Categories
Breaking News District Political State

ಕಪಾಲ ಬೆಟ್ಟದಲ್ಲಿ ಕಲ್ಲಡ್ಕ ಪ್ರಭಾಕರ್ ಕೃಷ್ಣನ ಪ್ರತಿಮೆ ನಿರ್ಮಿಸಲಿ- ಐವಾನ್ ಡಿಸೋಜ

ಕಪಾಲ ಬೆಟ್ಟದಲ್ಲಿ ಕಲ್ಲಡ್ಕ ಪ್ರಭಾಕರ್ ಬೆಟ್ಟದಲ್ಲಿ ಬೇಕಾದರೆ ಕೃಷ್ಣನ ಪ್ರತಿಮೆ ನಿರ್ಮಿಸಲಿ ಎಂದು ಕಾಂಗ್ರಸ್ ಮುಖಂಡ ಐವಾನ್ ಡಿಸೋಜ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧಾರ್ಮಿಕ ನಾಯಕರ ಪ್ರತಿಮೆ ನಿರ್ಮಿಸಲು ಹಕ್ಕಿದೆ. ಕಲ್ಲಡ್ಕದಲ್ಲಿ ಅವರು ಬೇಕಾದರೆ ಕೃಷ್ಣನ ಪ್ರತಿಮೆ ನಿರ್ಮಿಸಿದರೆ ನಾವು ನೆರವು ನೀಡುತ್ತೇವೆ ಎಂದರು.

ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ಕಾರ‌ ಕಾನೂನಾತ್ಮಾಕವಾಗಿಯೇ ಗೋಮಾಳ ಭೂಮಿ ಮಂಜೂರು ಮಾಡಿದೆ.10 ಎಕರೆ ಭೂಮಿಯನ್ನು 2018 ರ ಫೆಬ್ರವರಿ 2 ರಂದು ಸರ್ಕಾರ ಮಂಜೂರು ಮಾಡಲಾಗಿದೆ. ಧಾರ್ಮಿಕ‌ ಮತ್ತು ಸಾಮಾಜಿಕ ಚಟುವಟಿಕೆ ನಡೆಸಲು ಭೂಮಿ ಮಂಜೂರು ಮಾಡಲಾಗಿತ್ತು. ನ್ಯಾಯವಾಗಿ ಮಂಜೂರಾದ ಭೂಮಿ ವಾಪಸ್ ಪಡೆಯಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು, ಸತ್ಯ ಶೋಧನಾ ಸಮಿತಿ ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದೆ ಎಂದು ವಾಸ್ತವ ಸ್ಥಿತಿ ಅರಿಯಲು ಕ್ರಿಸ್ಚಿಯನ್ ಸಮುದಾಯದ ಮುಖಂಡರ ಸತ್ಯ ಶೋಧನಾ ಸಮಿತಿ ರಚಿಸಲಾಗಿತ್ತು,ಈ ವರದಿಯನ್ನು ಸಿಎಂ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್ ಅಶೋಕ್ ಗೆ ಸಲ್ಲಿಸ್ತೇವೆ.ಕಪಾಲ ಬೆಟ್ಟದಲ್ಲಿ 10 ಎಕರೆ ಭೂಮಿ ಸರ್ಕಾರದಿಂದ ಮಂಜೂರಾಗಿತ್ತು.ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಅಧಿಕೃತವಾಗಿ ಮಂಜೂರು ಮಾಡಲಾಗಿತ್ತು.ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಭೂಮಿ ಮಂಜೂರು ಮಾಡಲಾಗಿದೆ ಎಂದರು.

Categories
Breaking News Health

ಶುದ್ಧ ಗಾಳಿಗಾಗಿ ಯಾವೆಲ್ಲಾ ಗಿಡ ಬೆಳೆಸಬೇಕು..? ಇಲ್ಲಿದೆ ಮಾಹಿತಿ…

ಇತ್ತೀಚೆಗೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಪ್ರತಿನಿತ್ಯ ಮೂಗಿಗೆ ಮಾಸ್ಕ್ ಹಾಕಿಕೊಂಡೆ ಜನ ಓಡಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದಕ್ಕೆ ಪರಿಹಾರ ಏನು..? ಜೀವನ ಪರಿಯಂತ ಮಾಸ್ಕ್ ಹಾಕಿಕೊಂಡೇ ಇರಬೇಕಾ..? ಎಂದು ಪ್ರಶ್ನೆ ಮಾಡೋರಿಗೆ ಇಲ್ಲಿವೆ ಕೆಲ ಗಿಡಗಳನ್ನ ಬೆಳಸಿ ಶುದ್ಧಗಾಳಿ ಪಡೆಯುವ ವಿಧಾನ. ಹಾಗಾದ್ರೆ ಯಾವೆಲ್ಲಾ ಗಿಡ ಬೆಳೆಯಬೇಕು..? ಯಾವೆಲ್ಲಾ ಗಿಡ ನಮ್ಮ ಸುತ್ತಲು ಇರುವುದರಿಂದ ಶುದ್ಧ ಗಾಳಿ ಸಿಗುತ್ತದೆ..? ಅದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಸ್ಪೈಡರ್ ಪ್ಲಾಂಟ್ – ಸ್ಪೈಡರ್ ಪ್ಲಾಂಟ್  ನೋಡಲು ಸ್ಪೈಡರ್ ನಂತೆ ಕಾಣುತ್ತದೆ. ಆಫೀಸ್ ಟೇಬಲ್, ಮನೆ, ಶಾಲೆಯಲ್ಲೂ ಇದನ್ನ ಬೆಳೆಯಬಹುದು. ಒಣಗಿದ ಎಲೆಗಳನ್ನು ಆಗಾಗ ತೆಗೆಯುವದರಿಂದ ಗಿಡ ಹೆಲ್ದಿಯಾಗಿರುತ್ತದೆ. ಕಡಿಮೆ ಬೆಳಕಿನಲ್ಲೇ ಈ ಗಿಡ ಬೆಳೆಯುತ್ತದೆ. 15 ದಿನಕ್ಕೊಂದು ಬಾರಿ ಸೂರ್ಯನ ಬೆಳಕಿಗೆ ಇಟ್ಟರೆ ಸಾಕು.

