ಅಯ್ಯಪ್ಪನ ಮಾಲಾಧಾರಣೆ ಮಾಡಿದ ಮುಸ್ಲಿಂ ಯುವಕ..ನಿತ್ಯವು ಅಯ್ಯಪ್ಪ ನ ಪೂಜೆ..!

ಜಾತಿ ..! ಜಾತಿ..! ಎಂದು ಬಡಿದಾಡುವ ಈ ದಿನದಲ್ಲಿ ..! ಮುಸ್ಲಿಂ ಯುವಕ ಭಾವೈಕ್ಯತೆ ಸಂಕೇತ ಸಾರಿದ್ದಾರೆ..! ಹಿಂದು ,ಮುಸ್ಲಿಂ ಎಲ್ಲಾ ದೇವರು ಒಂದೆ ಎಂದು ತಿಳಿದು ಮುಸ್ಲಿಂ ಯುವಕ ಅಯ್ಯಪ್ಪ ಮಾಲಾ ಧಾರಣೆ ಮಾಡಿ ನಿತ್ಯವೂ ಈಗ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಅಯ್ಯಪ್ಪ ನ ಜಪ ಮಾಡುತ್ತಿದ್ದಾನೆ.

ಮಹಾರಾಷ್ಟ್ರ ಮೂಲದ ಯುವಕ ಬಾಬಲು ಅಫಸರ್ ಡಾಂಗೆ ಗುರುಮಠಕಲ್ ನ ಲ್ಲಿ ಖಾಸಗಿ ಕಂಪನಿಯಲ್ಲಿ ಕಾರ ಚಾಲಕನಾಗಿ ಕೆಲಸ ಮಾಡುತಿದ್ದು..ಈಗ ಅಯ್ಯಪ್ಪ ಭಕ್ತನಾಗಿದ್ದಾನೆ.ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ವಾಸವಿದ್ದು, ಹಿಂದು ಜನಾಂಗದವರ ಒಡನಾಟ ಹೆಚ್ಚಿಗೆ ಹೊಂದಿದ್ದು,ಹೀಗಾಗಿ ಅಲ್ಲಾಹನ ಭಕ್ತ ಅಯ್ಯಪ್ಪ ನ ಪರಮ ಭಕ್ತನಾಗಿದ್ದಾನೆ.ಅಲ್ಲಾಹನ ಜೊತೆ ಹಿಂದು ದೇವರ ಆರಾಧನೆ ಮಾಡಿಕೊಂಡು ಬರುತ್ತಿದ್ದಾನೆ.

ಬಾಬಲು ಅಫಸರ ಅವರು ಮೊದಲನೇ ಬಾರಿ ಅಯ್ಯಪ್ಪ ಮಾಲಾ ಧಾರಣೆ ಮಾಡಿ 41 ದಿನಗಳ ಕಾಲ ಮಣಿಕಂಠನ ವೃತ ಆಚರಣೆ ಮಾಡಿಕೊಂಡು ಬರುತ್ತಿದ್ದು ಕೋಮು ಸೌಹರ್ದತೆಗೆ ಸಾಕ್ಷಿಯಾಗಿದ್ದಾರೆ‌.ಗುರುಮಠಕಲ್ ಪಟ್ಟಣದಲ್ಲಿರುವ ಅಯ್ಯಪ್ಪನ ಮಂದಿರದಲ್ಲಿ ವಿಶೇಷ ಪೂಜೆ ಮಾಡಿಕೊಂಡು ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದಾರೆ.ಅಫಸರ್ ಈಗ ಅಯ್ಯಪ್ಪ ನಾಗಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ.

Leave a Reply