ನನ್ನ ಕಂಡ್ರೆ ಮೋದಿಗೆ ಭಯ ಎಂಬ ಸಿಎಂ ಹೇಳಿಕೆ “ಜೋಕ್‌ ಆಫ್ ದಿ ಇಯರ್” : ಬಿಎಸ್‌ವೈ

ಬೆಂಗಲೂರು : ಸಿಎಂರದ್ದು ಆಚಾರ ತಿಳಿಯದ ನಾಲಿಗೆ. ಆಚಾರವಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡಬಹುದು ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಬಗ್ಗೆ ಹೇಳಿರುವ ಹೇಳಿಕೆಯೇ ಸಾಕ್ಷಿ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ವೈ, ಪ್ರಧಾನಿ ಮೋದಿಗೆ ನನ್ನನ್ನು ಕಂಡರೆ ಭಯ ಎಂದು ಸಿಎಂ ನೀಡಿರುವ ಹೇಳಿಕೆ ಜೋಕ್‌ ಆಫ್‌ ದಿ ಇಯರ್‌ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಉಪವಾಸವಿದ್ದು ಧರ್ಮಸ್ಥಳಕ್ಕೆ ಹೋಗಿ ಭಕ್ತಿಯಿಂದ ದೇವರ ದರ್ಶನ ಮಾಡಿದ್ದರು. ಆದರೆ ನಮ್ಮ ರಾಜ್ಯದ ಸಿಎಂ ಮೀನು, ಕೋಳಿ ತಿಂದು ಹೋಗಿ ದರ್ಶನ ಮಾಡುತ್ತಾರೆ. ಅಲ್ಲದೆ ಮಾಂಸ ತಿಂದು ದರ್ಶನ ಮಾಡಿದರೆ ತಪ್ಪೇನು ?  ಮಾಂಸ ತಿಂದು ಬರಬೇಡಿ ಎಂದು ದೇವರು ಹೇಳಿದ್ದಾನೆಯೇ ಎಂದು ಬಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅದೇ ನಮ್ಮ ಪ್ರಧಾನಿ ಮತ್ತು ಸಿಎಂಗೆ ಇರುವ ವ್ಯತ್ಯಾಸ ಎಂದಿದ್ದಾರೆ.

 

Leave a Reply