ಲೊಳೆರಸ – ತ್ವಚೆಯ , ಕೂದಲು, ಆರೋಗ್ಯ ಸಮಸ್ಯೆಗೆ ಬಳಸಲಾಗುತ್ತದೆ. ಇದರಿಂದ ಶುದ್ಧ ಗಾಳಿ ದೊರೆಯುತ್ತದೆ. ಮನೆಯಲ್ಲಿ 2-4 ದಿನಕ್ಕೊಂದು ಬಾರಿ ನೀರು ಹಾಕಿದರೆ ಸಾಕು ಲೊಳೆರಸ ಗಿಡವನ್ನ ಬೆಳಸಬಹುದು.

ಶತಾವರಿ – ಅನೇಕ ಮದ್ದುಗಳನ್ನು ತಯಾರಿಸಲು  ಶತಾವರಿ ಗಿಡವನ್ನು ಬೆಳೆಸಲಾಗುತ್ತದೆ. ಇದು ಗಾಯ ಶುದ್ದೀಕರಿಸುತ್ತದೆ. ಬ್ಯಾಕ್ಟೀರಿಯಾ ಸೋಂಕು ತರುವ ಹುಳುಗಳನ್ನು ಕೊಲ್ಲುತ್ತೆ. ಗಾಳಿಯನ್ನು ಶುದ್ಧವಾಗಿರಿಸುತ್ತದೆ.

ತುಳಸಿ– ಮನೆಯ ಪರಿಸರದ ಗಾಳಿಯನ್ನು ಶುದ್ಧವಾಗಿರಿಸುತ್ತದೆ. ತುಳಸಿ ಇದ್ದರೆ ಸೊಳ್ಳೆ ಕಾಟ ಇರುವುದಿಲ್ಲ. ಮನೆಯ ವಾತಾವರಣ ವಿಸ್ತಾರವಾಗಿದ್ದರೆ ತುಳಸಿ ಅಲ್ಲಿಡಬಹುದು.

ಜೆರ್ಬಿರಾ ಗಿಡ – ಇದನ್ನ ತುಂಬಾ ನೆರಳಿಗಿಂತ ಸ್ವಲ್ಪ ಬಿಸಿಲಿರುವ ಕಡೆಗೆ ಇಟ್ಟರೆ ಸಾಕಾಗುತ್ತದೆ.

ಸ್ನೇಕ್ ಪ್ಲಾಂಟ್ – ಇದಿದ್ದರೆ ಹಾವು ಕೂಡ ಬರುವುದಿಲ್ಲ. ಕಡಿಮೆ ಬೆಳಕು, ಬೆಡ್ ರೂಮ್, ಬಾತ್ ರೂಮ್ ನಲ್ಲೂ ಇಡಬಹುದು.

ಸೇವಂತಿಗೆ ಹೂ – ಚಿಕ್ಕ ಹೂ ಕುಂಡಕ್ಕೆ ಇದನ್ನ ಇಟ್ಟರೆ ಸಾಕು ಸಿಗರೇಟ್ ಧೂಳು ಹೊರದೂಡಿ ಮನೆಯಲ್ಲಿ ಶುದ್ಧ ಗಾಳಿಯನ್ನು ತರುತ್ತೆ.

ಡ್ರ್ಯಾಗನ್ ಗಿಡ – ಡ್ರ್ಯಾಗನ್ ಗಿಡದಿಂದ ಪೇಂಟ್ ವಾಸನೆ, ವಾಹನದ ಹೊಗೆ, ಇನ್ನಿತರ ಕೆಟ್ಟ ಗಾಳಿಯಿಂದ ಮುಕ್ತಿ ಪಡೆಯಬಹುದು. ಇದಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ.

ಒಟ್ಟಿನಲ್ಲಿ ಶುದ್ಧ ಗಾಳಿಯನ್ನು ಸೇವಸಬೇಕು ಎನ್ನುವ ಮಂದಿಗೆ ಇಂತೆಲ್ಲಾ ಗಿಡಗಳು ಶುದ್ಧಗಾಳಿಯನ್ನು ಒದಗಿಸಿ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

Categories
Breaking News District State

ಬುದ್ಧಿವಂತ ಬಾಂಬರ್ : ಆದಿತ್ಯರಾವ್ ಬಾಯಿಬಿಟ್ಟ ರೋಚಕ ಸಂಗತಿಗಳು…

ಬಾಂಬರ್ ಆದಿತ್ಯ ರಾವ್ ಬಂಧನ ವಿಚಾರವಾಗಿ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಕಮಿಷನರ್ ಹರ್ಷ ಸುದ್ದಿಗೋಷ್ಠಿ ನಡೆಸಿ ರೋಚಕ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಮ್ಮ ಬಳಿ ಇದ್ದ ಸಿಸಿ ಟಿವಿ ಫೂಟೇಜ್ ಪೋಟೋ ತಾಳೆ ಹಾಕಿ ನೋಡಿ ಆದಿತ್ಯರಾವ್ ನನ್ನು ವಶಕ್ಕೆ ಪಡೆಯಲಾಗಿದೆ.

“ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣ ಆರೋಪಿ‌ ಆದಿತ್ಯರಾವ್ ಎಂದು ದಸ್ತಗಿರಿ ಮಾಡಿ, ನಿನ್ನೆ ೯ ಗಂಟೆಗೆ ಮಂಗಳೂರಿಗೆ ಕರೆ ತಂದು ಪ್ರಕರಣ ಕುರಿತು ಪ್ರಶ್ನೆ ಮಾಡಿ ತನಿಖೆ ಮಾಡುತ್ತಿದ್ದೇವೆ. ಮೂಲತ: ಉಡುಪಿಯವನು ಈತ. ೩೭ ವರ್ಷ ವಯಸ್ಸು. ಮೈಸೂರುನಲ್ಲು BE ಮೆಕಾನಿಕಲ್ ಪದವಿ, ಹಾಗೂ MBA ಪದವಿ ಪಡೆದಿದ್ದ. ಈತ ಬ್ಯಾಂಕಿಂಗ್ ಹಾಗೂ ಫೈನಾನ್ಸಿಯಲ್, ಇನ್ಸೂರೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾನೆ.”

