಮಾಡಿದ್ದಾದರು ವಿಧ್ಯಾರ್ಥಿಗಳ ಬಳಿ ಈ ಕುರಿತು ಮಾತಾಡಿ ಸಮಸ್ಯೆ ಬಗೆಹರಿಸಿಕೊಂಡಿಲ್ಲ. ಹೊಸ ಸೆಮಿಸ್ಟರ್ ಶುರುವಾಗಿದೆ ಅದರ ರೆಜಿಸ್ಟರ್ ಮಾಡಿಸರು ಈಗ ಸುತ್ತೋಲೆ ಬಂದಿದೆ ಈ ಕುರಿತು ವಿಧ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಈಗ ಮತ್ತೆ ಶುಲ್ಕ ಹೆಚ್ಚಳದ ಪ್ರಸ್ತಾಪ ಮಾಡಿದ್ದಾದರು ವಿಧ್ಯಾರ್ಥಿಗಳು ಯಾವುದೆ ಪ್ರತಿಭಟನೆ ಮಾಡದೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದರು ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ತಿಳಿಸಿದ್ದಾರೆ.

ಈ ಅಮಾನುಷವಾದ, ಅಕ್ಷಮ್ಯವಾದ, ಕ್ರೂರವಾದ ಆಕ್ರಮಣವನ್ನು ನಾನು JNU ನಲ್ಲಿ ನೋಡಿಲ್ಲ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದರು.

JNU ವಿಧ್ಯಾರ್ಥಿಗಳ ಮೇಲಿನ ನಿರಂತರ ಹಲ್ಲೆಗಳು ನೋಡಿದರೆ ನಿಮಗೆ ವಿಧ್ಯಾರ್ಥಿಗಳ ಶಕ್ತಿಗಳನ್ನು ಎಲ್ಲಾ ರೀತಿಯಲ್ಲೂ ದಮನ ಮಾಡುಲು ಪ್ರಯತ್ನಿಸುತ್ತಿದ್ದಾರೆ ಅನ್ನಿಸುತ್ತದೆಯೇ?

ಹೌದು, ಯಾವ ರಾಜಕೀಯ ಪಕ್ಷಗಳು ಕೂಡ ಆಡಳಿತ ಪಕ್ಷದ ತಪ್ಪುಗಳನ್ನು ಪ್ರಶ್ನಿಸುತ್ತಿಲ್ಲ ಅದನ್ನು ನೇರವಾಗಿ ಹೇಳುತ್ತಿಲ್ಲ. ಆತರ ನೇರವಾಗಿ ಹೇಳುತ್ತಿದ್ದಾರೆ ಎಂದಾದರೆ ಅದು ವಿಧ್ಯಾರ್ಥಿಗಳು ಮಾತ್ರ. ವಿಧ್ಯಾರ್ಥಿಗಳಿಗೆ ರಾಜಕೀಯ ಬೇಕಾಗಿಲ್ಲ ಆಗಾಗಿ ಅವರು ಸರ್ಕಾರ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳನ್ನು ನೇರವಾಗಿ ಪ್ರಶ್ನಿಸುತ್ತಾರೆ. ಆದರೆ ಬೇರೆ ಯಾವುದೆ ಪಕ್ಷಗಳು ಆಡಳಿತ ಸರ್ಕಾರದ ತಪ್ಪುಗಳನ್ನು ನೇರವಾಗಿ ಹೇಳೊದಿಲ್ಲ ಕಾರಣ ಓಟಿನ ಮೇಲೆ ಪರಿಣಾಮ ಬೀರಬಹುದು ಎಂದು ಯೋಚಿಸಿ ಪ್ರತಿಕ್ರಿಯಿಸುತ್ತಾರೆ.

ವಿಧ್ಯಾರ್ಥಿಗಳ ಪ್ರಶ್ನೆಯನ್ನು ಎದುರಿಸಲು ಸಾಧ್ಯವಾಗದೆ ಅನೇಕ ಯೂನಿವರ್ಸಿಟಿ ಮುಚ್ಚುವ ಮತ್ತು ವಿಧ್ಯಾರ್ಥಿಗಳ ಶಕ್ತಿಯ ದಮನಿಸುವ ಹುನ್ನಾತವಿದು ಎಂದು ತಿಳಿಸಿದ್ದಾರೆ. ಈ ಕೃತ್ಯ ಇಲ್ಲಿ ಆಗಬಾರದಿತ್ತು, ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.