” ಆದರೆ ಸುದೀರ್ಘ ಕೆಲಸ ಎಲ್ಲೂ ಮಾಡಿಲ್ಲ. ಈತನಿಗೆ ಇಂಡೋರ್ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿ, ಬೆಂಗಳೂರಿನ ಪೀಣ್ಯದಲ್ಲಿ ಕಂಪನಿಯಲ್ಲಿ ಕೆಲಸ ಮಾಡಿದ್ದಾನೆ. ನಂತರ ಪ್ರತಿಷ್ಠಿತ ಕಂಪನಿಗೆ ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಗಿಟ್ಟಿಸಿದ್ದ. ನಂತರ ಗೊತ್ತಾಗುತ್ತದೆ ಅಂತ ಅಲ್ಲಿಯೂ ಕೆಲಸ ಬಿಟ್ಟಿದ್ದಾನೆ. ಸಮಾಜದಲ್ಲಿ ಅವನಿಗೆ ಸಿಗಬೇಕಾದ ಅವಕಾಶ ದೊರೆಯಲಿಲ್ಲ. ವೈಟ್ ಕಾಲರ್ ಕೆಲಸ ಸರಿಯಾಗಿ ಸಿಗಲಿಲ್ಲ ಅಂತ ನಂತರ ಸೆಕ್ಯುರಿಟಿ ಕೆಲಸ ಮಾಡುತ್ತಾನೆ.”

“SDM ಕಾಲೇಜು ಉಜಿರೆ, ಮೂಡಬಿದಿರೆ MIT ಕಾಲೇಜಿನಲ್ಲೂ ಕೆಲಸ ಮಾಡುತ್ತಾನೆ. ನಂತರ ಬಾರ್ ನಲ್ಲಿ ಊಟ ವಸತಿ ಸಿಗುತ್ತೆ ಅಂತ ಕೆಲಸ ಮಾಡುತ್ತಾನೆ. ನಂತರ ಅನೇಕ‌ ಹೋಟೆಲ್ ನಲ್ಲಿ ಕೆಲಸ ಮಾಡಿದ್ದಾನೆ. ಬೆಂಗಳೂರು ವಿಮಾನ ನಿಲ್ದಾಣ ಸೆಕ್ಯುರಿಟಿ ಕೆಲಸ ಇದೆ ಅಂತ ಅಪ್ಲೈ ಮಾಡುತ್ತಾನೆ. ನಂತರ ಮಣಿಪಾಲ್ ಗೆ ಬಂದು ಲೀಗಲ್ ದಾಖಲೆ ಮಾಡಿ, ಬೆಂಗಳೂರಿಗೆ ಹೋದಾಗ ಬೇರೆಯವನಿಗೆ ಕೆಲಸ ನೀಡಿದ್ದರು. ಇದೇ ಕೋಪದಿಂದ ನಿಲ್ದಾಣದಲ್ಲಿ ಬಾಂಬ್ ಇಡಲು ಯೋಚಿಸಿದ್ದಾನೆ.”

“ನಂತರ ವಿಮಾನ ನಿಲ್ದಾಣದ ಕುರಿತು ಸ್ಟಡಿ ಮಾಡುತ್ತಾನೆ. ನಂತರ 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾನದ ಅಧಿಕಾರಿಗಳಿಗೆ ೨ ಬಾರಿ ಬೆದರಿಕೆ ಕರೆ ಮಾಡಿದ್ದಾನೆ. ಆನಂತರ ರೈಲ್ವೆ ಇಲಾಖೆಗೂ ಬೆದರಿಕೆ ಕಾಲ್ ಮಾಡಿದ್ದಾನೆ. ಹೀಗೆ ಒಟ್ಟು ೩ ಪ್ರಕರಣ ಇವನ ವಿರುದ್ಧ ದಾಖಲು ಆಗಿತ್ತು. ಪ್ರಕರಣದಲ್ಲಿ ಜೈಲು ವಾಸ ಈತನಿಗೆ ಆಗುತ್ತದೆ.”

” ಚಿಕ್ಕ ಬಳ್ಳಾಪುರ ಜೈಲಿನಲ್ಲಿ ೧ ವರ್ಷ ಜೈಲು ವಾಸ ಅನುಭವಿಸುತ್ತಾನೆ. ನಂತರ ಜೈಲಿನಿಂದ ಹೊರ ಬಂದು, ವಿಮಾನ ನಿಲ್ದಾಣ ಕ್ಕೆ ಏನಾದರೂ ಮಾಡಬೇಕು ಅಂತ ಯೋಚನೆ ಮಾಡಿದ್ದ. ವಿವಿಧ ರೀತಿಯಲ್ಲಿ ಸ್ಟಡಿ ಮಾಡುತ್ತಾನೆ. ಬಾಂಬ್ ತಯಾರಿಕೆ ಕುರಿತು ಅದ್ಯಯನ ಮಾಡುತ್ತಾನೆ. ಆನ್ ಲೈನ್ ಮೂಲಕ ಹೇಗೆ ಬಾಂಬ್ ತಯಾರಿ ಮಾಡಬಹುದು ಎಂದು ತಿಳಿದುಕೊಳ್ಳುತ್ತಾನೆ. ಬೇರೆ ಬೇರೆ ಸ್ಪೋಟಕ ವಸ್ತುಗಳನ್ನು ತರಿಸಿ ಬಾಂಬ್ ತಯಾರಿಸುತ್ತಾನೆ.”

“ಮಂಗಳೂರು ವಿಮಾನ ನಿಲ್ದಾಣ ಗುರಿಯಾಗಿಸಿಕೊಂಡಿದ್ದ ಈತ, ಮಂಗಳೂರು ಕುಡ್ಲ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳತ್ತಾನೆ. ರಜಾ ಸಂದರ್ಭದಲ್ಲಿ ಇದೇ ಬಾಂಬ್ ತಯಾರಿಕೆ ಕೆಲಸ ಮಾಡುತ್ತಾನೆ.ಅದಾದ ಮೇಲೆ ಎಲ್ಲ ತಯಾರು ಆದ ನಂತರ ಕೊನೆಯ ಭಾಗ ಜೋಡಿಸದೇ ಅನುಮಾನ ಬರಬಹುದು ಅಂತ ಕಾರ್ಕಳದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.ನಂತರ ಮಂಗಳೂರು ಬಂದು ಬಸ್ ಮೂಲಕ ವಿಮಾನ ನಿಲ್ದಾಣ ಜಂಕ್ಷನ್ ತಲುಪಿ, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗಿ ಬಾಂಬ್ ಇಟ್ಟು ಆಟೋ ಮೂಲಕ ಪರಾರಿ ಆಗಿದ್ದಾನೆ. ನಂತರ ಪೊಲೀಸರು ಹಿಡಿಯುತ್ತಾರೆ ಅಂತ ಗೊತ್ತಾಗಿ ಬೆಂಗಳೂರಿಗೆ ಬಸ್ ನಲ್ಲಿ ಹೋಗಿ ಶರಣಾಗಿದ್ದಾನೆ.”

” ಈತ ಟೈಮ್ ಇಟ್ಟು ಸ್ಪೋಟ ಮಾಡುವ ಉದ್ದೇಶ ಹೊಂದಿದ್ದ. ಈತ ಒಬ್ಬ ವ್ಯಕ್ತಿಯೇ ಬಾಂಬ್ ಮಾಡಿದ್ದಾನೆ ಅಂತ ಇಷ್ಟರ ವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ. ಈತನ ಮೇಲೆ ಎರಡು ಗಂಭೀರ ಪ್ರಕರಣ ದಾಖಲಿಸಲಾಗಿದೆ. ಇವತ್ತು ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಆದಿತ್ಯರಾವ್ ವಿರುದ್ಧ ಮೂರು ಹುಸಿಬಾಂಬ್ ಕರೆ ಮಾಡಿರೋ ಕೇಸ್ ದಾಖಲಾಗಿದೆ.”

“ಜೈಲಿನಲ್ಲಿರುವಾಗ ವಿಮುಖನಾಗಿ ಮತ್ತಷ್ಟು ಕೃತ್ಯ ನಡೆಸಲು ಪ್ಲಾನ್ ಮಾಡಿದ್ದನು. ತಂತ್ರಜ್ಞಾನದ ಬಗ್ಗೆ ಅತೀವ ಜ್ಞಾನ ಹೊಂದಿದ್ದ ಆದಿತ್ಯರಾವ್. ಯೂಟ್ಯೂಬ್ ಮೂಲಕ ಬಾಂಬ್ ತಯಾರಿಕೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಹಲವಾರು ತಿಂಗಳುಗಳ ಕಾಲ ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ. ಕುಡ್ಲ ಹೊಟೇಲ್ ನಲ್ಲಿ ಡಿಸೆಂಬರ್ ನಲ್ಲಿ ಕೆಲಸಕ್ಕೆ ಸೇರಿದ್ದ ಆದಿತ್ಯರಾವ್, ವಾರದ ರಜೆಗಳಲ್ಲಿ ಬಾಂಬ್ ತಯಾರಿಸುತ್ತಿದ್ದ.”

“ಮಂಗಳೂರಿನ ಹೊಟೇಲ್ ಜಾಬ್ ಬಿಟ್ಟು ಕಾರ್ಕಳದಲ್ಲಿರುವ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿದ್ದ. ಕಾರ್ಕಳದಿಂದ ಬಜ್ಪೆ ಏರ್ ಪೋರ್ಟ್ ಗೆ ಬಂದಿಳಿದಿದ್ದ. ಸೆಲೂನ್ ಗೂ ಕೂಡಾ ಹೋಗಿ ಬ್ಯಾಗ್ ಇಡಲು ಹೋಗಿದ್ದ , ಮೊದಲೇ ಏರ್ ಪೋರ್ಟ್ ಸುತ್ತಮುತ್ತಲಿನ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ದ. ಬೇರೆ ಬೇರೆ ರಿಕ್ಷಾದಲ್ಲಿ ಕೃತ್ಯ ನಡೆಸಲು ಹೋಗಿದ್ದ ಆದಿತ್ಯರಾವ್, ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಮೂಲಕ ಹೋಗಿದ್ದ. ಆದಿತ್ಯರಾವ್ ವಿರುದ್ಧ ಎರಡು ಗಂಭೀರ ಪ್ರಕರಣಗಳು ದಾಖಲಾಗಿವೆ. ಆದಿತ್ಯರಾವ್ ವಿರುದ್ಧ ಉಗ್ರ ಚಟುವಟಿಕೆ ಸಂಬಂಧಿಸಿ ಬಗ್ಗೆ ಕೇಸ್ ದಾಖಲಾಗಿದೆ. ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು. ಕೋರ್ಟ್ ನಲ್ಲಿ ಕಸ್ಟಡಿಗೆ ನೀಡುವಂತೆ ನಾವು ಮನವಿ ಮಾಡುತ್ತೇವೆ ಎಂದು ಕಮಿಷನರ್ ಹರ್ಷ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.

 

Categories
Breaking News District Political State

ವೈದ್ಯಕೀಯ ಪರಿಷತ್ ಚುನಾವಣೆಯಲ್ಲಿಯೂ ರಾಜಕೀಯ : ಅರ್ಧದಷ್ಟು ಮತಗಳು ನಾಪತ್ತೆ

ರಾಜ್ಯರಾಜಕೀಯದಲ್ಲಿ ಮಾತ್ರ ರಾಜಕೀಯ ಮಾಡಲಾಗುವುದಿಲ್ಲ ಬದಲಿಗೆ ಕರ್ನಾಟಕ ವೈದ್ಯಕೀಯ ಪರಿಷತ್ ಚುನಾವಣೆಯಲ್ಲಿಯೂ ರಾಜಕೀಯ ಮಾಡಲಾಗಿದೆ ಎನ್ನುವ ಆರೋಪ ಸದ್ಯ ವೈದ್ಯಕೀಯ ಲೋಕದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೋಧಕ ಹಾಗು ಬೋಧಕೇತರ ಚುನಾವಣೆಯಲ್ಲಿ ಅರ್ಧದಷ್ಟು ಮತಗಳು ನಾಪತ್ತೆಯಾಗಿವೆ.

ಹೌದು.. ರಾಯಚೂರು ಜಿಲ್ಲೆಯಲ್ಲಿ ಬೋಧಕ ಹಾಗು ಬೋಧಕೇತರ ಎರಡು ವಿಭಾಗದಲ್ಲಿ ಇಂದು ೭ ಗಂಟೆಯಿಂದ ರಿಮ್ಸ್ ನಲ್ಲಿ ಮತದಾನ ಆರಂಭವಾಗಿದೆ. ಇದು ಸಂಜೆ ೬ ಗಂಟೆಯವರೆಗೂ ನಡೆಯಲಿದೆ. ಈ ಚುನಾವಣೆಯಲ್ಲಿ ಬೋಧಕ ವಿಭಾಗಕ್ಕೆ ೩ ಜನ , ಬೋಧಕೇತರು ೪ ಜನ ಸ್ಪರ್ಧಿಸಿದ್ದಾರೆ. ಕಲಬುರಗಿ ವಿಭಾಗದಿಂದ ವೈದ್ಯರು ಮತ ಹಾಕಬಹುದು.

ಆದರೆ ಈ ಚುನಾವಣೆಯಲ್ಲಿ ಬೋಧಕ ವಿಭಾಗದಲ್ಲಿ ಒಟ್ಟು ೩೨೦ ಮತಗಳು ಇದರಲ್ಲಿ ೧೪೩ ಮತಗಳು ಮಾತ್ರ ಇವೆ. ಬೋಧಕೇತರ ವಿಭಾಗದಲ್ಲಿ ೯೩೦ ಮತಗಳು ಅದರಲ್ಲಿ ಕೇವಲ ೪೫೦ ಮತಗಳಿವೆ.

ಇದರಿಂದ ಕುಪಿತರಾದ ವೈದ್ಯರು, ತಮ್ಮ ಅನುಕೂಲಕ್ಕಾಗಿ ಕೆಲವರ ಮತಗಳನ್ನು ತೆಗೆದು ಹಾಕಲಾಗಿದೆ ಎಂಬ ಆರೋಪ ಮಾಡಿದ್ದಾರೆ. ನೋಡೆಲ್ ಅಧಿಕಾರಿಯೊಂದಿಗೆ ಈ ಬಗ್ಗೆ ವಾಗ್ವಾದ ಮಾಡುತ್ತಿದ್ದಾರೆ. ಇದರ ಸತ್ಯಸತ್ಯತೆಯ ಬಗ್ಗೆ ತನಿಖೆಯಾಗಬೇಕಿದೆ.

 

Categories
Breaking News District Political State

‘ವಕೀಲರಿಂದ ಗೂಂಡಾಗಿರಿ’ ಹೇಳಿಕೆ : ಸಿದ್ದರಾಮಯ್ಯ ಕ್ಷಮೆಯಾಚಿಸುವಂತೆ ಪ್ರತಿಭಟನೆ…

ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ನಳಿನಿ ಪರ ವಕಾಲತ್ತು ವಹಿಸದ ವಕೀಲರಿಗೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಅವಹೇಳನಕಾರಿ ಹೇಳಿಕೆ ಆರೋಪ ಮಾಡಿ
ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ಆರೋಪಿಗಳ ಪರ ವಕಾಲತ್ತು ವಹಿಸಿದ ನಿರ್ಧಾರ ಕೈಗೊಂಡಿದ್ದ ಮೈಸೂರು ಜಿಲ್ಲಾ ವಕೀಲರ ಸಂಘದ ವಿರುದ್ಧ ನೆನ್ನೆ ಸಿದ್ದರಾಮಯ್ಯ ವಕೀಲರಿಂದ ಗೂಂಡಾಗಿರಿ ಎಂದು ಹೇಳಿಕೆ‌ ನೀಡಿದ್ದರು.

ದೇಶದ್ರೋಹದ ಆರೋಪದ ಪ್ರಕರಣಗಳಿಗೆ ವಕಾಲತ್ತು ವಹಿಸದಿರುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಇದನ್ನೇ ನಳಿನಿ ವಿಚಾರದಲ್ಲಿ ಪಾಲಿಸಲಾಗಿದೆ. ಇದಕ್ಕೆ  ಸಿದ್ದರಾಮಯ್ಯ ವಕೀಲರಿಂದ ಗೂಂಡಾಗಿರಿ ಎನ್ನುವ ಹೇಳಿಕೆ ನೀಡಿದ್ದು, ಈ ಹೇಳಿಕೆ ಖಂಡಿಸಿ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದಿದ್ದಾರೆ. ಸಿದ್ದರಾಮಯ್ಯ ವಕೀಲರ ಬಹಿರಂಗ ಕ್ಷಮೆಯಾಚಿಸುವಂತೆ ಒತ್ತಾಯ ಹೇಳಿ ಬಂದಿದ್ದು,  ಇಲ್ಲವಾದರೆ ರಾಜ್ಯದಾದ್ಯಂತ ವಕೀಲರಿಂದ ಪ್ರತಿಭಟನೆ‌ ಎಚ್ಚರಿಕೆ ಕೊಡಲಾಗಿದೆ.

ಈ ವೇಳೆ ಮೈಸೂರಿನಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್, ಸಿದ್ದರಾಂಯ್ಯ ಅವರು ಆ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು.
ಕೆಲವು ರಾಜಕೀಯ ವ್ಯಕ್ತಿಗಳ ಚಿತಾವಣೆಯಿಂದ ಈ ಘಟನೆ ನಡೆದಿದೆ. ಇದರಿಂದ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಸಿದ್ದರಾಮಯ್ಯ ಇದ್ದ ಕಾಲದಿಂದಲೂ ದೇಶದ್ರೋಹದ ಪ್ರಕರಣಗಳ ವಕಾಲತ್ತು ವಹಿಸಿಲ್ಲ. ಇದು ಹೊಸದಾದ ಸಂಪ್ರದಾಯ ಅಲ್ಲ. ಪೊಲೀಸರು ಪ್ರಕರಣ ದಾಖಲಿಸಿದ ನಂತರ ನಾವು ನಿರ್ಧಾರ ಕೈಗೊಳ್ಳೋದು. ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಸಂಘದ ಸದಸ್ಯರಾದ ಮಂಜುಳಾ ಮಾನಸ ಅವರನ್ನು ಅಮಾನತು ಮಾಡಲಾಗಿದೆ. ಮಂಜುಳಾ ಮಾನಸ ಅವರಿಂದ ಸಿದ್ದರಾಮಯ್ಯ ಅವರನ್ನು ದಾರಿತಪ್ಪಿಸುವ ಕೆಲಸ ಆಗಿದೆ. ಸಂಘದ ವಿಚಾರಗಳು ಆಂತರಿಕ ವಿಚಾರ. ಅದನ್ನು ಹೊರಗೆ ತೆಗೆದುಕೊಂಡು ಹೋಗಲಾಗಿದೆ. ಸಂಘ ವಿರುದ್ದ ಹೇಳುವ ಕೆಲಸ ಮಾಡಿದ್ದಾರೆ.  ಈ ಎಲ್ಲಾ ಕಾರಣಗಳಿಂದ ಮಂಜುಳಾ ಮಾನಸ ಅವರನ್ನು ಅಮಾನತು ಮಾಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Categories
Breaking News District National State

2020 ಗಣರಾಜ್ಯೋತ್ಸವದ ಎನ್‌ಸಿಸಿ ಪರೇಡ್‌ಗೆ ರಾಜ್ಯದ ಯುವತಿ ಲೀಡ್…

2020 ಗಣರಾಜ್ಯೋತ್ಸವದ ಎನ್‌ಸಿಸಿ ಪರೇಡ್‌ಗೆ ರಾಜ್ಯದ ಯುವತಿ ಲೀಡ್ ಕೊಡಲಿದ್ದಾರೆ.

ಹೌದು… ದೆಹಲಿಯಲ್ಲಿ ಜ. 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ಗೆ ರಾಜ್ಯದ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ಶ್ರೀಷ್ಮಾ ಹೆಗ್ಡೆ ಎನ್‌ಸಿಸಿ ಪರೇಡ್ ಲೀಡರ್ ಆಗಿದ್ದಾರೆ.

ಹರಿಹರ ನಿವಾಸಿ ಶ್ರೀಷ್ಮಾ ಹೆಗ್ಡೆ ಡಾ.ಪ್ರವೀಣ್ ಹೆಗ್ಡೆ- ಬಿಂದು ಹೆಗ್ಡೆ ದಂಪತಿ ಪುತ್ರಿ. ಹರಿಹರ ಸಮೀಪದ ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ.

ದೆಹಲಿಯ ಗಣರಾಜ್ಯೋತ್ಸವದ ಎನ್‌ಸಿಸಿ ಪೆರೇಡ್‌ಗೆ ಆಯ್ಕೆಯಾಗಿದ್ದು, 2020ರ ಗಣರಾಜ್ಯೋತ್ಸವದ ಎನ್‌ಸಿಸಿ ಪರೇಡ್ ಲೀಡ್ ಮಾಡಲಿದ್ದಾರೆ.

2017ದ ದೆಹಲಿ ಗಣರಾಜ್ಯೋತ್ಸದ ಪರೇಡ್‌ನಲ್ಲಿ ಕೊಡಗಿನ ಐಶ್ವರ್ಯಾ ಲೀಡರ್ ಆಗಿದ್ದರು. 3 ವರ್ಷದ ನಂತರ ಮತ್ತೆ ಕರ್ನಾಟಕದ ಎನ್‌ಸಿಸಿ ಯುವತಿಗೆ ದೊರೆತ ಛಾನ್ಸ್ ಸಿಕ್ಕಿದೆ.

 

Categories
Breaking News District State

“ಇದು ಟೆರರಿಸಂ ಅಲ್ಲವೇ ಅಲ್ಲ. ಆದಿತ್ಯರಾವ್ ರನ್ನು ಉಗ್ರರಂತೆ ನಡೆಸಿಕೊಳ್ಳುವುದು ತಪ್ಪು”

“ಇದು ಟೆರರಿಸಂ ಅಲ್ಲವೇ ಅಲ್ಲ. ಆದಿತ್ಯರಾವ್ ಅವರನ್ನು ಉಗ್ರರಂತೆ ನಡೆಸಿಕೊಳ್ಳುವುದು ತಪ್ಪು” ಎಂದು ಪೊಲೀಸ್ ಇಲಾಖೆಗೆ ಬುದ್ದಿ ಮಾತು ಹೇಳಿದ್ದಾರೆ ಕನ್ನಡ ಪತ್ರಿಕೋಧ್ಯಮದ ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್ ಅವರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿಯನ್ನು ಟೆರರಿಸ್ಟ್ ಅಂತೆ ನೋಡಲಾಗುತ್ತಿದೆ. ಬಾಂಬ್ ಇಟ್ಟವರೆಲ್ಲಾ ಟೆರರಿಸ್ಟ್ ಗಳು ಅಲ್ಲ. ಕೆಲಸದಲ್ಲಿ ಒಬ್ಬರ ಮೇಲೆ ಒಬ್ಬರು ಜಗಳ ಆಡುವುದು, ಹೊಡೆದಾಡುವುದು, ಇದನ್ನ ನಾವು ಟೆರರಿಸಂ ಎಂದು ಕರೆಯಲಾಗುವುದಿಲ್ಲ.

ಮಾದ್ಯಮದಲ್ಲಿ ನೋಡುವಾಗ ಆದಿತ್ಯರಾವ್ ನನ್ನು ಪೊಲೀಸರು ಟೆರರಿಸ್ಟ್ ನಂತೆ ನೋಡುವಂತೆ ಕಂಡು ಬರುತ್ತಿದೆ. ವಿಮಾನದಲ್ಲಿ ಕರೆ ತರುವುದು ವಿಮಾನದಲ್ಲಿ ಕರೆದೊಯ್ಯುವುದು. ಇದರ ಅಗತ್ಯ ಇರಲಿಲ್ಲ ಎಂದು ರಂಗನಾಥ್ ಹೇಳಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

Categories
Breaking News District Political State

ಸದ್ಯಕ್ಕಿಲ್ಲ ಕನಕಪುರಕ್ಕೆ ಮೆಡಿಕಲ್ ಕಾಲೇಜು -ಡಿಸಿಎಂ ಅಶ್ವಥ್ ನಾರಾಯಣ್

ಸದ್ಯಕ್ಕೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಸದ್ಯ ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡುತ್ತಿದ್ದೇವೆ‌. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಜೊತೆ ಹೆಲ್ತಿ ಸಿಟಿ ಮಾಡಲಾಗುತ್ತೆ‌‌. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಿರುವುದರಿಂದ ತಾಲೂಕು ಕೇಂದ್ರಕ್ಕೆ ಇಲ್ಲ‌. ಮಂಜೂರಾಗಿರುವ ನಾಲ್ಕು ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದಿದ್ದಾರೆ.

ಮಂಗಳೂರು ಬಾಂಬ್ ವಿಚಾರದಲ್ಲಿ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾಲಿಗೆ ಇದೆ ಅಂತ ಏನು ಬೇಕಾದ್ರು ಮಾತನಾಡಬಹುದು. ಆದ್ರೆ ಅವರು ಆಡುವ ಮಾತಿಗೆ ಮಾನ್ಯತೆ ಇರಬೇಕು ಎಂದು ಕಿಡಿ ಕಾರಿದ್ದಾರೆ.

ಜೊತೆಗೆ ಹೆಚ್‌ಡಿಕೆಗೆ ಡಿಸಿಎಂ ಅಶ್ವಥ್ ನಾರಾಯಣ್ ಟಾಂಗ್ ಕೊಟ್ಟಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರುವವರು ಏನು ಬೇಕಾದ್ರು ಮಾತನಾಡಬಹುದು. ಆದ್ರೆ ಅವರ ಮಾತುಗಳಲ್ಲಿ ಅರ್ಥ ಇರಬೇಕು. ಬಾಂಬ್ ಇಟ್ಟಿರುವವ ಹಿಂದೆ ಹುಸಿ ಬಾಂಬ್ ಕರೆ ಮಾಡಿದ್ದ. ಈ ಬಾರಿ ತಾನೆ ಬಾಂಬ್ ಇಟ್ಟಿದ್ದೀನಿ ಅಂತ ಒಪ್ಪಿಕೊಂಡಿದ್ದಾನೆ. ಆ ಬಗ್ಗೆ ತನಿಖೆ ನಡೆಯುತ್ತಿದ್ದೆ. ಮಾಹಿತಿ ತಿಳಿದುಕೊಂಡು ಮಾತನಾಡಲಿ. ಇನ್ನಮೇಲಾದ್ರು ಜವಬ್ದಾರಿಯಿಂದ ಹೇಳಿಕೆ ಕೊಡಲಿ‌. ಸಮಾಜಘಾತುಕ ಸಂಘಟನೆಗಳನ್ನ ಬ್ಯಾನ್ ಮಾಡ್ತಿವಿ. ಈಗಾಗಲೇ ನಾವು ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದೇವೆ. ಇಂತಹ ಸಂಘಟನೆಗಳನ್ನ ಬೆಳೆಯಲು ಬಿಟ್ಟರೆ ತೊಂದರೆಯಾಗುತ್ತೆ‌. ಇಂತಹ ಸಂಘಟನೆಗಳನ್ನ ಬ್ಯಾನ್ ಮಾಡ್ತಿವಿ ಎಂದು ಬುದ್ಧಿ ಮಾತು ಹೇಳಿದ್ದಾರೆ.

Categories
Breaking News Political Sandalwood State

ತಮ್ಮ ಮದ್ವೆ ವಿಚಾರದ ಊಹಪೋಗಹಳಿಗೆ ತೆರೆ ಎಳೆದ ನಟ ನಿಖಿಲ್‌ ಕುಮಾರಸ್ವಾಮಿ…

ಬಹಳ ಹಿಂದಿನಿಂದಲೂ ಮಾಜಿ ಸಿಎಂ ಪುತ್ರ ನಿಖಿಲ್ ಮದುವೆ ವಿಚಾರ ಸಾಕಷ್ಟು ಗಾಸಿಪ್ ಆಗಿದೆ. ತಮ್ಮ ಮದುವೆ ವಿಚಾರವನ್ನು ಖುದ್ದು ತಾವೇ ಪ್ರಸ್ತಾಪ ಮಾಡುವುದಾಗಿ ಹೇಳಿ ಅನುಮಾನಗಳಿಗೆ ತೆರೆ ಎಳಿದಿದ್ದಾರೆ.

ಹೌದು…  ನಟ. ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಅವರು ತಮ್ಮ ಮದ್ವೆ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಕೆಲ ದಿನಗಳಿಂದ ಕನ್ನಡದ ಖ್ಯಾತ ನಟಿಯೊಂದಿಗೆ ನಿಖಿಲ್‌ ಅವರು ಹಸೆಮಣೆ ಏರಲಿದ್ದಾರೆ ಎನ್ನುವ ಮಾತೊಂದು ಕೇಳಿ ಬರುತಿತ್ತು, ಆದರೆ ಇವೆಲ್ಲ ಊಹ ಪೋಹಗಳಿಗೆ ಖುದ್ದು ನಿಖಿಲ್‌ ಕುಮಾರಸ್ವಾಮಿಯವರು ತೆರೆಎಳೆದಿದ್ದಾರೆ.

ಬುಧವಾರ ನಿಖಿಲ್ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ವೇಳೆ ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದು, ನನ್ನ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಆ ಸುದ್ದಿಗಳೆಲ್ಲ ಸುಳ್ಳು. ಕಳೆದ ಒಂದು ವರ್ಷದಿಂದ ನಮ್ಮ ಮನೆಯಲ್ಲಿ ನನಗೆ ಹುಡುಗಿಯನ್ನು ಹುಡುಕುತ್ತಿದ್ದು, ಸದ್ಯದಲ್ಲೇ ಫೈನಲ್ ಆಗಲಿದೆ. ಆಕೆ ಯಾರು ಅಂಥ ನಾನೇ ಜನತೆಗೆ ಮಾಹಿತಿ ನೀಡುವೆ ಅಂತ ಹೇಳಿದ್ದಾರೆ.

ಆಕೆ ಸರಳವಾದ ಕನ್ನಡದ ಹುಡುಗಿಯಾಗಿದ್ದು, ನಮ್ಮ ಸಂಸ್ಕೃತಿ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದಾಳೆ. ಅಪ್ಪ-ಅಮ್ಮ ನನ್ನ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರವೇ ಅಂತಿಮ ಎಂದು ನಿಖಿಲ್ ತಿಳಿಸಿದ್ದಾರೆ.

Categories
Breaking News Sandalwood

ದ್ರೋಣನಾಗಿ ಘರ್ಜಿಸಲು ಸಜ್ಜಾದ್ರು ಡಾ. ಶಿವಣ್ಣ : ಸದ್ಯದಲ್ಲೇ ಮೇಕಿಂಗ್ ವಿಡಿಯೋ ರಿಲೀಸ್

ಸಮಕಾಲೀನ ಸಾಮಾಜಿಕ ಸಮಸ್ಯೆ ಕುರಿತು ಹಲವು ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದು ಇದಕ್ಕೆ ಹೊಸ ಸೇರ್ಪಡೆ ‘ದ್ರೋಣ’ ಚಿತ್ರ. ಪ್ರಸ್ತುತ ಶಿಕ್ಷಣ ಕ್ಷೇತ್ರದ ಅವ್ಯವಸ್ಥೆ ವಿರುದ್ಧ ಅಸ್ತ್ರ ಝಳಪಿಸಲು ಸಜ್ಜಾದ ಶಿವಣ್ಣನ ‘ದ್ರೋಣ’ ಸಿನಿಮಾದ ಮೇಕಿಂಗ್ ವಿಡಿಯೋ ಸದ್ಯದಲ್ಲೇ ರಿಲೀಸ್ ಆಗಲಿದೆ.

ಹೌದು.. ದ್ರೋಣ.. ದಿ ಮಾಸ್ಟರ್ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸ್ಪೆಷಲ್ ಸಿನಿಮಾ. ಸ್ಯಾಂಡಲ್ ವುಡ್ ಅಂಗಳದಲ್ಲಿ ವಿಶೇಷ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ದಿ ಮಾಸ್ಟರ್ ಅನ್ನೋ ಟ್ಯಾಗ್ ಲೈನ್ ನೊಂದಿಗೆ ಬರ್ತಿರೋ ದ್ರೋಣ.

ಪ್ರಸುಸ್ತ ಸಮಾಜದಲ್ಲಿ, ಶೈಕ್ಷಣಿಕ ಕ್ಷೇತ್ರದ ಅವ್ಯವಸ್ಥೆ, ಸರ್ಕಾರಿ ಶಾಲೆಗಳ ಮೇಲಿರೋ ಕೀಳಿರಿಮೆ, ಮತ್ತು ಅಲ್ಲಾಗುತ್ತಿರುವ ಅನ್ಯಾಯ ಧೋರಣೆ ವಿರುದ್ಧ ಹೋರಾಡೋ ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ವೆರೈಟಿ ಪಾತ್ರಗಳನ್ನ ಮಾಡೋದ್ರಲ್ಲಿ ನಿಪುಣರಾಗಿರೋ ಶಿವಣ್ಣ, ಈ ಸಿನಿಮಾದ ಮೂಲಕ ಮತ್ತೊಮ್ಮೆ ವಿಶಿಷ್ಠಪಾತ್ರದಲ್ಲಿ ಅಭಿಮಾನಿ ದೇವ್ರುಗಳ ಮುಂದೆ ಬರ್ತಿದ್ದಾರೆ.

 

ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ತಮಿಳಿನ ಇನಿಯಾ ನಟಿಸಿದ್ದು, ಸ್ವಾತಿ ಶರ್ಮಾ, ರಂಗಾಯಣ ರಘು, ಬಾಬು ಹೀರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿ ಗೌಡ, ಶ್ರೀನಿವಾಸ್ ಗೌಡ . ಆನಂದ್, ನಾರಾಯಣ ಸ್ವಾಮಿ, ರವಿಕಿಶನ್, ಜಯಶ್ರೀ, ಮಾಸ್ಟರ್ ಮಹೇಂದ್ರ ಸೇರಿದಂತೆ ದೊಡ್ಡ ತಾರಾಬಳಗವಿದೆ. ದ್ರೋಣ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ನಿರ್ದೇಶನವಿದ್ದು, ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಮಹದೇವ.ಬಿ, ಎಸ್.ಬಿ.ಹೆಚ್ (ಸಂಗಮೇಶ್ ಬಿ) ಶೇಷು ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ.

ರಾಮ್ ಕ್ರಿಶ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣವಿರೋ ಈ ಚಿತ್ರದ ಟೀಸರ್ ಈಗಾಗ್ಲೇ ರಿಲೀಸ್ ಆಗಿದ್ದು, ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿದೆ. ಈ ನಡುವೆ ಮೊನ್ನೆಯಷ್ಟೇ ರಿಲೀಸ್ ಮಾಡಿದ್ದ ಮೊದಲ ಲಿರಿಕಲ್ ವಿಡಿಯೋ ರಾಮನ ಹಾಡು ಜನಮನ್ನಣೆಗಳಿಸಿದೆ. ಅಂದ್ಹಾಗೆ, ದ್ರೋಣ ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗಿದ್ದು ಅಫಿಯಲ್ಲಾಗಿ ಪ್ರಚಾರ ಕಾರ್ಯವನ್ನ ಶುರುಮಾಡೋದಕ್ಕೆ ಮುಂದಾಗಿದೆ. ಅದ್ರಂತೆ ಮೊದಲ ಮೇಕಿಂಗ್ ವಿಡಿಯೋನ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿದ್ದು, ಈ ವಾರ ದ್ರೋಣ ಚಿತ್ರದ ಮೊದಲ ಮೇಕಿಂಗ್ ವಿಡಿಯೋವನ್ನ ರಿಲೀಸ್ ಮಾಡಲಿದ್ದು, ಸದ್ಯದಲ್ಲೇ ಆಡಿಯೋ ಲಾಂಚ್ ಮತ್ತು ಟ್ರೈಲರ್ ನ ಲಾಂಚ್ ಮಾಡಿ, ರಿಲೀಸ್ ಡೇಟ್ನ ಅನೌನ್ಸ್ ಮಾಡಲಿದೆಯಂತೆ.